Advertisement
ಕೊರೊನಾ ನಡುವೆ ಈ ಸಮಸ್ಯೆ ಕಾಣಿಸಿಕೊಂಡಿದೆ. ಈ ನಡುವೆ ಕೇಂದ್ರ ಸರಕಾರವು ಕರ್ನಾಟಕ ಸಹಿತ 11 ರಾಜ್ಯಗಳಿಗೆ ಹೊಸ ಮಾದರಿಯ ಡೆಂಗ್ಯೂ ಜ್ವರದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ.
Related Articles
Advertisement
ಆರೋಗ್ಯ ಇಲಾಖೆಯಿಂದಲೇ ಲಸಿಕೆ :
ರಾಜ್ಯ ಆರೋಗ್ಯ ಇಲಾಖೆ ವತಿಯಿಂದಲೇ 0-5 ವರ್ಷ ವಯೋಮಿತಿಯ ಮಕ್ಕಳಿಗೆ ಲಸಿಕೆ ನೀಡಲು ಮುಂದಾಗಿದೆ. ಅದಕ್ಕೆ ಪೂರಕವಾಗಿ ಫ್ಲೂ ಲಸಿಕೆ ವಿತರಣೆಯನ್ನು ಲಸಿಕೆ ಅಭಿಯಾನದ ವ್ಯಾಪ್ತಿಗೆ ತರಲಾಗಿದೆ. 15 ದಿನಗಳ ಅಂತರದಲ್ಲಿ ಎರಡು ಡೋಸ್ ಮತ್ತು 40ನೇ ದಿನಕ್ಕೆ ಬೂಸ್ಟರ್ ಡೋಸ್ ಸೇರಿ ಒಟ್ಟು ಮೂರು ಡೋಸ್‌ಗಳ ಫ್ಲೂ ಲಸಿಕೆ ಮುಂದಿನ ವಾರದಿಂದ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.
ಕೇಂದ್ರದಿಂದ ಡೆಂಗ್ಯೂ ಎಚ್ಚರಿಕೆ :
ಹೊಸದಿಲ್ಲಿ: ಹೊಸದಾಗಿ ಕಾಣಿಸಿಕೊಂಡಿರುವ ಸೀರೋಟೈಪ್-2 ಎಂಬ ಡೆಂಗ್ಯೂ ಆತಂಕ ಮೂಡಿಸಿದೆ. ಹೀಗಾಗಿ ಕೇಂದ್ರ ಸರಕಾರ ಕರ್ನಾಟಕ ಸೇರಿ 11 ರಾಜ್ಯಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಿದೆ. ಸಹಾಯವಾಣಿ ರೂಪಿಸಿ, ಪರೀಕ್ಷಾ ಕಿಟ್, ಔಷಧಗಳನ್ನು ಸಂಗ್ರಹಿಸಿ ಇರಿಸಬೇಕು ಎಂದು ಸಲಹೆ ನೀಡಿದೆ.
ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ ಮತ್ತು ತೆಲಂಗಾಣಗಳಿಗೆ ಈ ಎಚ್ಚರಿಕೆ ನೀಡಲಾಗಿದೆ.
ಮಕ್ಕಳ ವೈದ್ಯರ ಸಲಹೆಗಳೇನು? :
- ಎರಡಕ್ಕಿಂತ ಹೆಚ್ಚು ದಿನ ಜ್ವರದ ಲಕ್ಷಣ ಇದ್ದರೆ ಕೊರೊನಾ, ಡೆಂಗ್ಯೂ ಪರೀಕ್ಷೆ ಮಾಡಿಸಿ.
- ಜ್ವರ, ಕೆಮ್ಮು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆ/ ಐಸಿಯು ದಾಖಲಾತಿಗೆ ಮುಂದಾಗಬೇಡಿ.
- ಆರೋಗ್ಯವಂತ ಮಕ್ಕಳಿಗೂ ಸಾವಿರಾರು ರೂ. ನೀಡಿ ಫ್ಲೂ ಲಸಿಕೆ ಕೊಡಿಸುವ ಬದಲು ಕೊರೊನಾ ಮುಂಜಾಗ್ರತೆ ಪಾಲಿಸಿದರೆ ಫ್ಲೂ ತಗಲುವುದಿಲ್ಲ.
- ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಯೋಗ, ವ್ಯಾಯಾಮ, ಆಹಾರ ಕ್ರಮ ಪಾಲಿಸಿ.