Advertisement

ಇನ್ನೈದು ವರ್ಷದ‌ಲ್ಲಿ ಹಾರುವ ಕಾರು

12:30 AM Mar 13, 2019 | |

ಹೊಸದಿಲ್ಲಿ: ಮಹಾನಗರಗಳ ವಾಹನ ದಟ್ಟಣೆಯಿಂದಾಗಿ ಬೇಸತ್ತಿರುವ ನಗರವಾಸಿಗಳ ಆಶಾಕಿರಣವಾಗಿ ಹೊರ ಹೊಮ್ಮಿರುವ ಹಾರುವ ಕಾರುಗಳ ಪರಿಕಲ್ಪನೆ ಇನ್ನೈದು ವರ್ಷಗಳಲ್ಲಿ ಸಾಕಾರಗೊಳ್ಳಲಿದೆ ಎಂದು ಇಂಟೆಲ್‌ ಕಂಪೆನಿ ಡ್ರೋನ್‌ ವಿಭಾಗದ ಮುಖ್ಯಸ್ಥ ಅನಿಲ್‌ ನಂದೂರಿ ತಿಳಿಸಿದ್ದಾರೆ. 

Advertisement

“ಸಿ-ನೆಟ್‌’ ಎಂಬ ನಿಯತಕಾಲಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ಅವರು, “”ಇನ್ನೈದು ವರ್ಷಗಳಲ್ಲಿ ಹಾರುವ ಕಾರುಗಳು ಎಲ್ಲೆಡೆ ಬಳಕೆಗೆ ಲಭ್ಯವಾಗದಿದ್ದರೂ, ಕೆಲವು ಕಡೆಯಲ್ಲಾದರೂ ಅವುಗಳ ಹಾರಾಟವನ್ನು ಖಂಡಿತವಾಗಿಯೂ ಜನರು ನೋಡಬಹುದಾಗಿದೆ” ಎಂದಿದ್ದಾರೆ. 

“”ಡ್ರೋನ್‌ ತಂತ್ರಜ್ಞಾನದ ಆಧಾರದಲ್ಲೇ ಹಾರುವ ಕಾರುಗಳು ರೂಪುಗೊಳ್ಳಲಿವೆ. ಸದ್ಯಕ್ಕೆ ಮನರಂಜನೆ, ತಪಾಸಣೆ, ಸಾಮಗ್ರಿಗಳ ಸರಬರಾಜು ಮುಂತಾದ ಕೆಲಸಗಳಿಗಷ್ಟೇ ಸೀಮಿತ ವಾಗಿರುವ ಡ್ರೋನ್‌ಗಳು,  ಪ್ರಯಾಣಿಕರನ್ನು ಕೊಂಡೊಯ್ಯುವ ಗಾತ್ರಕ್ಕೆ ಬದಲಾಗಬಲ್ಲವು. ಟ್ಯಾಕ್ಸಿಗಳಾಗಿಯೂ ಇವನ್ನು ಉಪಯೋಗಿಸಬಹುದು” ಎಂದು ಅವರು ಹೇಳಿದ್ದಾರೆ.  “ವೆಚ್ಚ ಎಷ್ಟು’ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, “”ನೆಲದೊಳಗೆ ಸುರಂಗಗಳನ್ನು ಕೊರೆದು ಸಾರ್ವಜನಿಕ ಸಾರಿಗೆ ವ್ಯವಸ್ಥೆ ರೂಪುಗೊಳಿಸಲು ಆಗುವ ಖರ್ಚಿಗಿಂತ ಕಡಿಮೆ ವೆಚ್ಚದಲ್ಲಿ ಹಾರುವ ಕಾರುಗಳ ತಂತ್ರಜ್ಞಾನದ ಅನುಷ್ಠಾನ ಸಾಧ್ಯ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next