Advertisement
ಸಮ್ಮಾನ, ವಿವಿಧ ಸ್ಪರ್ಧೆಗಳುಈ ಸಂದರ್ಭದಲ್ಲಿ ಜಿಲ್ಲೆಯ ಆಯ್ದ 5 ರೈತ ಮಹಿಳೆ, ಸಣ್ಣ- ಅತಿ ಸಣ್ಣ, ಪರಿಶಿಷ್ಟ ಜಾತಿ- ಪಂಗಡದ ತೋಟಗಾರಿಕಾ ರೈತರಿಗೆ ಸಮ್ಮಾನ ಹಾಗೂ ಹೂವು ಜೋಡಣೆ, ರಂಗೋಲಿ, ತರಕಾರಿ ಕೆತ್ತನೆ ಸ್ಪರ್ಧೆಗಳು, ಉದ್ಯಾನ ಸ್ಪರ್ಧೆ ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ 30 ಜನ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಸುಮಾರು 12 ತಂಡಗಳಿಂದ ಪ್ರತಿ ದಿನ ಸಂಜೆ 5.30ರಿಂದ ರಾತ್ರಿ 8.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಪ್ರವೇಶ ಶುಲ್ಕ ಹಿರಿಯರಿಗೆ 20 ರೂ. ಮತ್ತು ಮಕ್ಕಳಿಗೆ 10 ರೂ. ಆಗಿರುತ್ತದೆ. ಶಿಕ್ಷಕರ ಜತೆಗೆ ಬರುವ ಶಾಲಾ ಮಕ್ಕಳಿಗೆ, ವಿಶಿಷ್ಟ ಮಕ್ಕಳಿಗೆ ಪ್ರವೇಶ ಉಚಿತವಾಗಿರುತ್ತದೆ. ಪ್ರದರ್ಶನದ ವಿಶೇಷತೆಗಳು
ಪ್ರದರ್ಶನದಲ್ಲಿ ಜೇನು ಬೇಸಾಯದ ಬಗ್ಗೆ ಮಾಹಿತಿ ಹಾಗೂ ಜೇನಿನ ಮೌಲ್ಯ ವರ್ಧಿತ ಉತ್ಪನ್ನಗಳ ಮಾರಾಟ, ಕೈತೋಟ ಮತ್ತು ತಾರಸಿ ತೋಟದ ಪ್ರಾತ್ಯಕ್ಷಿಕೆ, ತೋಟಗಾರಿಕೆ ಇಲಾಖೆ ಬೆಳೆಸಿದ ವಿವಿಧ ಹೂವು, ಹಣ್ಣು, ತರಕಾರಿಗಳ ಪ್ರದರ್ಶನ, ಬೋನ್ಸಾಯಿ, ಅಂಥೂರಿಯಂ, ಆರ್ಕಿಡ್ ಗಿಡಗಳು ಮತ್ತು ಇತರ ಆಕರ್ಷಕ ಗಿಡಗಳ ಪ್ರದರ್ಶನ, ವಿವಿಧ ನರ್ಸರಿ ಮತ್ತು ಬೀಜ ಮಾರಾಟಗಾರರಿಂದ ಮಳಿಗೆಗಳು, ಸಾವಯವ ಉತ್ಪನ್ನಗಳ ಪ್ರದರ್ಶನ, ಆಹಾರ ಮೇಳ ಆಗಮಿಸುವವರನ್ನು ಆಕರ್ಷಿಸಲಿದೆ.
Related Articles
ಫಲಪುಷ್ಪ ಪ್ರದರ್ಶನದಲ್ಲಿ ಬಣ್ಣ ಬಣ್ಣದ ಕಾರ್ನೇಶನ್ ಮತ್ತು ಗುಲಾಬಿ ಹೂವುಗಳಿಂದ ಅಲಂಕರಿಸಿದ ‘ಮಂಗಳೂರು ಕ್ಲಾಕ್ ಟವರ್’ ಪ್ರಮುಖ ಆಕರ್ಷಣೆಯಾಗಲಿದೆ. ಜಿಲ್ಲೆಯ ಪ್ರಮುಖ ಸ್ಮಾರಕಗಳಲ್ಲಿ ಒಂದಾದ ಕ್ಲಾಕ್ ಟವರ್‌ನ್ನು ಫಲ ಪುಷ್ಪ ಪ್ರದರ್ಶನದಲ್ಲಿ ನಿರ್ಮಿಸಿ ಜನರನ್ನು ಸೆಳೆಯುವ ಚಿಂತನೆ ಮಾಡಲಾಗಿದೆ. 14 ಅಡಿ ಎತ್ತರ ಮತ್ತು 5 ಅಡಿ ಅಗಲದ ಈ ಕ್ಲಾಕ್ ಟವರ್ ನಿರ್ಮಾಣಕ್ಕೆ 150 ಕೆ.ಜಿ. ಹೂವುಗಳನ್ನು ಜೋಡಿಸಲಾಗುತ್ತದೆ.
Advertisement