Advertisement

ಗ್ರಾಮೀಣರೇ ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ; ವೈದ್ಯ ನಟರಾಜ್‌

05:55 PM Apr 21, 2022 | Nagendra Trasi |

ವಿಜಯಪುರ: ಗ್ರಾಮೀಣ ಭಾಗದ ಜನರು ಕೆಲಸದ ಒತ್ತಡದ ನಡುವೆಯೂ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸಿ, ತಪಾಸಣೆ ಮಾಡಿಕೊಳ್ಳುವ ಮೂಲಕ ಆರೋಗ್ಯ ಸಮಸ್ಯೆ ತಿಳಿದು ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸುವೀಕ್ಷಾ ಆಸ್ಪತ್ರೆ ವೈದ್ಯ ನಟರಾಜ್‌ ತಿಳಿಸಿದರು.

Advertisement

ಪಟ್ಟಣ ಸಮೀಪದ ಗೊಡ್ಲುಮುದ್ದೇನಹಳ್ಳಿ ಗ್ರಾಪಂ ವ್ಯಾಪ್ತಿಯ ಎ.ರಂಗನಾಥಪುರ ಗ್ರಾಮದಲ್ಲಿ ಸುವೀಕ್ಷ ಆಸ್ಪತ್ರೆ ಹಾಗೂ ಶ್ರೀ ಚನ್ನರಾಯಸ್ವಾಮಿ ದೇವಾಲಯದ ಟ್ರಸ್ಟ್ ವತಿಯಿಂದ ನಡೆದ ಉಚಿತ ಆರೋಗ್ಯ ತಾಪಸಣೆ ಶಿಬಿರದಲ್ಲಿ ಮಾತನಾಡಿ, ಇಂದಿನ ಆಹಾರ ಪದ್ಧತಿ, ಮಾನಸಿಕ ಒತ್ತಡ ಜೀವನ ಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಇದರಿಂದ ಮಧುಮೇಹ ರಕ್ತದೊತ್ತಡದಂತಹ ಕಾಯಿಲೆಗೆ ಜನರು ಬಹುಬೇಗು ತುತ್ತಾಗುತ್ತಿದ್ದಾರೆ.

ಆರೋಗ್ಯ ತಪಾಸಣೆಗೆ ಒಳಗಾದರೆ ವೈದ್ಯರು ಕಾಯಿಲೆ ಇದೆ ಎಂದು ಹೇಳಿ ಬಿಡುತ್ತಾರೋ ಎಂಬ ಭಯದಿಂದ ಬಹಳಷ್ಟು ಜನರು ತಪಾಸಣೆಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ರೋಗ ಉಲ್ಬಣಿಸಿದ ನಂತರ ಮರುಗುವ ಪರಿಸ್ಥಿತಿ ಉಂಟಾಗುತ್ತಿದೆ. ಇದು ಮನುಷ್ಯನ ಆರೋಗ್ಯದ ಬೆಳವಣಿಗೆ ಮೇಲೆ ದುಷ್ಟರಿಣಾಮ ಬೀರುತ್ತದೆ ಎಂದರು.

ತರಕಾರಿ, ಹಣ್ಣು ಸೇವಿಸಿ: ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಕನಕ ಸ್ವರೂಪ ನಟರಾಜ್‌ ಮಾತ ನಾಡಿ, ಪ್ರತಿಯೊಬ್ಬರೂ ಭಯ ತೊರೆದು ವೈದ್ಯ ಕೀಯ ತಪಾಸಣೆ ಮಾಡಿಸಿಕೊಂಡು ರೋಗ ಇದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯ ಪೂರ್ಣ ಜೀವನ ನಡೆಸಬೇಕು. ಇಂದಿನ ಜನರು ಅನಾರೋಗ್ಯಕರವೆಂದು ತಿಳಿದಿರುವ ವಸ್ತುಗಳನ್ನು ಪದೇ ಪದೆ ಬಳಸುವುದರಿಂದ ಆರೋಗ್ಯದ ಸಮಸ್ಯೆ ಎದುರಾಗಬಹುದು. ಇದನ್ನು ಹೊರತುಪಡಿಸಿ ಪ್ರತಿಯೊಬ್ಬರೂ ಸುರಕ್ಷಿತವಾಗಿರುವಂತಹ ತರಕಾರಿ, ಹಣ್ಣು, ಧಾನ್ಯ ಹೆಚ್ಚು ಬಳಸಬೇಕು ಎಂದರು.

ಆಹಾರ ಪದ್ಧತಿ ಬದಲಿಸಿ: ಗ್ರಾಮದ ಮುಖಂಡ ಎಂ.ವೆಂಕಟೇಶ್‌ ಮಾತನಾಡಿ, ಮಧುಮೇಹ ಇಂದು ಪ್ರತಿಯೊಬ್ಬರಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಮಧುಮೇಹ ಬಂದಿದೆ ಎಂದು ಭಯ ಪಡದೆ ನಿಮ್ಮ ದಿನನಿತ್ಯದ ಆಹಾರ ಸೇವೆನೆ ಬದಲಿಸಿಕೊಳ್ಳಬೇಕು. ಪ್ರತಿದಿನವು ಯಾವೆಲ್ಲ ಆಹಾರ ಸೇವಿಸಬೇಕು. ಯಾವ ಹಣ್ಣು, ತರಕಾರಿ ತಿನ್ನಬೇಕು ಎನ್ನುವುದು ತಿಳಿಯಬೇಕುಂದರು.

Advertisement

ಗರ್ಭಿಣಿಯರಿಗೆ ಉಚಿತ ತಪಾಸಣೆ: ಮನೆಯಲೇ ತಪಾಸಣೆ ಮಾಡಿಕೊಳ್ಳುವುದನ್ನು ಬಿಟ್ಟು ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ತಜ್ಞರಿಂದ ತಪಾಸಣೆ ಮಾಡಿಸಿ ಕೊಳ್ಳುವುದು ಉತ್ತಮ. ಶಿಬಿರದಲ್ಲಿ ಭಾಗವಾಹಿಸಿದ ಎಲ್ಲ ಗರ್ಭಿಣಿಯರಿಗೆ ಪ್ರತಿ ತಿಂಗಳು ಸುವೀಕ್ಷ ಆಸ್ಪತ್ರೆ ವೈದ್ಯರಿಂದ ಉಚಿತ ತಪಾಸಣೆ ಮಾಡಲಾಗುವುದು ಎಂದು ತಿಳಿಸಿದರು. ಡಾ.ಕವಿತಾ, ಗ್ರಾಪಂ ಅಧ್ಯಕ್ಷೆ ಆನಂದಮ್ಮ, ಸದಸ್ಯ ಕೃಷ್ಣಮೂರ್ತಿ, ಜಯಮ್ಮ ಚನ್ನಪ್ಪ, ಗ್ರಾಪಂ ಮಾಜಿ ಉಪಾಧ್ಯಕ್ಷ ರಾಮಚಂದ್ರ, ಮಾಜಿ ಸದಸ್ಯ ಕೆ.ವಿ. ಕೃಷ್ಣಪ್ಪ, ಚಿಕ್ಕಚನ್ನರಾಯಪ್ಪ, ಕುಮಾರಗೌಡ, ಎಂ.ರಮೇಶ್‌, ಎಂ.ಲೋಕೇಶ್‌, ಎಂ. ರವಿಕುಮಾರ್‌, ವಕೀಲ ರವಿಪ್ರಕಾಶ್‌, ಮುರಳಿ, ಕೆ. ನರಸಿಂಹಮೂರ್ತಿ, ವಿ. ಕುಮಾರ್‌, ದೇವಾರಾಜು, ಮಂಜುನಾಥ್‌ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next