ವಾಷಿಂಗ್ಟನ್/ಮೆಲ್ಬೋರ್ನ್: ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಒಂದರ ಮೇಲೊಂದರಂತೆ ದಾಳಿಗಳು ನಡೆಯುತ್ತಿವೆ. ಲಂಡನ್‌ನಲ್ಲಿ ಮೂವರು ಉಗ್ರರು ದಾಳಿ ನಡೆಸಿ 7 ಮಂದಿಯನ್ನು ಹತ್ಯೆಗೈದ ಬೆನ್ನಲ್ಲೇ ಸೋಮವಾರ ಅಮೆರಿಕದ ಫ್ಲೋರಿಡಾದಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ 5 ಮಂದಿಯನ್ನು ಹತ್ಯೆಗೈದಿದ್ದಾನೆ. ಮತ್ತೂಂದೆಡೆ, ಆಸ್ಟ್ರೇಲಿಯಾದಲ್ಲಿ ಬ್ರೈಟನ್‌ನಲ್ಲಿ ಉಗ್ರರು ಅಟ್ಟಹಾಸಗೈದಿದ್ದಾರೆ.
ಒರ್ಲಾಂಡೋದಲ್ಲಿ ಪಲ್ಸ್ ನೈಟ್‌ಕ್ಲಬ್ ಶೂಟಿಂಗ್‌ನ ವರ್ಷಾಚರಣೆ ಸಮೀಪಿಸುತ್ತಿರುವಾಗಲೇ ಫ್ಲೋರಿಡಾದಲ್ಲಿ ದಾಳಿ ನಡೆದಿದೆ. ಬಂದೂಕು ಹಿಡಿದುಕೊಂಡು ಬಂದ ವ್ಯಕ್ತಿ ಯೊಬ್ಬ ತಾನು ಹಿಂದೆ ಕೆಲಸ ಮಾಡುತ್ತಿದ್ದ ಕಚೇರಿಗೆ ನುಗ್ಗಿ, ಒಂದೇ ಸಮನೆ ಗುಂಡಿನ ಮಳೆಗರೆದಿದ್ದಾನೆ. ಪರಿಣಾಮ ಒಬ್ಬ ಮಹಿಳೆ ಸೇರಿದಂತೆ ಐವರು ಸ್ಥಳದಲ್ಲೇ ಅಸುನೀಗಿದ್ದಾರೆ. ನಂತರ, ದಾಳಿಕೋರನೂ ತನಗೆ ತಾನೇ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಏಪ್ರಿಲ್‌ನಲ್ಲಿ ಕೆಲಸದಿಂದ ಕಿತ್ತುಹಾಕಿದ್ದ ಕೋಪಕ್ಕೆ ಆತ ಹೀಗೆ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.
ಆಸ್ಟ್ರೇಲಿಯಾದಲ್ಲಿ ಉಗ್ರರಿಂದ ಒತ್ತೆಸೆರೆ ಯತ್ನ: ಇನ್ನು ಆಸ್ಟ್ರೇಲಿಯಾದ ಬೇ ಸ್ಟ್ರೀಟ್ ಅಪಾರ್ಟ್ ಮೆಂಟ್‌ಗೆ ನುಗ್ಗಿದ ಬಂದೂಕು ಧಾರಿಗಳು ಏಕಾಏಕಿ ಗುಂಡಿನ ಹಾರಾಟ ನಡೆಸಿದ್ದಾರೆ. ಗುಂಡು ಹಾಗೂ ಸ್ಫೋಟದ ಸದ್ದಿಗೆ ಬೆದರಿದ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಈ ವೇಳೆ ಉಗ್ರರು ಅಪಾರ್ಟ್‌ಮೆಂಟ್‌ವೊಳಗಿದ್ದ ಮಹಿಳೆಯೊಬ್ಬರನ್ನು ಒತ್ತೆಯಲ್ಲಿಟ್ಟುಕೊಂಡು, ಸುದ್ದಿವಾಹಿನಿ ಯೊಂ ದಕ್ಕೆ ಕರೆ ಮಾಡಿ, “ಇದು ಇಸ್ಲಾಮಿಕ್ ಸ್ಟೇಟ್‌ಗಾಗಿ. ಇದು ಅಲ್‌ಖೈದಾಗಾಗಿ’ ಎಂದು ಕೂಗಿಕೊಂಡಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಅಪಾರ್ಟ್ ಮೆಂಟ್‌ನೊಳಕ್ಕೆ ನುಗ್ಗಿ ಒಬ್ಬ ಬಂದೂಕುಧಾರಿ ಯನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಾಗಲೇ ಅಪಾರ್ಟ್‌ಮೆಂಟ್‌ವೊಳಗೆ ಮತ್ತೂಬ್ಬ ಬಂದೂಕುಧಾರಿಯ ಮೃತದೇಹವೂ ಪತ್ತೆಯಾಗಿದೆ. ಗುಂಡಿನ ಚಕಮಕಿ ವೇಳೆ ಒತ್ತೆಯಲ್ಲಿದ್ದ ಮಹಿಳೆ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಣೆ ಹೊತ್ತ ಐಸಿಸ್
ಇದೇ ವೇಳೆ, ಭಾನುವಾರ ಲಂಡನ್ ಸ್ಟ್ರೀಟ್‌ನಲ್ಲಿ ದಾಳಿ ನಡೆಸಿ ಹತ್ಯೆಗೀಡಾದ ಮೂವರು ಉಗ್ರರ ಪೈಕಿ ಒಬ್ಟಾತ ಪಾಕಿಸ್ತಾನದ ಮೂಲದವನು ಎಂದು ಪೊಲೀಸರು ತಿಳಿಸಿದ್ದಾರೆ. ಅಬ್j(27) ಎಂಬ ಹೆಸರಿನ ಈತನೇ ಮೂವರು ಉಗ್ರರ ತಂಡದ ರಿಂಗ್ ಲೀಡರ್ ಆಗಿದ್ದ ಎನ್ನಲಾಗಿದೆ. ಘಟನೆ ಸಂಬಂಧ ಸೋಮವಾರವೂ ಲಂಡನ್ ಪೊಲೀಸರು ಹಲವು ಕಡೆ ದಾಳಿ ನಡೆಸಿ, 12ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಏತನ್ಮಧ್ಯೆ, ಲಂಡನ್ ದಾಳಿಯ ಹೊಣೆಯನ್ನು ಐಸಿಸ್ ಉಗ್ರರು ಹೊತ್ತುಕೊಂಡಿದ್ದಾರೆ.