Advertisement

ಸಸ್ಯಕಾಶಿಗೆ ಹರಿದು ಬಂದ ಜನಸಾಗರ

12:43 PM Aug 07, 2023 | Team Udayavani |

ಬೆಂಗಳೂರು: ಮೋಡ ಕವಿದ ವಾತಾವರಣ, ಸಣ್ಣ ಮಳೆಯ ನಡುವೆಯೂ ಸಸ್ಯ ಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಭಾನುವಾರ ಮುಂಜಾನೆ ಯಿಂದಲೇ ಜನ ಸಾಗರ ಹರಿದು ಬಂದಿದೆ.

Advertisement

ಫ‌ಲಪುಷ್ಪ ಆರಂಭದ ಮೊದಲ ವಾರಾಂತ್ಯದಲ್ಲಿ ಅತಿಹೆಚ್ಚು ಪ್ರೇಕ್ಷಕರು ಆಗಮಿಸಿದ್ದು, ಮೊದಲ ದಿನ ಶನಿವಾರ 28 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದು, 18.5 ಲಕ್ಷ ರೂ. ಸಂಗ್ರಹವಾಗಿದೆ. ಅದೇ ರೀತಿ ರಜಾದಿನ ಭಾನುವಾರ ಉದ್ಯೋಗಿಗಳು, ವಿದ್ಯಾರ್ಥಿಗಳು ಸೇರಿ ಜನಸಾಗರ ಹರಿದು ಬಂದಿತ್ತು. ಭಾನುವಾರದಂದು 55,204 ಜನ ವಯಸ್ಕರು, 9,345 ಮಕ್ಕಳು, 2,500 ಜನ ಪಾಸ್‌ ಪಡೆದವರು ಹಾಗೂ 500 ಶಾಲಾ ವಿದ್ಯಾರ್ಥಿಗಳು  ಒಟ್ಟು 67,549 ಪ್ರೇಕ್ಷಕರು ಫ‌ಲಪುಷ್ಪ ಪ್ರದರ್ಶನ ವೀಕ್ಷಿಸಿದ್ದು, ಒಟ್ಟು 47 ಲಕ್ಷ ರೂ. ಹಣ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಕಡೆ ಪ್ರದರ್ಶನದಲ್ಲಿ ಗುಲಾಬಿ ಹೂಗಳು, ಅಂಥೋರಿಯಂ ಹೂಗಳು, ಜಬೇìರಾ, ಆರ್ಕಿಡ್‌, ನಂದಿ ಗಿರಿಧಾಮದ ಇಂಪೇಷ®Õ… ಹೂ, ಸ್ಟೋರೇಮೇರಿಯನ್‌ ಲಿಲ್ಲಿ, ಪೂಷಿಯಾ, ಅಗಪಾಂಥಸ್‌ ಸೈಕ್ಲೋಮನ್‌, ಕ್ಯಾಲಾಲಿಲ್ಲಿ, ಸುಗಂಧರಾಜ ಸೇರಿ ಶೀತ ವಲಯದ ಹೂಗಳು ಜನರ ಕಣ್ಮನ ಸೆಳೆಯುತ್ತಿದ್ದರೆ, ಮತ್ತೂಂದೆಡೆ ಯುವತಿಯರು, ಮಹಿಳೆಯರು ಸೇರಿ ಪ್ರೇಕ್ಷಕರು ವಿಧಾನಸೌಧ, ಸತ್ಯಾಗ್ರಹ ಸೌಧ ಹಾಗೂ ಹೂಗಳ ಕಲಾಕೃತಿಗಳ ಜತೆಗಿನ ಸೆಲ್ಫಿà ಕ್ಲಿಕ್ಕಿಸಿಕೊಳ್ಳುವಲ್ಲಿ ಮುಳುಗಿದ್ದ ದೃಶ್ಯಗಳು ಕಂಡುಬಂದವು.

ವಾಹನ ದಟ್ಟಣೆ: ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವವರ ವಾಹನ ಪಾರ್ಕಿಂಗ್‌ ಮಾಡಲು ಈಗಾಗಲೇ ಹಲವು ಕಡೆ ವ್ಯವಸ್ಥೆ ಮಾಡಲಾಗಿದೆ. ಆದರೂ, ಭಾನುವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದ ಪರಿಣಾಮ ಲಾಲ್‌ಬಾಗ್‌ ಸುತ್ತಲೂ ಸಂಚಾರ ದಟ್ಟಣೆ ಉಂಟಾಯಿತು. ಬಹುತೇಕರು ಬಿಎಂಟಿಸಿ ಹಾಗೂ “ನಮ್ಮ ಮೆಟ್ರೋ’ ಮೂಲಕವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next