Advertisement
ನವಮಂಗಳೂರು ಬಂದರು ಮಂಡಳಿಯು ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ತೋರಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸ್ಥಳೀಯ ಹಲವು ಕಂಪೆನಿಗಳ ನೆರವು ನೀಡುವ ನಿರೀಕ್ಷೆಯಿದೆ. ಈ ಸಂಬಂಧ ಮುಂದಿನ 3 ತಿಂಗಳೊಳಗೆ ಇಂಡಿಯನ್ ಪೋರ್ಟ್ ರೈಲ್ ಆ್ಯಂಡ್ ರೋಪ್‌ವೇ ಕಾರ್ಪೋರೆಷನ್ ಲಿ. (ಐಪಿಆರ್‌ಸಿಎಲ್) ವತಿಯಿಂದ ಡಿಪಿಆರ್ ಸಿದ್ಧಪಡಿಸಲು ಉದ್ದೇಶಿಸಲಾಗಿದೆ.
Related Articles
Advertisement
ಇದನ್ನೂ ಓದಿ:ಪಿಲಿಕುಳದ ಹನುಮಾನ್ ಲಂಗೂರ್ “ರಾಜು’ ಸಾವು
ಸರಕು ಸಾಗಾಟಕ್ಕೆ ಅನುಕೂಲ“ಆರು ಪಥಗಳ ಕೂಳೂರು ಸೇತುವೆ ಕಾರ್ಯಗತವಾದರೆ ಈ ಭಾಗದಲ್ಲಿ ಸರಕು ಸಾಗಾಟದ ತೊಂದರೆ ನೀಗಲಿದೆ. ಜತೆಗೆ, ಸಂಪಾಜೆ, ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆ ಕಾಮಗಾರಿಗಳೂ ಮುಂದಿನ ಹಂತದಲ್ಲಿ ಪೂರ್ಣಗೊಳ್ಳುವ ಕಾರಣದಿಂದ ಮಂಗಳೂರಿಗೆ ಸರಕು ಸಾಗಾಟ ವಾಹನಗಳ ಆಗಮನಕ್ಕೆ ಉಪಕಾರವಾಗಲಿದೆ. ಹೀಗಿರುವಾಗ ಮಂಗಳೂರಿನ ಕೈಗಾರಿಕೆ ಕೇಂದ್ರದ ಭಾಗದಲ್ಲಿ ವಾಹನ ದಟ್ಟಣೆಯನ್ನು ನಿಭಾಯಿಸಲು ಫ್ಲೈಓವರ್ ಸೂತ್ರ ಅಗತ್ಯವಾಗಿದೆ’ ಎಂಬುದು ಎನ್‌ಎಂಪಿಟಿ ಅಭಿಪ್ರಾಯ. ಭಾಗೀದಾರರ ಸಭೆ
ಕೆಐಒಸಿಎಲ್ ಜಂಕ್ಷನ್‌ನಿಂದ ಬೈಕಂಪಾಡಿವರೆಗೆ ಫ್ಲೈಓವರ್ ನಿರ್ಮಾಣ ಸಂಬಂಧ ಎನ್‌ಎಂಪಿಟಿ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದಿದೆ. ಸ್ಥಳೀಯ ಭಾಗೀದಾರರಾದ ಮಂಗಳೂರು ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ, ಎಂಆರ್‌ಪಿಎಲ್, ರಾ.ಹೆದ್ದಾರಿ ಪ್ರಾಧಿಕಾರ, ಕೆಐಓಸಿಎಲ್, ಎಂಸಿಎಫ್, ಕೆಸಿಸಿಐ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಫ್ಲೈಓವರ್ ಜಾರಿಗೆ ಮಾತುಕತೆ
ಕೆಐಒಸಿಎಲ್ ಜಂಕ್ಷನ್‌ನಿಂದ ಬೈಕಂಪಾಡಿವರೆಗೆ ಫ್ಲೈಓವರ್ ನಿರ್ಮಾಣದ ಅಗತ್ಯದ ಬಗ್ಗೆ ಎನ್‌ಎಂಪಿಟಿ ವತಿಯಿಂದ ಸಭೆ ನಡೆದಿದೆ. ಯೋಜನೆಯ ಸಾಧ್ಯಸಾಧ್ಯತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಸ್ಥಳೀಯ ಭಾಗೀದಾರರನ್ನು ಸೇರಿಸಿಕೊಂಡು ಯೋಜನೆ ಜಾರಿಗೆ ಅಲ್ಲಿ ಮಾತುಕತೆ ನಡೆದಿದ್ದು, ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂಬ ಬಗ್ಗೆ ಅಭಿಪ್ರಾಯವಿದೆ.
-ಅಕ್ಷಯ್ ಶ್ರೀಧರ್, ಆಯುಕ್ತರು, ಮಂಗಳೂರು ಪಾಲಿಕೆ ಘನ ವಾಹನಗಳಿಗೆ ಅನುಕೂಲ
ಕೈಗಾರಿಕೆಗಳಿಗೆ ಸಂಬಂಧಿಸಿದ ಘನ ವಾಹನಗಳ ಸಂಚಾರಕ್ಕೆ ಅನುಕೂಲವಾಗುವ ನೆಲೆಯಲ್ಲಿ ಕೂಳೂರು-ಬೈಕಂಪಾಡಿ ಮಧ್ಯೆ 3.3 ಕಿ.ಮೀ. ಉದ್ದ ಫ್ಲೈಓವರ್ ನಿರ್ಮಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. 8.35 ಮೀ. ಎತ್ತರದಲ್ಲಿ ಫ್ಲೆ$çಓವರ್ ಬಗ್ಗೆ ಚರ್ಚೆ ನಡೆಸಲಾಗಿದೆ. ಐಪಿಆರ್‌ಸಿಎಲ್ ವತಿಯಿಂದ ಡಿಪಿಆರ್ ಆಗಲಿದೆ. ಇದು ಸಾಧ್ಯವಾದರೆ ಘನ ವಾಹನಗಳು ಈಗಿನ ರಸ್ತೆಯಲ್ಲಿ ಹಾಗೂ ಸಾರ್ವಜನಿಕರ ವಾಹನಗಳು ಫ್ಲೈಓವರ್‌ನಲ್ಲಿ ಸಂಚರಿಸಬಹುದಾಗಿದೆ.
-ಜೀವನ್ ಸಲ್ಡಾನ್ಹಾ, ಅಧ್ಯಕ್ಷರು, ಭಾರತೀಯ ಕೈಗಾರಿಕೆ ಒಕ್ಕೂಟ, ದ.ಕ. – ದಿನೇಶ್ ಇರಾ