Advertisement

ಫ್ಲೋರಾ ಆ್ಯಂಡ್‌ ಫೌನಾ

12:30 AM Jan 04, 2019 | |

ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದಾಳೆ. ನಟಿಸಿದ ಚಿತ್ರಗಳ ಸಂಖ್ಯೆ 50 ದಾಟಿದೆ. ಆದರೆ, ಫ್ಲೋರಾ ಸೈನಿ ಎಂಬ ನಟಿಯ ಹೆಸರು ಪ್ರಖರವಾಗಿ ಕೇಳಿ ಬಂದದ್ದು ಸ್ತ್ರೀ  ಚಿತ್ರದ ಬಳಿಕ. ನಟಿ ಅಥವಾ ನಟನನ್ನು ಜನಪ್ರಿಯಗೊಳಿಸಲು ಒಂದು ಚಿತ್ರ ಸಾಕು ಎನ್ನುವುದಕ್ಕೆ ಫ್ಲೋರಾ ಸೈನಿಯೇ ಉದಾಹರಣೆ. ಹಾಗೆ ನೋಡಿದರೆ 19 ವರ್ಷದ ಹಿಂದೆಯೇ ಸಬ್‌ಸೆ ಬಡಾ ಬೇ ಇಮಾನ್‌ ಮತ್ತು ಯೇ ಹೈ ಗ್ರೀನ್‌ ಸಿಗ್ನಲ್‌ ಎಂಬೆರಡು ಚಿತ್ರಗಳಲ್ಲಿ ಫ್ಲೋರಾ ನಟಿಸಿದ್ದಳು. ಅನಂತರ ಭಾಗ್ಯ ವಿಧಾತ, ಲವ್‌ ಇನ್‌ ನೇಪಾಲ್‌, ದಬಂಗ್‌ 2, ಯೇ ರಬ್‌, ಲಕ್ಷ್ಮೀ, ಗುಡ್ಡು ಗುಣ್‌, ಬೇಗಮ್‌ ಜಾನ್‌ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾಳೆ. ಈ ನಡುವೆ ಕನ್ನಡ, ತಮಿಳು, ತೆಲುಗು, ಪಂಜಾಬಿ ಭಾಷೆಗಳಲ್ಲಿ ಸಿಕ್ಕಿದ ಅವಕಾಶಗಳು ಧಾರಾಳ.

Advertisement

ಇಷ್ಟೆಲ್ಲ ಆದರೂ ರಾಷ್ಟ್ರಮಟ್ಟದಲ್ಲಿ ಮಿಂಚಬೇಕೆಂಬ ಅಭಿಲಾಷೆ ಈಡೇರಿದ್ದು ಮಾತ್ರ ಸ್ತ್ರೀ ಚಿತ್ರದಿಂದ. ಇದು 2018ರ ಸೂಪರ್‌ಹಿಟ್‌ ಚಿತ್ರಗಳಲ್ಲಿ ಒಂದು ಮಾತ್ರವಲ್ಲದೆ, ಗಳಿಕೆಯಲ್ಲೂ ಉತ್ತಮ ನಿರ್ವಹಣೆ ತೋರಿಸಿದೆ. ಸ್ತ್ರೀ ಓ ಸ್ತ್ರೀ ಕಲ್‌ ಆನಾ ಡೈಲಾಗ್‌ ಬಹಳ ಜನಪ್ರಿಯವಾಗಿದೆ. ಚಿತ್ರದ ನಿರ್ದೇಶಕರೇ ಈ ಡೈಲಾಗ್‌ ಹೇಳಿ ಅವಳನ್ನು ಕಿಚಾಯಿಸುತ್ತಿದ್ದಾರಂತೆ. ಗಂಧಿ ಬಾತ್‌ ಎಂಬ ವೆಬ್‌ ಚಿತ್ರದಲ್ಲೂ ಫ್ಲೋರಾ ನಟಿಸಿದ್ದಾಳೆ. ಇದರ ಬೆನ್ನಿಗೆ ಈಗ ಫ್ರಾಡ್‌ ಸೈಯಾಮ್‌ ಎಂಬ ಇನ್ನೊಂದು ವೆಬ್‌ ಚಿತ್ರ ರೆಡಿಯಾಗಿದೆ. ಸ್ತ್ರೀ ಬಳಿಕ ಈಗ ಫ್ಲೋರಾಳಿಗೆ ಬಾಲಿವುಡ್‌ನಿಂದ ಅವಕಾಶಗಳು ಹರಿದು ಬರಲು ತೊಡಗಿದೆ. ಹೀಗೊಂದು ಪವಾಡ ಸಂಭವಿಸಲು 20 ವರ್ಷಗಳೇ ಬೇಕಾಯಿತು ಎನ್ನುವ ವಿಷಾದವೂ ಅವಳಿಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next