Advertisement

ಅಳಿವಿನಂಚಿನಲ್ಲಿರುವ ಶೀತಾಳೆ ಮರದಲ್ಲಿ ಹೂ

10:52 PM Dec 08, 2019 | Sriram |

ಉಡುಪಿ: ಅಳಿವಿನ ಅಂಚಿನಲ್ಲಿರುವ ಶೀತಾಳೆ ಮರ ಆತ್ರಾಡಿ ಹತ್ತಿರ ಪರೀಕ ರಸ್ತೆಯ ಬಳಿ ಹೂ ಬಿಟ್ಟಿದೆ.

Advertisement

ಇದು ತಾಳೆಬೊಂಡದ ಮರವೂ ಅಲ್ಲ, ಬೈನೆ ಮರವೂ ಅಲ್ಲ. ಶೀತಾಳೆ ಮರ ಅಳಿವಿನ ಅಂಚಿನಲ್ಲಿರುವ ಕಾರಣ ಕೆಂಪು ಪಟ್ಟಿಗೆ ಸೇರಿಸಲಾಗಿದೆ. ಇದು ಬರಗಾಲದ ಸೂಚನೆ ಎಂಬ ತಪ್ಪು ಕಲ್ಪನೆ ಇರುವುದರಿಂದ ಇದನ್ನು ಕಡಿದು ಹಾಕುತ್ತಾರೆ. ಕಡಿಯುವುದರ ಹಿಂದೆ ಇದರ ಪ್ರಯೋಜನವಿತ್ತೇ ವಿನಾ ತಪ್ಪು ಕಲ್ಪನೆಯಿರಲಿಲ್ಲ. ಆದರೆ ಈಗ ವಿನಾ ಕಾರಣ ಕಡಿದು ಅಳಿವಿನ ಅಂಚಿಗೆ ಮುಟ್ಟಿದೆ. ಇದರೊಳಗಿನ ಹಿಟ್ಟಿನಿಂದ ದೋಸೆಯಂತಹ ಖಾದ್ಯಗಳನ್ನು ತಯಾರಿ ಸಬಹುದಾಗಿದೆ ಎನ್ನುತ್ತಾರೆ ಸಂಶೋಧಕ ಎಸ್‌.ಎ.ಕೃಷ್ಣಯ್ಯನವರು.

ಇದರಿಂದ ಮಾಡಿದ ಕಂಬ, ತೊಲೆಗಳನ್ನು ಮನೆಗೆ ಬಳಸುತ್ತಿದ್ದರು. ಪಂಚವಟಿಯಲ್ಲಿ ಈ ಮರದಿಂದ ತಯಾರಿಸಿದ ಪರ್ಣಕುಟೀರದಲ್ಲಿ ರಾಮಚಂದ್ರ ಇದ್ದಿದ್ದ. “ಪಣೋಲಿ’ ಶಬ್ದದಿಂದ ಪರ್ಣಕುಟಿ ಶಬ್ದ ಬಂದಿದೆ. ಇದು ಶ್ರೀಲಂಕಾದಲ್ಲಿ ರಾಷ್ಟ್ರೀಯ ಪುಷ್ಪವಾಗಿದೆ. ಮೊದಲ ಶಾಸನವೆನಿಸಿದ ತಿರುಚನಾಪಳ್ಳಿ ಶಾಸನದಲ್ಲಿ ಮಹಾದೇವ ದೇವಸ್ಥಾನ ನಿರ್ಮಿಸಲು ಈ ಮರವನ್ನು ಬಳಸಿದ್ದು ಕಂಡುಬಂದಿದೆ. ಇದು 9ನೆಯ ಶತಮಾನಕ್ಕೆ ಸೇರಿದೆ ಎಂಬುದರತ್ತ ಕೃಷ್ಣಯ್ಯ ಬೆಟ್ಟು ಮಾಡುತ್ತಾರೆ.

ಇದನ್ನು ಸಂಸ್ಕೃತದಲ್ಲಿ ಅವಿನಾಶಿ ಎಂದು ಕರೆಯುತ್ತಾರೆ. ಊಧ್ವìಮುಖವಾಗಿ ಬೆಳೆದು ಮತ್ತೆ ಸ್ಯಾಕೊÕàಫೋನ್‌ ರೀತಿಯಲ್ಲಿ ಬೆಳೆಯುವ ಕಾರಣ ಅಧೋಕ್ಷಜ ಎಂಬ ಹೆಸರೂ ಇದೆ. 12 ವರ್ಷಗಳ ಹಿಂದೆ ಪೊಳಲಿ ಕಾಡಿನಲ್ಲಿ ಕಂಡಿದ್ದೆ. ಪಡುಪಣಂಬೂರು ಎಸ್‌ಬಿಐ ಎದುರು ಒಂದು ಮರವಿತ್ತು. ಅದರಿಂದ ಬೀಜಗಳನ್ನು ತಯಾರಿಸಿ ಬೇರೆ ಬೇರೆ ಕಡೆ ವಿತರಿಸಿದ್ದೇವೆ. ಇಂತಹ ಮರಗಳು ಕೇರಳ, ಕೊಡಗಿನಲ್ಲಿದ್ದಿದ್ದರೆ ಪ್ರಾಕೃತಿಕ ಅಸಮತೋಲನ ನಡೆಯುತ್ತಿರಲಿಲ್ಲ. ಬಾರಕೂರು, ಬಸೂÅರು ಕೋಟೆ ಬಳಿ ಇರುವ ಇದೇ ಜಾತಿಗೆ ಸೇರಿದ ಮರದಿಂದ ಮಣ್ಣಿನ ಸವೆತ ಉಂಟಾಗಲಿಲ್ಲ ಎಂದು ಕೃಷ್ಣಯ್ಯ ಹೇಳುತ್ತಾರೆ.

ಶೀತಾಳೆ ಮರದಲ್ಲಿ ಎಂಟು ತಿಂಗಳು ಹೂವು ಕಂಡರೆ, ಎಂಟು ತಿಂಗಳು ಕಾಯಿ ಇರುತ್ತದೆ. ಇದು ಮೊಳಕೆ ಬರಲು 66 ದಿನ ಬೇಕು. 120 ದಿನಗಳ ಬಳಿಕ ಕುಡಿ ಬರುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next