ಹುಮನಾಬಾದ: ಮಾಣಿಕಪ್ರಭುಗಳ 200ನೇ ಜಯಂತಿ ಹಾಗೂ ಜಾತ್ರಾಮಹೋತ್ಸ ಅಂತ್ಯದ ಭಾಗವಾದ ಶೋಭಾ ಯಾತ್ರೆ ಮಾಣಿಕ ನಗರದಲ್ಲಿ ಸಾವಿರಾರೂ ಭಕ್ತರ ಮಧ್ಯೆ ಅದ್ಧೂರಿಯಾಗಿ ಜರುಗಿತು. ರವಿವಾರ ರಾತ್ರಿ ಆರಂಭಗೊಂಡ ಸಂಗೀತ ದರ್ಬಾರ ಸೋಮವಾರ ಬೆಳಗ್ಗೆ ಅತ್ಯಗೊಂಡಿತು. ನಂತರ ದರ್ಬಾರ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ, ಡಾ| ಜ್ಞಾನರಾಜ ಮಾಣಿಕಪ್ರಭುಗಳನ್ನು ಆನೆಮೇಲೆ ರಾಜೋಪಚಾರಗಳ ಮೂಲಕ ಮೆರವಣಿಗೆ ಮಾಡಲಾಯಿತು.
ಒಂಟೆಗಳ ಮೇಲೆ ನಗಾರಿ ಬಾರಿಸುತ್ತಿರುವುದು ಕೂಡ ಆಕರ್ಷಣೆಯ ಕೇಂದ್ರವಾಗಿತ್ತು. ಮಾಣಿಕನಗದ ಪ್ರಮುಖ ರಸ್ತೆಗಳ ಮೂಲಕ ಭವ್ಯ ಶೋಭಾಯಾತ್ರೆ ನಡೆದಿದ್ದು, ವಿವಿಧ ಕಲಾ ತಂಡಗಳು ತಮ್ಮ ಸಂಸ್ಕೃತಿ ಚಟುವಟಿಕೆ ಪ್ರದರ್ಶಿಸಿ ನೋಡುಗರ ಗಮನಸ ಸೆಳೆದವು. ಪುಣೆಯ ಡೊಳ್ಳು ಕುಣ್ಣಿತ ನೋಡಗರ ಆಕರ್ಷಣೆಯಾಗಿತ್ತು.
ಹನುಮಾನ ದೇವಸ್ಥಾನದ ವರೆಗೆ ನಡೆದ ಮೆರಣಿಗೆಉದ್ದಕ್ಕೂ ಪ್ರಭುಗಳಿಗೆ ಜೈಕಾರ ಹಾಕಲಾಯಿತು. ಮಾಣಿಕನಗರದ
ಇತಿಹಾಸದಲ್ಲಿಯೇ ಇದು ಭ್ಯವ ಶೋಭಾ ಯಾತ್ರೆಯಾಗಿದ್ದು, ರಾಜ್ಯ ಸೇರಿದಂತೆ ನೆರೆರಾಜ್ಯಗಳ ಸಾವಿರಾರೂ ಭಕ್ತರ ಪಾಲ್ಗೊಂಡಿದರು.