Advertisement

ಮುಚ್ಚಳ ಮುಚ್ಚಿ ಫ್ಲಶ್‌ ಮಾಡಿ ; ಇಲ್ಲೂ ಅವಿತಿರುತ್ತೆ ಕಿಲ್ಲರ್ ವೈರಾಣು!

12:08 AM Jun 20, 2020 | Hari Prasad |

ಬೀಜಿಂಗ್‌: ನೀವು ಶೌಚಾಲಯಕ್ಕೆ ಹೋದಾಗ ಕಮೋಡ್‌ನ‌ ಮುಚ್ಚಳ ಮುಚ್ಚಿ ಫ್ಲಶ್‌ ಮಾಡಿ. ವೈರಾಣುಗಳು ಮಲದಲ್ಲೂ ಜೀವಿಸ­ಬಹುದಾದ್ದರಿಂದ ಫ್ಲಶ್‌ನ ಗಾಳಿಯ ಮೂಲಕ ವೈರಾಣು ವ್ಯಕ್ತಿಯ ದೇಹವನ್ನು ಪ್ರವೇಶಿಸಬಹುದು!

Advertisement

ಚೀನದ ಯಾಂಗ್ಟೌ ವಿವಿಯ ತಜ್ಞರ ಸಂಶೋ­ಧನಾ ವರದಿ ಈ ಮಾಹಿತಿ ಬಿಚ್ಚಿಟ್ಟಿದೆ. “ಕೊರೊನಾ ವೈರಸ್‌ಗಳು ಮನುಷ್ಯನ ಜೀರ್ಣಾಂಗವ್ಯೂಹದಲ್ಲಿ ಬದುಕುಳಿಯ­ಬಲ್ಲವು. ದೇಹದ ತ್ಯಾಜ್ಯವನ್ನು ಹೊರ­ಹಾಕುವುದರಿಂದ ಅವು ಟಾಯ್ಲೆಟ್‌ನಲ್ಲಿ ಆಶ್ರಯ ಪಡೆಯುವ ಸಾಧ್ಯತೆ ಇರುತ್ತದೆ’ ಎಂದು ವೈರಲಾಜಿಸ್ಟ್‌ ಜಿ ಕ್ಸಿಯಾಂಗ್‌ ವಾಂಗ್‌ ಅಭಿಪ್ರಾಯಪಟ್ಟಿದ್ದಾರೆ.

‘ಸೋಂಕಿತ ಬಳಸಿದ ಟಾಯ್ಲೆಟ್‌ಗೆ ಆರೋಗ್ಯವಂತ ವ್ಯಕ್ತಿ ಪ್ರವೇಶಿಸಿ  ಫ್ಲಶ್‌ ಮಾಡಿದಾಗ ತ್ಯಾಜ್ಯದ  ಹನಿಗಳು ದೇಹವನ್ನು ಸೇರುವ ಅಪಾಯವಿರು­ತ್ತದೆ. ಹೆಚ್ಚು ಜನರಿರುವ ಮನೆಗಳಲ್ಲಿ ಅಥವಾ ಸಾರ್ವಜನಿಕ ಶೌಚಾಲಯಗಳಲ್ಲಿ ಈ ರೀತಿಯ ಅವಘಡಗಳು ಸಂಭವಿಸಬಹುದು’ ಎಂದು ಎಚ್ಚರಿಸಿದ್ದಾರೆ. ಆದರೆ ಈ ಅಭಿಪ್ರಾಯವನ್ನು ಅಮೆರಿಕದ ಮೈಕ್ರೋ ಬಯಲಾಜಿಸ್ಟ್‌ ಚಾರ್ಲ್ಸ್ ಪಿ. ಗೆಬ್ರಾ ನಿರಾಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next