Advertisement

ಹೂ, ಹಣ್ಣು ದುಬಾರಿ

12:59 AM Aug 08, 2019 | Lakshmi GovindaRaj |

ಬೆಂಗಳೂರು: ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬಕ್ಕೆ ನಗರ ಸಜ್ಜಾಗಿದೆ. ಆದರೆ, ಹೂ, ಹಣ್ಣು ಮತ್ತು ತರಕಾರಿಗಳ ಬೆಲೆ ಗಗನಕ್ಕೇರಿದೆ! ವರಮಹಾಲಕ್ಷ್ಮೀ ಹಬ್ಬದ ತಯಾರಿಗೆ ಮುಂದಾಗಿರುವ ಮಹಿಳೆಯರು ಕನಕಾಂಬರ, ಸೇವಂತಿಗೆ ಮತ್ತು ಮಲ್ಲಿಗೆ ಹೂ ಬೆಲೆ ಕೇಳಿ ತಬ್ಬಿಬ್ಟಾಗಿದ್ದಾರೆ. ಶ್ರಾವಣ ಮಾಸದ ಹಿನ್ನೆಲೆ ಪೂಜಾ ಕೈಂಕರ್ಯ, ನೈವೇದ್ಯ ಮತ್ತು ಪ್ರಸಾದ ಸಿದ್ಧಪಡಿಸಲು ಹಣ್ಣು ಮತ್ತು ತರಕಾರಿ ಅವಶ್ಯವಿದ್ದು, ಇವುಗಳ ಬೆಲೆಯೂ ಏರಿಕೆಯಾಗಿದೆ.

Advertisement

ವರಮಹಾಲಕ್ಷ್ಮೀ ಮೂರ್ತಿಗಳ ಅಲಂಕಾರಕ್ಕೆ ಬಳಸುವ ತಾವರೆ ಮೊಗ್ಗು, ಕೇದಿಗೆ, ತಾಳೆ ಎಲೆ ವಿನ್ಯಾಸಗಳು, ಸರ, ಬಳೆಗಳ ಬೆಲೆಯೂ ದುಪ್ಪಾಟಾಗಿದೆ. ದೇವನಹಳ್ಳಿ, ಸರ್ಜಾಪುರ, ಶಿಡ್ಲಘಟ್ಟ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಕನಕಪುರ, ಚನ್ನಪಟ್ಟಣದಿಂದ ಹೆಚ್ಚಾಗಿ ಹೂವು ಹಣ್ಣುಗಳು ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರ ಸೇರಿ ಹಲವು ಮಾರುಕಟ್ಟೆಗೆ ಬಂದಿವೆ.

ಕೆ.ಆರ್‌.ಮಾರುಕಟ್ಟೆಯಲ್ಲಿ ಕನಕಾಂಬರ ಒಂದು ಕೆ.ಜಿಗೆ 1200 ರೂ., ಕಾಕಡ ಹಾಗೂ ಮಲ್ಲಿಗೆ 300 ರೂ., ಸುಗಂಧರಾಜ ಹಾರಗಳು 150 ರೂ., ಮಾರಾಟವಾಗುತ್ತಿದೆ. ಸೇವಂತಿಗೆ ಹೂ ಕಳೆದ ವಾರ 50 ರೂ. ಇದ್ದ ಬೆಲೆ ಪ್ರಸ್ತುತ 400ರಿಂದ 500 ರೂ. ಗಡಿ ದಾಟಿದೆ. ಹಣ್ಣುಗಳಲ್ಲಿ ದ್ರಾಕ್ಷಿ 200 ರೂ., ಸೇಬು 150 ರೂ. ದರದಲ್ಲಿ ಏರಿಕೆ ಕಂಡಿದೆ.

ಬುಧವಾರ ಮಳೆಯನ್ನೂ ಲೆಕ್ಕಿಸದೆ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದರು. ಹಬ್ಬದ ಅಂಗವಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಜನ ಸೇರಿದ ಕಾರಣ ಸುತ್ತಲಿನ ಪ್ರದೇಶ ಜನದಟ್ಟಣೆಯಿಂದ ಕೂಡಿದ್ದು, ವಾಹನ ಸಂಚಾರ ಸುಧಾರಿಸಲು ಪೊಲೀಸರು ಹರಸಾಹಸ ಪಡಬೇಕಾಗಿತು.

ಕನಕಾಂಬರ ಕೆ.ಜಿ.ಗೆ ಸಾವಿರ ರೂ. ಗಡಿ ದಾಟಿದ್ದು, ಕಾಕಡ ಹಾಗೂ ಮಲ್ಲಿಗೆ ಹೂವಿನ ಬೆಲೆ ಕೂಡ ಏರಿಕೆಯಾಗಲಿದೆ. ಮಾರುಕಟ್ಟೆಗೆ ಹೂ ಮತ್ತು ಹಣ್ಣುಗಳು ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಕಾರಣ ಬೆಲೆ ಹೆಚ್ಚಳವಾಗಿದೆ.
-ಪ್ರಭಾಕರ್‌, ಹೂ ವ್ಯಾಪಾರಿ

Advertisement

ಮಾರಕಟ್ಟೆ ದರ (ಕೆ.ಜಿಗೆ)
ಹಣ್ಣು-ಕಾಯಿ ದರ (ರೂ.ಗಳಲ್ಲಿ)
ಸೇಬು 120-150
ಪೇರಳೆ 80-100
ದಾಳಿಂಬೆ 150-200
ದ್ರಾಕ್ಷಿ 200- 220
ಸೀತಾಫಲ 38-70
ಏಲಕ್ಕಿಬಾಳೆಹಣ್ಣು 100-150
ಪಚ್ಚ ಬಾಳೆಹಣ್ಣು 50-80
ತೆಂಗಿನಕಾಯಿ ಜೊತೆ 15-30
ಬಾಳೆಕಂಬ ಜೊತೆ 40-60

ಹೂವಿನ ದರ (ರೂ.ಗಳಲ್ಲಿ)
ಹೂವು 1 ಕೆ.ಜಿಗೆ 1 ಮಾರಿಗೆ
ಕನಕಾಂಬರ 1200-1250 200-250
ಮಲ್ಲಿಗೆ 150-200 80
ಸುಗಂಧರಾಜ 150-200 80-100(ಹಾರಕ್ಕೆ)
ಸೇವಂತಿಗೆ 400-500 100
ಚೆಂಡು ಹೂ 80-100 40
ಮಾವಿನಸೊಪ್ಪು ಕಟ್ಟು 10-15
ವಿಳೆದ್ಯೆಲೆ ಕಟ್ಟು 50-100

Advertisement

Udayavani is now on Telegram. Click here to join our channel and stay updated with the latest news.

Next