Advertisement
40 ವರ್ಷದ ಮಹಿಳೆ ಕೋರೆ ಜುರ್ಗೆನ್ಸನ್, ಯುನಿಕಾರ್ನ್ ವೇಷ ತೊಟ್ಟು ಮನೆ ಬಳಿ ಬೀದಿಗಳಲ್ಲಿ ಕುಣಿಯುತ್ತಾ, ಹಾಡುತ್ತಾ ಎಲ್ಲರನ್ನೂ ರಂಜಿಸಿದ್ದಾರೆ. ಮನೆಯಲ್ಲಿದ್ದವರು ಬಾಲ್ಕನಿಗೆ ಬಂದು ಮಹಿಳೆಯ ವೇಷ ನೋಡಿ ಸಂತೋಷ ಪಟ್ಟಿದ್ದಾರೆಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ತಮ್ಮ ಸ್ನೇಹಿತರೊಬ್ಬರು ಪ್ರಾಣಿಯೊಂದರ ವೇಷ ತೊಟ್ಟು ರಸ್ತೆಯಲ್ಲಿ ಸಂಚರಿಸಿ ಜನರನ್ನು ಸಂತೋಷ ಪಡಿಸಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ನೀವೂ ಹೀಗೆ ಮಾಡ್ತೀರಾ ಎಂದು ಸವಾಲು ಹಾಕಿದ್ದರು. ಹಾಗಾಗಿ ಆ ಸವಾಲನ್ನು ಸ್ವೀಕರಿಸಿ ಯುನಿಕಾರ್ನ್ ವೇಷ ತೊಟ್ಟು ಜನರನ್ನು ರಂಜಿಸಿದ್ದೇನೆ ಎಂದಿದ್ದಾರೆ ಜುರ್ಗೆನ್ಸನ್. ಮಹಿಳೆ ಬೀದಿಯಲ್ಲಿ ಸಂಚರಿಸುವಾಗ ವಾಹನಗಳಲ್ಲಿ ತೆರಳುತ್ತಿದ್ದವರು ಆಕೆಗೆ ಚಪ್ಪಾಳೆ ತಟ್ಟಿ ಗೌರವ ಕೂಡ ಸಲ್ಲಿಸಿದ್ದಾರಂತೆ. Advertisement
ಪ್ರಜೆಗಳ ಮನ ತಣಿಸಿದ ಯುನಿಕಾರ್ನ್ !
05:04 PM Apr 24, 2020 | mahesh |
Advertisement
Udayavani is now on Telegram. Click here to join our channel and stay updated with the latest news.