Advertisement
ಕಳೆದ ವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಟೊಮ್ಯಾಟೋ ಬೆಲೆ ಏಕಾ ಏಕಿ ಏರಿಕೆಯಾಗಿದೆ. ಸೆಪ್ಟೆಂಬರ್ ಆರಂಭದಲ್ಲಿ ಕೆ.ಜಿಗೆ 10 ರೂ. ಇದ್ದ ಟೊಮ್ಯಾಟೋ ಬೆಲೆ ಕೆ.ಜಿಗೆ ಗರಿಷ್ಠ 15 ರೂ.ಗೆ ತಲುಪಿತ್ತು. ಆದರೆ ಕಳೆದ ಐದಾರು ದಿನಗಳಿಂದ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ. ಕಳೆದ ತಿಂಗಳ ಕೊನೆಯಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಜಿಲ್ಲೆ ಗಳಲ್ಲಿ ಮಳೆಯಾಗಿದೆ. ಕಡಿಮೆ ತಾಪಮಾನದಿಂದಾಗಿ ಟೊಮ್ಯಾಟೋ ಬೆಳೆಗೆ ತೀವ್ರ ಹೊಡೆತ ಬಿದ್ದಿದೆ. ನಿರಂತರ ಮಳೆಯಿಂದಾಗಿ ಟೊಮ್ಯಾಟೋ ಬೆಳೆ ಯಲು ಸಾಧ್ಯವಾಗಿಲ್ಲ. ಹೀಗಾಗಿ ಬೆಲೆಯಲ್ಲಿ ಏರಿಕೆ ಆಗಿದೆ ಎಂದು ತರಕಾರಿ ವರ್ತಕರು ಮಾಹಿತಿ ನೀಡಿªದಾರೆ.
Related Articles
Advertisement
ತರಕಾರಿ ಪೂರೈಕೆ ಅಧಿಕ ವಾಗಿದೆ. ಹೀಗಾಗಿ ತರಕಾರಿ ಬೆಲೆಯಲ್ಲಿ ವ್ಯಾತ್ಯಾಸ ವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೂವಿನ ಬೆಲೆಗಳಲ್ಲಿ ಏರಿಕೆ ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವಿನ ಬೆಲೆಯಲ್ಲಿ ಏರಿಕೆಯಾಗಿದೆ.ಕಳೆದ ಒಂದು ವಾರದ ಹಿಂದೆ ಕೆ.ಜಿಗೆ 400 ರೂ.ದಿಂದ 450 ರೂ.ಗೆ ಮಾರಾಟವಾಗುತ್ತಿದ್ದ ಮಲ್ಲಿಗೆ ಹೂವು ಕೆ.ಆರ್. ಮಾರುಕಟ್ಟೆಯಲ್ಲಿ ಸೋಮವಾರ 500ರಿಂದ 600 ರೂ.ವರೆಗೂ ಮಾರಾಟವಾಯಿತು.ಹಾಗೆಯೇ ಸೇವಂತಿಗೆ ಹೂವು ಕೆ.ಜಿಗೆ 150ರಿಂದ 180 ರೂ. ವರೆಗೂ ಖರೀದಿಯಾಯಿತು.
ಕಾಕಡ ಹೂವು 400ರೂ.ದಿಂದ 420ರೂ.ಗೆ, ಸುಗಂಧ ರಾಜ ಹೂವು ಕೆ.ಜಿಗೆ 140ರೂ.ಗೆ ಕನಕಾಂಬರ ಹೂವು ಕೆ.ಜಿಗೆ 500ರೂ.ಗೆ ಮಾರಾಟವಾಯಿತು. ಕಳೆದ ಎರಡು ದಿನಗಳಿಂದ ಹೂವುಗಳ ಬೆಲೆಯಲ್ಲಿ ಏರಿಕೆಯಾಗಿದೆ.ದಸರಾ ಹಬ್ಬದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೂವುಗಳ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ನಗರದ ಕೆ.ಆರ್.ಮಾರುಕಟ್ಟೆಯ ಹೂವಿನ ವ್ಯಾಪಾರಿ ಮಂಜುನಾಥ್ ತಿಳಿಸಿದ್ದಾರೆ.
ಈರುಳ್ಳಿ ಬೆಲೆಯಲ್ಲಿ ಬದಲಾವಣೆಯಿಲ್ಲ:-
ಈರುಳ್ಳಿ ಬೆಲೆಯಲ್ಲಿ ಅಂತಹದ್ದೇನೂ ಬದಲಾವಣೆಯಾಗಿಲ್ಲ ಎಂದು ಯಶವಂತಪುರ ಮಾರುಕಟ್ಟೆಯ ಈರುಳ್ಳಿ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ. ಸೋಮವಾರ ಯಶವಂತಪುರ ಮಾರುಕಟ್ಟೆಗೆ 47,097 ಬ್ಯಾಗ್ ಈರುಳ್ಳಿ ಪೂರೈಕೆಯಾಗಿದೆ. ಹಾಗೆಯೇ ದಾಸನಪುರ ಮಾರುಕಟ್ಟೆಗೆ 27,831 ಬ್ಯಾಗ್ ಈರುಳ್ಳಿ ಪೂರೈಕೆ ಆಗಿದೆ ಎಂದು ಯಶವಂತಪುರ ಮಾರುಕಟ್ಟೆಯ ಈರುಳ್ಳಿ ವ್ಯಾಪಾರಿ ಉದಯಶಂಕರ್ ಮಾಹಿತಿ ನೀಡಿದ್ದಾರೆ.
ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಲ್‌ಗೆ 3900 ರೂ.ದಿಂದ 4000ರೂ.ಗೆ ಮಾರಾಟವಾಯಿತು. ಹಾಗೆಯೇ ಕರ್ನಾಟಕ ಮೂಲದ ಈರುಳ್ಳಿ ಕ್ವಿಂಟಲ್‌ಗೆ 3500 ರಿಂದ 4000 ರೂ.ಗೆ ಖರೀದಿ ಆಯಿತು. ಸಣ್ಣಗಾತ್ರದ ಈರುಳ್ಳಿ 500 ರೂ.ದಿಂದ 1500ರೂ.ವರೆಗೂ ಮಾರಾಟವಾಯಿತು ಎಂದು ತಿಳಿಸಿದ್ದಾರೆ.