Advertisement
ಅವರಿಗೆ 164 ಮತಗಳು ಪ್ರಾಪ್ತಿಯಾಗಿವೆ. ವಿಪಕ್ಷ ಎಂವಿಎ ವತಿಯಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಶಾಸಕ ರಾಜನ್ ಸಾಳ್ವಿ ಅವರಿಗೆ 107 ಮತಗಳು ಸಿಕ್ಕಿವೆ. ಹೀಗಾಗಿ ಸೋಮವಾರ ನಡೆಯುವ ವಿಶ್ವಾಸಮತ ಯಾಚನೆಯಲ್ಲಿಯೂ ಕೂಡ ಹೊಸ ಸರಕಾರ ಬಚಾವ್ ಆಗು ವುದು ಬಹುತೇಕ ನಿಶ್ಚಿತ.
Related Articles
Advertisement
ಇಂದು ವಿಶ್ವಾಸಮತ: ಸಿಎಂ ಏಕನಾಥ ಶಿಂಧೆ ನೇತೃತ್ವದ ಸರಕಾರ ವಿಶ್ವಾಸಮತ ಯಾಚನೆ ಮಾಡಲಿದೆ. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 144 ಸ್ಥಾನಗಳು ಬೇಕು. ಬಿಜೆಪಿ 106, ಏಕನಾಥ ಶಿಂಧೆ ಬಣದ 39, 10 ಮಂದಿ ಪಕ್ಷೇತರರು ಇದ್ದಾರೆ. ಇನ್ನು ವಿಪಕ್ಷ ಎಂವಿಎನಲ್ಲಿ ಶಿವಸೇನೆ 16, ಎನ್‌ಸಿಪಿ 53, ಕಾಂಗ್ರೆಸ್ 44- ಹೀಗೆ 116 ಸ್ಥಾನಗಳನ್ನು ಹೊಂದಿವೆ. ಎಐಎಂಐಎಂ2, ಎಸ್‌ಪಿ-2, ಸ್ವತಂತ್ರ ಶಾಸಕರು-3, ಬಿವಿಎ-3, ಎಂಎನ್‌ಎಸ್-1 ಸ್ಥಾನಗಳನ್ನು ಹೊಂದಿವೆ. ಸಮಾಜವಾದಿ ಪಕ್ಷದ ಶಾಸಕರು ಸ್ಪೀಕರ್ ಚುನಾ ವಣೆ ಯಲ್ಲಿಯೂ ಭಾಗವಹಿಸಿರಲಿಲ್ಲ. ಒಂದು ವೇಳೆ, ಸೋಮವಾರದ ವಿಶ್ವಾಸ ಮತ ದಲ್ಲಿಯೂ ಭಾಗವಹಿಸದಿದ್ದರೆ ಮಾಜಿ ಸಿಎಂ ಉದ್ಧವ್ ಠಾಕ್ರೆಗೆ ಭಾರೀ ಹಿನ್ನಡೆಯಾಗಲಿದೆ.
ಶಿಂಧೆ ಬಣದ ಶಾಸಕರಿಗೆ ಭಾರೀ ಪ್ರಮಾಣದಲ್ಲಿ ಭದ್ರತೆ ಒದಗಿಸಲಾಗಿದೆ.ಅದನ್ನು ನೋಡಿದರೆ, ಉಗ್ರ ಕಸಬ್‌ಗ ನೀಡಿದ್ದ ರಕ್ಷಣೆ ಕಡಿಮೆ ಅನಿಸುತ್ತಿ¤ದೆ. ನಿಮಗೆ ಯಾರಾ ದರೂ ಓಡಿ ಹೋಗುತ್ತಾರೆ ಎಂಬ ಭಯ ಇದೆಯೇ?-ಅದಿತ್ಯ ಠಾಕ್ರೆ, ಮಾಜಿ ಸಚಿವ