ನೀವು ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಲು ಅಣಿಯಾಗಿದ್ದೀರಾ? ಸಿಕ್ಕಾಬಟ್ಟೆ ಲಗೇಜೂ ಇದೆಯಾ? ಹಾಗಿದ್ದರೆ ಸ್ವಲ್ಪ ನಿಲ್ಲಿ. ಏರ್ ಇಂಡಿಯಾ ಸಂಸ್ಥೆ, ದೇಶೀಯ ಪ್ರಯಾಣದ ವೇಳೆ ಹೆಚ್ಚುವರಿ ಲಗೇಜಿಗೆ ವಿಧಿಸುತ್ತಿದ್ದ ದಂಡದ ರೂಪದ ಶುಲ್ಕ ವನ್ನು 100 ರೂ.ಗಳಷ್ಟು ಹೆಚ್ಚಿ ಸಿದೆ. ಈ ಪರಿಷ್ಕೃತ ಶುಲ್ಕಕ್ಕೆ ಜಿಎಸ್‌ಟಿಯೂ ಅನ್ವಯಿಸಲಿದೆ. ಸೋಮವಾರದಿಂದಲೇ ಈ ನಿಯಮ ಜಾರಿಗೆ ಬಂದಿದೆ.
ಜಿಎಸ್‌ಟಿ ಅನ್ವಯ ಹೆಚ್ಚಿನ ಲಗೇಜಿಗೆ ವಿಧಿಸಲಾಗುವ ಶುಲ್ಕಕ್ಕೆ ಜಿಎಸ್‌ಟಿಯೂ ಅನ್ವಯವಾಗಲಿದೆ. ಎಕಾನಮಿ ದರ್ಜೆಯ ಪ್ರಯಾಣಿಕರಿಗೆ ಶೇ.5ರಷ್ಟು ತೆರಿಗೆ ವಿಧಿಸಿದರೆ, ಬ್ಯುಸಿ ನೆಸ್ ಮತ್ತಿ ತರ ದರ್ಜೆಯ ಪ್ರಯಾಣಿಕರಿಗೆ ಶೇ.12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ.
ಇವರಿಗಿಲ್ಲ ಜಿಎಸ್‌ಟಿ
ಅರುಣಾಚಲ ಪ್ರದೇಶ, ಮಿಜೋರಾಂ, ತ್ರಿಪುರಾ, ಅಸ್ಸಾಂ, ಮಣಿಪುರ, ಮೇಘಾಲಯ,ನಾಗಾಲ್ಯಾಂಡ್, ಸಿಕ್ಕಿಂ ರಾಜ್ಯಗಳಿಗೆ ಹಾಗೂ ಪಶ್ಚಿಮ ಬಂಗಾಳದ ಬಾಗ್ಡೋರಾ ವಿಮಾನ ನಿಲ್ದಾ ಣಕ್ಕೆ ಹೋಗುವ ಅಥವಾ ಅಲ್ಲಿಂದ ಇತರೆಡೆಗೆ ಪ್ರಯಾಣಿಸುವವರ ಹೆಚ್ಚುವರಿ ಲಗೇಜಿನ ಶುಲ್ಕಕ್ಕೆ ಜಿಎಸ್‌ಟಿಯಿಂದ ವಿನಾಯ್ತಿ ಇರ ಲಿದೆ.
25 ಕೆಜಿ ನಿಗದಿತ ಲಗೇಜು ಮಿತಿ
400 ರೂ.
ಹೆಚ್ಚುವರಿ ಪ್ರತಿ ಕೆಜಿ ಲಗೇಜಿಗೆ ಈವರೆಗೆ ವಿಧಿಸಲಾಗುತ್ತಿದ್ದ ಶುಲ್ಕ
500 ರೂ.
ಪರಿಷ್ಕೃತಗೊಂಡಿರುವ ಹೆಚ್ಚುವರಿ ಲಗೇಜಿನ ಶುಲ್ಕ
100 ರೂ.
ಹಿಂದಿನ ಶುಲ್ಕಕ್ಕಿಂತ ಹೆಚ್ಚಳವಾದ ಮೊತ್ತ