Advertisement

ಪೊಲೀಸರಿಗೆ ಜನರಿಂದ ಹೂಮಳೆ

05:16 PM Apr 18, 2020 | Suhan S |

ಬ್ಯಾಡಗಿ: ಪೊಲೀಸ್‌ ಇಲಾಖೆ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾವನ್ನು ವಿಮಲನಾಥ ಜೈನ್‌ ಅಸೋಸಿಯೇಶನ್‌ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೂಮಳೆಗರೆದು ಸ್ವಾಗತಿಸಿದರಲ್ಲದೆ ಚಪ್ಪಾಳೆ ತಟ್ಟಿ ಆತ್ಮಸ್ಥೈರ್ಯ ತುಂಬಿದರು.  ಪೊಲೀಸರು ಮುಖ್ಯರಸ್ತೆಗೆ ಆಗಮಿಸುತ್ತಿದ್ದಂತೆ ಬೀದಿಗಿಳಿದ ಜೈನ್‌ ಸಮುದಾಯದ ಯುವಕರು, ಮಹಿಳೆಯರು ಹಾಗೂ ಮಕ್ಕಳು ಹೂಮಳೆಗರೆದರು. ಎಸ್ಪಿ ಕೆ.ಜಿ. ದೇವರಾಜ್‌ ನೇತೃತ್ವದಲ್ಲಿ ಜಾಥಾ ಜರುಗಿತು.

Advertisement

ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ವಿಜಯಕುಮಾರ ಸಂತೋಷ್‌, ಸಿಪಿಐಗಳಾದ ಭಾಗ್ಯವತಿ, ಚಿದಾನಂದ, ಸಂತೋಷ ಪವಾರ್‌, ಜೈನ ಸಮುದಾಯದ ಅಂಬಾಲಾಲ್‌ ಜೈನ್‌, ಚುನಿಲಾಲ್‌ ಜೈನ್‌, ಮೊದಲಾದವರಿದ್ದರು.

ಜನತೆ ಹೂಮಳೆಗೈದು ನಮ್ಮನ್ನು ಸ್ವಾಗತಿಸಿದ ಪರಿ ಇನ್ನಷ್ಟು ಪರಿಣಾಮಕಾರಿ ಕೆಲಸ ಮಾಡಲು ಶಕ್ತಿ ನೀಡಿದೆ. ಆತ್ಮಸ್ಥೈರ್ಯ ತುಂಬುವಂತಹ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದ. ಕೆ.ಜಿ. ದೇವರಾಜ್‌, ಎಸ್ಪಿ

Advertisement

Udayavani is now on Telegram. Click here to join our channel and stay updated with the latest news.

Next