Advertisement

ಸಂಪತ್ತು ಸಂಗ್ರಹ: ಸರಕಾರಿ ಆಸ್ತಿಗಳಿಂದ 6 ಲಕ್ಷ ಕೋ.ರೂ. ಗಳಿಕೆ ಯೋಜನೆ

12:35 AM Aug 24, 2021 | Team Udayavani |

ಹೊಸದಿಲ್ಲಿ: ಕೇಂದ್ರ ಸರ ಕಾರವು 2025ರ ಒಳಗೆ 6 ಲಕ್ಷ ಕೋಟಿ ರೂ. ಸಂಪತ್ತು ಕ್ರೋಡೀಕರಿಸುವ ಯೋಜನೆಯನ್ನು ಸೋಮ ವಾರ ಪ್ರಕಟಿಸಿದೆ. ಅದಕ್ಕಾಗಿ ಸರಕಾರಿ ಸ್ವಾಮ್ಯದ ಬಂದರು, ವಿಮಾನ ನಿಲ್ದಾಣ, ಹೆದ್ದಾರಿಗಳ ಮೂಲಕ ಹಣ ಸಂಗ್ರಹಿ ಸುವ “ರಾಷ್ಟ್ರೀಯ ಸಂಪತ್ತು ಕ್ರೋಡೀಕರಣ ಯೋಜನೆ’ (ಎನ್‌ಎಂಪಿ) ಜಾರಿ ಮಾಡಲಾಗುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಇದರಡಿ ರೈಲು, ವಿಮಾನ ನಿಲ್ದಾಣಗಳು ಮತ್ತು ಕಲ್ಲಿದ್ದಲು ಗಣಿ ಎಂಬ ಮೂರು ಪ್ರಮುಖ ವಿಭಾಗಗಳನ್ನು ಮಾಡ ಲಾಗಿದೆ. ಯೋಜನೆಯಡಿ ಸೊತ್ತು ಗಳನ್ನು ಮಾರಾಟ ಮಾಡುವುದಿಲ್ಲ. ಕೇಂದ್ರದ ಸ್ವಾಮಿತ್ವ ದಲ್ಲಿರುವ ಜಮೀನು, ಆಸ್ತಿ ಗಳನ್ನು ಬಳಕೆ ಮಾಡಿ, ಸಂಪತ್ತು ಸಂಗ್ರಹಿಸಲಾಗುತ್ತದೆ ಎಂದು ನಿರ್ಮಲಾ ವಿವರಿಸಿದ್ದಾರೆ.

ನಿಗದಿತ ಅವಧಿಗೆ ನಿರ್ದಿಷ್ಟ ಆಸ್ತಿಗಳನ್ನು ಖಾಸಗಿಗೆ ನೀಡಲಾಗುತ್ತದೆ. ಆ ಬಳಿಕ ಖಾಸಗಿ ಯವರು ಅದನ್ನು ಸರಕಾರಕ್ಕೆ ಮರಳಿಸಬೇಕು. ಯೋಜನೆಯಿಂದ ಅರ್ಥ ವ್ಯವಸ್ಥೆಗೆ ಹೊಸಶಕ್ತಿ ಬರಲಿದೆ ಎಂದು ಸರಕಾರ ಹೇಳಿದೆ.

ಯೋಜನೆಯಡಿ ಗುರುತು ಮಾಡಲಾಗಿರುವ ರಾಷ್ಟ್ರೀಯ ಹೆದ್ದಾರಿಗಳ ಮೂಲಕ 1.6 ಲಕ್ಷ ಕೋಟಿ ರೂ. ಸಂಗ್ರಹಿಸುವ ಗುರಿ ಸರಕಾರದ ಮುಂದೆ ಇದೆ. ಎರಡನೆಯ ಸ್ಥಾನದಲ್ಲಿ ರೈಲ್ವೇ ಇದ್ದು, 400 ನಿಲ್ದಾಣಗಳು, 150 ರೈಲುಗಳ ಮೂಲಕ 1.5 ಲಕ್ಷ ಕೋಟಿ ರೂ. ಸಂಗ್ರಹಿಸಲಾಗುತ್ತದೆ. ಈ ಹಿಂದೆ ಬಜೆಟ್‌ನಲ್ಲಿ ಪ್ರಕಟಿಸಲಾಗಿದ್ದಂತೆ ಮೂಲ ಸೌಕರ್ಯ ಹೂಡಿಕೆ ಟ್ರಸ್ಟ್‌ (ಐnvಐಖs) ಮೂಲಕ ಮೂಲ ಸೌಕರ್ಯ ಯೋಜನೆಗಳಿಗೆ ಖಾಸಗಿ- ಸರಕಾರಿ ಸಹಭಾಗಿತ್ವದಲ್ಲಿ ಅವಕಾಶ ನೀಡಲಾಗುತ್ತದೆ.

ವಿದ್ಯುತ್‌ ಸರಬರಾಜು ಲೈನ್‌ಗಳು, ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಹಿಂದುಸ್ಥಾನ್‌ ಪೆಟ್ರೋ ಕೆಮಿಕಲ್ಸ್‌ನ ತೈಲ ಸಾಗಣೆ ಪೈಪ್‌ಲೈನ್‌ಗಳು, ಸ್ಟೇಡಿಯಂ ಗಳು, ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ಮೂಲಕವೂ ಸಂಪತ್ತು ಕ್ರೋಡೀಕರಣದ ಮಹತ್ವಾಕಾಂಕ್ಷಿ ಯೋಜನೆಯನ್ನು ಕೇಂದ್ರ ವಿತ್ತ ಸಚಿವೆ ಪ್ರಕಟಿಸಿದ್ದಾರೆ.

Advertisement

ಹೇಗೆ ಕ್ರೋಡೀಕರಣ? :

26,700 ಕಿ.ಮೀ.

ಹೆದ್ದಾರಿಗಳು : 1.6

ಲಕ್ಷ ಕೋ. ರೂ.

ರೈಲ್ವೇ : 400 ನಿಲ್ದಾಣ

150 ರೈಲು

1.15 ಲಕ್ಷ ಕೋ. ರೂ.

ವಿದ್ಯುತ್‌ ಸರಬರಾಜು ಲೈನ್‌ :

42,300 ಸರ್ಕೀಟ್‌ ಲೈನ್‌

0.67 ಲಕ್ಷ ಕೋಟಿ ರೂ.

ಗೈಲ್‌ ಪೈಪ್‌ಲೈನ್‌ :

8,000 ಕಿ.ಮೀ.

0.24 ಲಕ್ಷ ಕೋಟಿ ರೂ.

 ವಿದ್ಯುತ್‌ ಉತ್ಪಾದನೆ :

5,000 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ

0.32 ಲಕ್ಷ ಕೋ.ರೂ.

ತೈಲ ಪೈಪ್‌ಲೈನ್‌ :

4,000- ಕಿ.ಮೀ.

ದೂರಸಂಪರ್ಕ :

ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌ ಟವರ್‌

0.39 ಲಕ್ಷ ಕೋ. ರೂ.

ಕಲ್ಲಿದ್ದಲು ಗಣಿ :

160 ಯೋಜನೆಗಳು

0.32 ಲಕ್ಷ ಕೋಟಿ ರೂ.

ವಿಮಾನ ನಿಲ್ದಾಣ, ಬಂದರು :

21 ಎಎಐ ವಿ.ನಿ  31

ಬಂದರು

0.34 ಲಕ್ಷ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next