Advertisement

ಕಲ್ಲಡ್ಕ: 6 ಲೇನ್‌ ಫ್ಲೈಓವರ್‌ಗೆ ಪೂರ್ವಭಾವಿ ಪ್ರಕ್ರಿಯೆ ಆರಂಭ

12:32 AM Sep 21, 2021 | Team Udayavani |

ಬಂಟ್ವಾಳ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡು – ಅಡ್ಡಹೊಳೆ ಚತುಷ್ಪಥ (63 ಕಿ.ಮೀ.) ಕಾಮಗಾರಿ ಹಂತ ಹಂತವಾಗಿ ಪುನರಾರಂಭಗೊಳ್ಳುತ್ತಿದ್ದು, ಕಲ್ಲಡ್ಕದಲ್ಲಿ 6 ಲೇನ್‌ ಫ್ಲೈಓವರ್‌ ನಿರ್ಮಾಣಕ್ಕೆ ತಯಾರಿ (ಪ್ರಿ ಕನ್‌ಸ್ಟ್ರಕ್ಷನ್‌ ಆ್ಯಕ್ಟಿವಿಟಿ) ಆರಂಭಗೊಂಡಿದೆ.

Advertisement

ಬಿ.ಸಿ.ರೋಡಿನಿಂದ ಪೆರಿಯಶಾಂತಿ ವರೆಗಿನ 48 ಕಿ.ಮೀ. ಕಾಮಗಾರಿಯನ್ನು ಹೈದರಾಬಾದ್‌ನ ಕೆಎನ್‌ಆರ್‌ ಕನ್‌ಸ್ಟ್ರಕ್ಷನ್ಸ್‌ ಲಿಮಿಟೆಡ್‌ 1,100.88 ಕೋ.ರೂ.ಗಳಿಗೆ ವಹಿಸಿಕೊಂಡಿದೆ. ಕಲ್ಲಡ್ಕದಲ್ಲಿ ಮಾತ್ರ 6 ಲೇನ್‌ಗಳ ಫ್ಲೈಓವರ್‌ ಇರಲಿದೆ.

ಉದನೆಯಲ್ಲಿ ಯಂತ್ರಗಳ ಅಳವಡಿಕೆ:

ಪೆರಿಯಶಾಂತಿಯಿಂದ ಅಡ್ಡಹೊಳೆ ವರೆಗಿನ 15 ಕಿ.ಮೀ. ಕಾಮಗಾರಿಯನ್ನು 317 ಕೋ.ರೂ.ಗಳಿಗೆ ಮಹಾರಾಷ್ಟ್ರದ ಶ್ರೀ ಎಸ್‌.ಎಂ. ಔತಾಡೆ ಪ್ರೈ.ಲಿ. ಕಂಪೆನಿ ನಿರ್ವಹಿಸಲಿದೆ. ಈಗಾಗಲೇ ಶಿರಾಡಿಯ ಉದನೆಯಲ್ಲಿ ಯಂತ್ರಗಳ ಅನುಷ್ಠಾನ ಕಾರ್ಯ ಆರಂಭಿಸಿದೆ.

ಕಲ್ಲಡ್ಕದಲ್ಲಿ ಯಾವ ರೀತಿಯಲ್ಲಿ ಹೆದ್ದಾರಿ ಸಾಗಲಿದೆ ಎಂಬ ಕುರಿತು ಗೊಂದಲಗಳಿದ್ದು, ಪೇಟೆಯ ಮೂಲಕವೇ ಚತುಷ್ಪಥ ಸಾಗಲಿದೆ ಎಂದು ಒಮ್ಮೆ ಹೇಳಿದರೆ, ಮತ್ತೂಮ್ಮೆ ಬೈಪಾಸ್‌ ನಿರ್ಮಾಣವಾಗಲಿದೆ ಎನ್ನಲಾಗಿತ್ತು. ರಾ.ಹೆ. ಪ್ರಾಧಿಕಾರವು ಫ್ಲೈಓವರ್‌ ನಿರ್ಮಾಣವನ್ನೇ ಅಂತಿಮಗೊಳಿಸಿತ್ತು.

Advertisement

ಅಳಿಸಿ ಹೋದ ಮಾರ್ಕಿಂಗ್‌! :

ಹಲವು ಸಮಯದ ಹಿಂದೆಯೇ ಕಲ್ಲಡ್ಕದ ಕೆ.ಸಿ.ರೋಡ್‌ನಿಂದ ಕುದ್ರೆಬೆಟ್ಟು ವರೆಗೆ ಫ್ಲೆ$çಓವರ್‌ಗೆ ಮಾರ್ಕಿಂಗ್‌ ಮಾಡಲಾಗಿದ್ದು, ಆರಂಭ – ಅಂತ್ಯದಲ್ಲಿ ಫ್ಲೆ$çಓವರ್‌ ಸ್ಟಾರ್ಟ್ಸ್- ಫ್ಲೆ$çಓವರ್‌ ಎಂಡ್ಸ್‌ ಎಂದು ಬರೆಯಲಾಗಿತ್ತು. ಆದರೆ ಡಾಮರು ಕಾಮಗಾರಿ ವೇಳೆ ಅದು ಮುಚ್ಚಿ ಹೋಗಿದೆ.

ಭೂತಾಂತ್ರಿಕ ಪರಿಶೀಲನೆ :

ಫ್ಲೈಓವರ್‌ ನಿರ್ಮಾಣದ ಪೂರ್ವಭಾವಿಯಾಗಿ ಪೂರ್ಲಿಪಾಡಿಯಿಂದ ಕೆ.ಸಿ.ರೋಡ್‌ ವರೆಗೆ ಭೂತಾಂತ್ರಿಕ ಪರಿಶೀಲನೆ (ಜಿಯೋಟೆಕ್ನಿಕಲ್‌ ಇನ್‌ವೆಸ್ಟಿಗೇಶನ್‌) ಆರಂಭಗೊಂಡಿದೆ. ಬೃಹತ್‌ ಪಿಲ್ಲರ್‌ಗಳ ನಿರ್ಮಾಣಕ್ಕಾಗಿ ಭೂಮಿಯ ಕಲ್ಲು, ಮಣ್ಣಿನ ಪರೀಕ್ಷಾ ಕಾರ್ಯವು ಯಂತ್ರೋಪಕರಣಗಳ ಮೂಲಕ ನಡೆಯುತ್ತಿದೆ.

ಪ್ರಸ್ತುತ ಕಾಮಗಾರಿಯ ಪೂರ್ವಭಾವಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಎಲ್ಲೂ ಕಾಮಗಾರಿ ಆರಂಭಗೊಂಡಿಲ್ಲ. ಅಪಾಯಿಂಟೆಡ್‌ ದಿನಾಂಕ ಅಂತಿಮಗೊಂಡ ಬಳಿಕವೇ 63 ಕಿ.ಮೀ. ಹೆದ್ದಾರಿಯ ಎಲ್ಲ ಕಾಮಗಾರಿಗಳು ಒಂದೇ ಸಮಯದಲ್ಲಿ ಆರಂಭಗೊಳ್ಳಲಿದೆ. ಸದ್ಯ ದಿನಾಂಕ ಪ್ರಕಟವಾಗಿಲ್ಲ.  – ಶಿಶುಮೋಹನ್‌, ಯೋಜನಾ ನಿರ್ದೇಶಕರು,  ಎನ್‌ಎಚ್‌ಎಐ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next