Advertisement

ಸ್ನಾಯುಗಳ ದೃಢತೆಗೆ ಫೋಮ್‌ ರೋಲರ್‌

09:28 PM Oct 21, 2019 | mahesh |

ವ್ಯಾಯಾಮದ ಕಸರತ್ತಿಗೆ ಫೋಮ್‌ ರೋಲರ್‌ ಸಾಧನ ಹೆಚ್ಚು ಪ್ರಸಿದ್ಧವಾಗಿದೆ. ಮೂರರಿಂದ ನಾಲ್ಕು ಇಂಚುಗಳ ಅಗಲ, 36 ಇಂಚು ಉದ್ದದ ದಿಂಬಿನಂತೆ ಕಾಣುವ ಇದು ಸ್ನಾಯುಗಳಿಗೆ ಚೈತನ್ಯದಾಯಕ ವ್ಯಾಯಾಮವಾಗಿದೆ. ಫಿಟ್‌ನೆಸ್‌ ಕಾಯ್ದುಕೊಳ್ಳಬಯಸುವವರಿಗೆ ಈ ಫೋಮ್‌ ರೋಲರ್‌ ಸಾಧನ ಉತ್ತಮ.

Advertisement

ಫೋಮ್‌ ರೋಲರ್‌ನ ಪ್ರಯೋಜನಗಳು
·  ದೇಹದ ಮೊಣಕಾಲು, ತೊಡೆ, ಪೃಷ್ಠ, ಬೆನ್ನು, ಕತ್ತು ಎಲ್ಲ ಭಾಗಗಳಿಗೂ ರೋಲರ್‌ನಿಂದ ವ್ಯಾಯಾಮ ನೀಡಬಹುದು. ಇದನ್ನು ಬಳಸಿ ವ್ಯಾಯಾಮ ಮಾಡುವಾಗ, ಕೊಬ್ಬು ಸಂಗ್ರಹವಾಗಿರುವ ಭಾಗಗಳಿಗೆ ಈ ವ್ಯಾಯಾಮ ಉತ್ತಮ ಮಸಾಜ್‌ ನೀಡುತ್ತದೆ. ಲಟ್ಟಣಿಗೆಯಲ್ಲಿ ಚಪಾತಿಯನ್ನು ಚಪ್ಪಟೆ ಮಾಡಿದಂತಹ ಅನುಭವ ಈ ವ್ಯಾಯಾಮದಲ್ಲಿ ಸಿಗುವುದು.

·  ಸ್ನಾಯು ಒತ್ತಡ ಕಡಿಮೆ ಮಾಡುವ ಇದನ್ನು ಬಳಸಿ ವ್ಯಾಯಾಮವನ್ನು ಅತ್ಲೀಟ್‌ಗಳು, ಕ್ರೀಡಾಪಟುಗಳು ದಶಕಗಳ ಹಿಂದೆಯೇ ಮಾಡುತ್ತಿದ್ದರು. ಈಗ ಎಲ್ಲರೂ ಈ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

·  ಸ್ನಾಯುಗಳ ಮೇಲೆ ದೇಹದ ಭಾರವನ್ನು ರೋಲರ್‌ ಬೀಳಿಸುತ್ತದೆ. ಅದರ ಚಲನೆಯು ಸ್ನಾಯುಗಳ ಚಲನೆಯನ್ನು ಸರಾಗಗೊಳಿಸುತ್ತದೆ. ಹೀಗಾಗಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ.

·  ಸ್ನಾಯುಗಳ ಬಲ ಹೆಚ್ಚಿಸುತ್ತದೆ. ಸ್ನಾಯು ಜಾಲಗಳಿಗೆ ಉತ್ತಮ ವ್ಯಾಯಾಮ ನೀಡುತ್ತದೆ. ಅಲ್ಲದೆ, ಸ್ನಾಯುಗಳಲ್ಲಿ ಸ್ಥಗಿತತೆ ಉಂಟಾಗಿದ್ದರೆ, ಆ ತೊಂದರೆಗಳನ್ನು ಪರಿಹರಿಸುತ್ತದೆ.

Advertisement

·  ಕಾಲುಗಳಿಗೆ ವ್ಯಾಯಾಮ ಮಾಡುವಾಗ ಒಂದು ಕಾಲಿನ ಮೇಲೆ ಇನ್ನೊಂದು ಕಾಲಿನ ಭಾರವನ್ನು ಬಿಡಬೇಕು. ನಂತರ ರೋಲರ್‌ ಚಲನೆಯನ್ನು ಮಾಡಬೇಕು. ಆಗ ಮಾತ್ರ ಸ್ನಾಯುಗಳಿಗೆ ಪರಿಪೂರ್ಣ ವ್ಯಾಯಾಮ ದೊರೆಯುತ್ತದೆ. ಇದು ತೊಡೆಗಳಿಗೂ ಅನ್ವಯಿಸುತ್ತದೆ. ಶಿಲೆಯನ್ನು ಕಡೆಯುವಂತೆ ರೋಲರ್‌ ನಮ್ಮ ದೇಹದ ಸ್ನಾಯುಗಳನ್ನು ಕಡೆಯುತ್ತದೆ. ಒಟ್ಟಿನಲ್ಲಿ ಫೋಮ್‌ ರೋಲರ್‌ ಬಳಸಿ ಸರಳ ವ್ಯಾಯಾಮ ಮಾಡಬಹುದು.

ಮಾರ್ಗದರ್ಶನ ಪಡೆದು ಈ ವ್ಯಾಯಾಮ ಮಾಡುವುದು ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next