ಹೊಸದಿಲ್ಲಿ: ಲೋಕಸಭೆಯಲ್ಲಿ ಭಾಷಣ ಮುಗಿಸಿದ ಬಳಿಕ ಮಹಿಳಾ ಸಂಸದರಿಗೆ ರಾಹುಲ್ ಗಾಂಧಿ ಅವರು ‘ಫ್ಲೈಯಿಂಗ್ ಕಿಸ್’ ನೀಡಿದ ಬಗ್ಗೆ ಗಲಾಟೆ ನಡೆಯುತ್ತಿರುವ ನಡುವೆಯೇ ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
“ಅವರಿಗೆ ಮಹಿಳೆಯರ ಕೊರತೆ ಇಲ್ಲ ಅಲ್ಲದೆ ಅವರು 50 ವರ್ಷದ ಮಹಿಳೆಗೆ ಏಕೆ ಮುತ್ತು ನೀಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:Cyber Crime: ವಂಚಕರಿಂದ 150 ಕೋಟಿ ಲೂಟಿ: ಉತ್ತರ ಭಾರತದಲ್ಲೇ ಕುಳಿತು ಬೆಂಗಳೂರಿಗರಿಗೆ ವಂಚನೆ
“ನಮ್ಮ ರಾಹುಲ್ ಗಾಂಧಿಗೆ ಮಹಿಳೆಯರ ಕೊರತೆ ಇಲ್ಲ, ಫ್ಲೈಯಿಂಗ್ ಕಿಸ್ ಕೊಡಬೇಕಾದರೆ ಕಿರಿಯ ಮಹಿಳೆಗೆ ಕೊಡುತ್ತಿದ್ದರು. ವಯಸ್ಸಾದ ಮಹಿಳೆಗೆ ಫ್ಲೈ ಕಿಸ್ ಯಾಕೆ ಕೊಡುತ್ತಾರೆ? ಈ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ” ಎಂದು ನೀತು ಸಿಂಗ್ ಹೇಳಿರುವ ವಿಡಿಯೋ ವೈರಲ್ ಆಗಿದೆ. ನೀತೂ ಸಿಂಗ್ ಹೇಳಿಕೆಗೆ ಆಡಳಿತಾರೂಢ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
20 ಕ್ಕೂ ಹೆಚ್ಚು ಮಹಿಳಾ ಸಂಸದರ ಸಮ್ಮುಖದಲ್ಲಿ ಬುಧವಾರ ಸಂಸತ್ತಿನಲ್ಲಿ ಫ್ಲೈಯಿಂಗ್ ಕಿಸ್ ಮಾಡುವ ಮೂಲಕ ರಾಹುಲ್ ಗಾಂಧಿ ಕೆಳಮನೆಯಲ್ಲಿ ಕೋಲಾಹಲಕ್ಕೆ ಕಾರಣರಾಗಿದ್ದರು. ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಲಿಖಿತ ದೂರು ನೀಡಿದ್ದರು.