Advertisement

Water; ಪಾಕಿಸ್ಥಾನಕ್ಕೆ ರಾವಿ ನದಿ ನೀರು ಬಂದ್‌: ಯಾಕೆ ಬಂದ್‌?ಏನಿದರ ಮಹತ್ವ ?

01:12 AM Feb 27, 2024 | Team Udayavani |

ಶ್ರೀನಗರ: ಇನ್ನು ರಾವಿ ನದಿಯ ನೀರು ಪಾಕಿಸ್ಥಾನಕ್ಕೆ ಹರಿದು ಹೋಗದು. ಪಂಜಾಬ್‌ನ ಪಠಾಣ್‌ಕೋಟ್‌ ಜಿಲ್ಲೆಯಲ್ಲಿ, 1995ರಲ್ಲಿ ಆರಂಭ ವಾಗಿದ್ದ ಶಹಪುರ ಕಂಡಿ ಅಣೆಕಟ್ಟು ನಿರ್ಮಾಣ ಕಾರ್ಯ ಕೊನೆಗೂ ಪೂರ್ಣಗೊಂಡಿದೆ. ಅಲ್ಲಿಗೆ 45 ವರ್ಷಗ ಳಿಂದ ಪಾಕ್‌ಗೆ ಹರಿಯುತ್ತಿದ್ದ 1,150 ಕ್ಯುಸೆಕ್‌ ನೀರು ಭಾರತದಲ್ಲೇ ಉಳಿಯಲಿದೆ. ಇದೇ ನೀರು ಜಮ್ಮು ಕಾಶ್ಮೀರದ ಸಾಂಬಾ, ಕಥುವಾದ 32 ಸಾವಿರ ಹೆಕ್ಟೇರ್‌ ಪ್ರದೇಶದ ಕೃಷಿ ಕಾರ್ಯಕ್ಕೆ ಬಳಕೆಯಾಗಲಿದೆ.

Advertisement

ಯಾಕೆ ಬಂದ್‌?
1960ರಲ್ಲಿ ಭಾರತ-ಪಾಕಿಸ್ಥಾನ ಮಧ್ಯೆ ಇಂಡಸ್‌ ವ್ಯಾಲಿ ಒಪ್ಪಂದ. ರಾವಿ, ಬಿಯಾಸ್‌, ಸಟ್ಲೆಜ್‌ ನದಿಗಳ ಮೇಲೆ ಭಾರತಕ್ಕೆ ಹಕ್ಕು. ಇಂಡಸ್‌, ಚೆನಾಬ್‌, ಜೇಲಮ್‌ ನದಿಗಳ ಮೇಲೆ ಪಾಕ್‌ಗೆ ಹಕ್ಕು.

ರಾವಿ ನೀರು ಪಾಕ್‌ಗೆ ಹೋಗುವುದನ್ನು ತಡೆ ಯಲು 1979ರಲ್ಲಿ ಜಮ್ಮುಕಾಶ್ಮೀರ- ಪಂಜಾಬ್‌ ಮಧ್ಯೆ ಒಪ್ಪಂದ. ಆದರೂ ಎರಡೂ ರಾಜ್ಯಗಳ ನಡುವೆ ಕಾನೂನು ಸಂಘರ್ಷ.

95ರಲ್ಲಿ ಶುರುವಾಗಿದ್ದ ವಿವಾದಿತ ಶಹಪುರ ಕಂಡಿ ಅಣೆಕಟ್ಟು ಕಾಮಗಾರಿ ಈಗ ಮುಕ್ತಾಯ. ಭಾರತದಲ್ಲೇ ಉಳಿಯಲಿದೆ ರಾವಿ ನೀರು.

ಏನಿದರ ಮಹತ್ವ ?
ಪಂಜಾಬ್‌ನಲ್ಲಿ ಶಹಪುರ ಕಂಡಿ, ಪಂಜಾಬ್‌-ಜಮ್ಮುಕಾಶ್ಮೀರ ಗಡಿಯಲ್ಲಿ ರಣಜಿತ್‌ ಸಾಗರ್‌ ಅಣೆಕಟ್ಟು ನಿರ್ಮಾಣ.
ಪಾಕ್‌ಗೆ ಅನಗತ್ಯವಾಗಿ ನೀರು ಹೋಗುವುದನ್ನು ತಡೆಯುತ್ತವೆ ಈ ಅಣೆಕಟ್ಟುಗಳು.
206 ಮೆಗಾವ್ಯಾಟ್‌ ಸಾಮರ್ಥ್ಯದ ಜಲವಿದ್ಯುತ್‌ ಉತ್ಪಾದನೆಯೂ ಗುರಿ.
ಉತ್ಪಾದಿತ ವಿದ್ಯುತ್‌ನಲ್ಲಿ ಶೇ.20 ಜಮ್ಮು ಕಾಶ್ಮೀರಕ್ಕೆ ಲಭ್ಯ. ನೀರಿನಲ್ಲಿ ರಾಜಸ್ಥಾನಕ್ಕೂ ಪಾಲು.
ಉಳಿಯುವ ನೀರಿನಿಂದ ಸಾಂಬಾ-ಕಥುವಾ ಜಿಲ್ಲೆಗಳ 32,000 ಹೆಕ್ಟೇರ್‌ ಕೃಷಿ ಪ್ರದೇಶಗಳಿಗೆ ನೀರು.

Advertisement
Advertisement

Udayavani is now on Telegram. Click here to join our channel and stay updated with the latest news.

Next