Advertisement

ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಹಾರುವ ವಸ್ತು ಪತ್ತೆ: ತನಿಖೆ ಚುರುಕು

09:51 AM Jul 04, 2021 | Team Udayavani |

ಶ್ರೀನಗರ: ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯ ಬಿರ್ಪುರ್ ಎಂಬಲ್ಲಿ ಶನಿವಾರ ರಾತ್ರಿ ಹಾರುವ ವಸ್ತುವೊಂದು ಪತ್ತೆಯಾಗಿದೆ. ಆದರೆ ತಕ್ಷಣದ ತನಿಖೆಯ ಬಳಿಕ  ಯಾವುದೇ ವಸ್ತು ಪತ್ತೆಯಾಗಿಲ್ಲ.

Advertisement

ಕಳೆದ ಭಾನುವಾರ ಜಮ್ಮುವಿನ ವಾಯುಪಡೆ ನಿಲ್ದಾಣದ ಮೇಲೆ ನಡೆದ ದಾಳಿಯ ಬಳಿಕ ಹಲವು ಡ್ರೋನ್ ಗಳು ಪತ್ತೆಯಾಗುತ್ತಿದೆ. ಗಡಿ ಭಾಗ ಸೇರಿದಂತೆ ಕಳೆದ ಒಂದು ವಾರದಂತೆ ಜಮ್ಮುವಿನ ಹಲವು ಭಾಗದಲ್ಲಿ ಈ ಸಂಶಯಾತ್ಮಕ ಡ್ರೋನ್ ಹಾರಾಟ ನಡೆಯುತ್ತಿದೆ.

ಸಾಂಬಾದ ಬಿರ್ಪುರ್ ನಲ್ಲಿ ಪತ್ತೆಯಾದ ಹಾರುವ ವಸ್ತು ಡ್ರೋನ್ ಅಲ್ಲ ಎಂದು  ಸಾಂಬಾ ಪೊಲೀಸರು ತಿಳಿಸಿದ್ದಾರೆ.

ಜೂನ್ 27 ರಂದು ಜಮ್ಮು ವಾಯು ಪಡೆ ನಿಲ್ದಾಣದಲ್ಲಿ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟಗಳ ನಡೆದಿತ್ತು. ನಗರದಲ್ಲಿ ಡ್ರೋನ್‌ಗಳನ್ನು ಐದು ಸಂದರ್ಭಗಳಲ್ಲಿ ಗುರುತಿಸಲಾಗಿದೆ. ಶುಕ್ರವಾರ ಮುಂಜಾನೆ 4: 25 ರ ಸುಮಾರಿಗೆ ಜಮ್ಮುವಿನ ಅರ್ನಿಯಾ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯ ಬಳಿ ಡ್ರೋನ್ ಪತ್ತೆಯಾಗಿತ್ತು. ಯೋಧರ ಗುಂಡಿನ ದಾಳಿಯ ಬಳಿಕ ಅದನ್ನು ಹಿಮ್ಮೆಟ್ಟಿಸಲಾಗಿತ್ತು.

ಇದನ್ನೂ ಓದಿ:ಮತ್ತೆ ರಫೇಲ್ ಲಡಾಯಿ: ನ್ಯಾಯಾಂಗ ತನಿಖೆಗೆ ನಡೆಸಲು ಮುಂದಾದ ಫ್ರಾನ್ಸ್

Advertisement

ಐಎಎಫ್ ಮೇಲಿನ ದಾಳಿಯ ಒಂದು ದಿನದ ನಂತರ, ಜೂನ್ 27 ಮತ್ತು 28 ರ ಮಧ್ಯರಾತ್ರಿಯಲ್ಲಿ ಎರಡು ಡ್ರೋನ್‌ಗಳು ಕಲುಚಕ್ ಮಿಲಿಟರಿ ನಿಲ್ದಾಣದ ಮೇಲೆ ಹಾರಾಡುತ್ತಿರುವುದು ಕಂಡುಬಂದಿದೆ. ನಂತರ ಜಮ್ಮು ಪ್ರದೇಶದಲ್ಲಿ, ವಿಶೇಷವಾಗಿ ಸೇನಾ ಕೇಂದ್ರಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ.

ನಂತರ ಜೂನ್ 29 ರಂದು ಮುಂಜಾನೆ 2.30 ರ ಸುಮಾರಿಗೆ ಜಮ್ಮುವಿನ ಕುಂಜ್ವಾನಿ, ಸುಂಜ್ವಾನ್ ಮತ್ತು ಕಲುಚಕ್ ಪ್ರದೇಶಗಳಲ್ಲಿ ಡ್ರೋನ್‌ ಗಳು ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next