Advertisement
ಪ್ರವಾಸಿ ತಾಣವಾದ ಹೊಲಗಳು ಅಂತೂ ಮಹತ್ತುರ ಗ್ರಾಮ ಇದೀಗ ಪ್ರವಾಸಿ ಕೇಂದ್ರವೂ ಆಗಿದೆ. ಯಾಕೆಂದರೆ ಕೋಲ್ಕತಾ- ಮುಂಬೈ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಆ ಗ್ರಾಮ, ಹೊಲಗಳ ರಾತ್ರಿ ಬೆಳಕಿನ ಚೋದ್ಯದಿಂದಾಗಿ ಹೆದ್ದಾರಿ ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಅಲ್ಲಿನ ಹಸುರು ಹೊಲಗಳು ಸಾಲುಸಾಲು ಬಲ್ಬುಗಳ ಬೆಳಕಿನಲ್ಲಿ ಹೊನಲು ಬೆಳಕಿನ ಬಯಲಿನಂತೆ ಮಿಂಚುವುದನ್ನು ನೋಡಲಿಕ್ಕಾಗಿ ಪ್ರಯಾಣಿಕರು ತಮ್ಮ ವಾಹನಗಳನ್ನು ಸಾಲುಗಟ್ಟಿ ನಿಲ್ಲಿಸುತ್ತಾರೆ.
ಕೋಲ್ಕತಾದಿಂದ 80 ಕಿ.ಮೀ. ದೂರದ ಮಹತು³ರ್ ಗ್ರಾಮದ ಸುಮಾರು ನೂರೈವತ್ತು ರೈತರು ಎಲ್‌ಇಡಿ ಬಲ್ಬುಗಳನ್ನು ಬಳಸಿ ಸೇವಂತಿಗೆ ಹೂಗಳನ್ನು ಬೆಳೆಯುತ್ತಿದ್ದಾರೆ. ಸಹಜ ಬೆಳಕಿನ ಪರಿಣಾಮವನ್ನು ಕೃತಕ ಬೆಳಕು ಕೂಡ ಉಂಟುಮಾಡುತ್ತದೆ. ಎಲ್ಇಡಿ ಬಲ್ಬುಗಳ ಆವಿಷ್ಕಾರದ ಅನಂತರ, ಸಸ್ಯಗಳನ್ನು ಬೆಳೆಸಲು ಅವುಗಳ ಬಳಕೆಯ ಬಗ್ಗೆ ಹೆಚ್ಚೆಚ್ಚು ಅಧ್ಯಯನಗಳು ನಡೆಯುತ್ತಿವೆ. ಯಾಕೆಂದರೆ ಈ ಬಲ್ಬುಗಳು ಉಪಯೋಗಿಸುವ ವಿದ್ಯುತ್ತಿನ ಪ್ರಮಾಣ ಅತ್ಯಂತ ಕಡಿಮೆ. ಇವೆಲ್ಲ ಬೆಳವಣಿಗೆಗಳು ಮಹತ್ತುರ ಗ್ರಾಮದ ರೈತರಿಗೆ ತಿಳಿದಿಲ್ಲ. ಆದರೆ, ಒಂದು ದಶಕದ ಹಿಂದೆ, ಅಲ್ಲಿನ ರೈತ ರಬೀಂದ್ರನಾಥ ಜನಾ ಒಂದು ಚೋದ್ಯ ಗಮನಿಸಿದರು. ವಿದ್ಯುತ್ ಬಲ್ಬಿನ ಬೆಳಕು ನಿರಂತರವಾಗಿ ಕೆಲವು ದಿನ ಒಂದು ಸಸ್ಯದ ಮೇಲೆ ಬೀಳುತ್ತಿತ್ತು. ಬಲ್ಬನ್ನು ಆರಿಸಿದ ಅನಂತರ, ಆ ಸಸ್ಯದ ಬೆಳವಣಿಗೆ ಇತರ ಸಸ್ಯಗಳ ಬೆಳವಣಿಗೆಗಿಂತ ಮೂರು ಪಟ್ಟು ಜಾಸ್ತಿಯಾಗಿತ್ತು.
Related Articles
Advertisement
ಎಲ್ಇಡಿ ಪದ್ಧತಿಯಿಂದಾಗಿ ಮುಂಚೆ ನನಗೆ ಒಂದು ಗಿಡದಿಂದ 7 ಹೂ ಸಿಗುತ್ತಿದ್ದರೆ ಈಗ 20 ಹೂ ಸಿಗುತ್ತಿದೆ. ಅದಲ್ಲದೆ ಹೂಗಳ ಗಾತ್ರವೂ ದೊಡ್ಡದಾಗಿದೆ. ಕಳೆದ ವರ್ಷ ಹೊಲದಲ್ಲಿ 18,000 ಹೂಗಿಡಗಳನ್ನು ನೆಟ್ಟಿದ್ದೆ. ಒಳ್ಳೆಯ ಆದಾಯ ಬಂತು’ ಎನ್ನುತ್ತಾರೆ ರೈತ ಗಣೇಶ್.
ಕೃತಕ ಬೆಳಕಿನಿಂದಾಗಿ ಹೂಗಿಡಗಳಲ್ಲಿ ಹೆಚ್ಚು ಮೊಗ್ಗುಗಳು ಮತ್ತು ಎಲೆಗಳು ಮೂಡುತ್ತಿವೆ. ದಿಲ್ಲಿ ಮತ್ತು ಮಹಾರಾಷ್ಟ್ರದ ನಗರಗಳಿಗೂ ಇಲ್ಲಿನ ಹೂಗಳು ಸರಬರಾಜಾಗುತ್ತಿವೆ. ಹಗಲಿನ ಬೆಳಕು ಗಿಡಗಳಿಗೆ ಸಾಕಷ್ಟು ಸಿಗದಿದ್ದರೂ ರಾತ್ರಿ ಬಲ್ಬುಗಳು ನೀಡುವ ಬೆಳಕಿನಿಂದಾಗಿ ಬೆಳವಣಿಗೆ ಸರಿಹೋಗುತ್ತದೆ ಎನ್ನುವುದು ಇಲ್ಲಿನ ರೈತರ ಮಾತು.
ಇಳುವರಿ ಅಧಿಕಈಗ ಯಾವುದೇ ಸಮಾರಂಭಕ್ಕೆ ಹೂಗಳ ಬೇಡಿಕೆ ಬಂದರೆ, ನಾವು ಗಿಡಗಳಿಗೆ ಕೃತಕ ಬೆಳಕು ಕೊಡುವುದನ್ನು ನಿಲ್ಲಿಸುತ್ತೇವೆ. ಅದಾಗಿ, 30- 40 ದಿನಗಳಲ್ಲಿ ಗಿಡಗಳು ಹೂ ಬಿಡುತ್ತವೆ’ ಎನ್ನುತ್ತಾರೆ ಇನ್ನೊಬ್ಬ ರೈತ ಪನ್ನಾಲಾಲ್ ಪಟ್ಟನಾಯಕ್. ಅಲ್ಲಿ ಎಪ್ರಿಲ್‌ನಲ್ಲಿ ಸೇವಂತಿಗೆ ಗಿಡಗಳನ್ನು ನೆಟ್ಟು ನವೆಂಬರಿನಲ್ಲಿ ಹೂಕೊಯ್ಲು ಮಾಡುವ ಪದ್ಧತಿ. ಸಾಮಾನ್ಯವಾಗಿ ಕೊಯ್ಲಿನ ಸಮಯದಲ್ಲಿ ಹೂ ಇಳುವರಿ ಅಧಿಕಗೊಳ್ಳುತ್ತದೆ. ಈಗ, ಕೃತಕ ಬೆಳಕಿನಲ್ಲಿ ಹೂ ಬೇಸಾಯ ಶುರು ಮಾಡಿದಾಗಿನಿಂದ, ತಡವಾಗಿ ಅಂದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಹೂಗಿಡ ನೆಟ್ಟು ಮಾರ್ಚ್‌ನಲ್ಲಿ ಕೊಯ್ಲು ಮಾಡಲು ರೈತರಿಗೆ ಸಾಧ್ಯವಾಗಿದೆ.