ಮುರಿಯದ ಬಿಲ್ಲೆಕಲ್ಲುಗಳನ್ನು ಆಯ್ದು ಕೊಳ್ಳಬೇಕಾಗುತ್ತದೆ. ಹಾಗೆಯೇ ವಿನ್ಯಾಸ ಎದ್ದು ಕಾಣುವಂತಿರಬೇಕು, ಒಳಾಂಗಣಕ್ಕೆ ಸೂಕ್ತವಾಗಿರುವ ಟೈಲ್ಸ್ ಗಳನ್ನು, ಮುಖ್ಯವಾಗಿ ಡ್ರಾಯಿಂಗ್ ರೂಮ್ಸ್ , ಬೆಡ್ ರೂಮ್ ಇತ್ಯಾದಿ ಜಾಗದಲ್ಲಿ ಬಳಸಬೇಕಾಗುತ್ತದೆ. ನೀರು ಬೀಳುವ ಜಾಗಗಳಲ್ಲಿ ವಿಶೇಷವಾಗಿ ತಯಾರಾಗಿರುವ ಟೈಲ್ಸ್‌ಗಳನ್ನು ಬಳಸಬೇಕು.
Advertisement
ಜಾರುವ ಟೈಲ್ಸ್ ಗಳುಇತ್ತೀಚೆಗೆ ಬರುತ್ತಿರುವ ಟೈಲ್ಸ್ ಗಳು ಅತಿ ಹೆಚ್ಚು ಎನ್ನುವಷ್ಟು ಪಾಲಿಶ್ ಹೊಂದಿರುತ್ತವೆ. ಅದರಲ್ಲೂ ಒಂದೆರೆಡು ನೀರ ಹನಿ ಬಿದ್ದರೂ ಸಾಕು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ದೊಡ್ಡ ಗಾತ್ರದ ಟೈಲ್ಸ್‌ಗಳ ಮಧ್ಯೆ ಅಂದರೆ ಎರಡು ಅಡಿಗೆ ಎರಡು ಅಡಿ ಅಗಲದ ಅನಂತರ ಒಂದು ಇಲ್ಲವೇ ಎರಡು ಇಂಚು ಅಗಲದ ಕಾಂಟ್ರಾಸ್ಟ್ ಪಟ್ಟಿಗಳನ್ನು ಅಳವಡಿಸಿದರೆ ನೋಡಲು ಸುಂದರವಾಗಿ ಕಾಣುವುದರ ಜತೆಗೆ ಜಾರುವ ಸಾಧ್ಯತೆಯೂ ಕಡಿಮೆ ಇರುತ್ತದೆ.
ಎಲ್ಲವನ್ನೂ ಒಂದೇ ರೀತಿಯಲ್ಲಿ ಕಾಣುವಂತೆ ಮಾಡುವುದು ಇತ್ತೀಚಿನ ಫ್ಯಾಷನ್ ಎನ್ನುವಂತಾಗಿದ್ದರೂ ಕೆಲ ವಿನ್ಯಾಸಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆ. ಆದುದರಿಂದ, ನಮ್ಮ ಅಗತ್ಯಕ್ಕೆ ತಕ್ಕಂತೆ ನಾವು ಹಾಲ್ -ಲಿವಿಂಗ್ ರೂಂ ಮಧ್ಯೆಯೂ ವಿವಿಧ ಚಿತ್ತಾರಗಳನ್ನು ಮೂಡಿಸಿಕೊಂಡರೆ, ಅವು ನೋಡಲು ಅತ್ಯಾಕರ್ಷಕವಾಗಿರುವುದರ ಜತೆಗೆ ದೊಡ್ಡ ಗಾತ್ರದ ಟೈಲ್ಸ್‌ಗಳ ಮೇಲೆ ಜಾರುವ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ. ಅಡುಗೆ ಮನೆ ಹಾಗೂ ಟಾಯ್ಲೆಟ್ ಗಳಲ್ಲಿ ಹೆಚ್ಚು ಜಾರಲು ಮುಖ್ಯ ಕಾರಣ ನೀರೇ. ಆದರೂ ಕೆಲವೊಮ್ಮೆ ಇಳಿಜಾರೂ ಕೂಡ ಕಾರಣವಾಗಿರುತ್ತದೆ. ನೀರು ಸರಾಗವಾಗಿ ಹರಿದು
ಹೋಗಲು ನೀಡಿರುವ ಇಳಿಜಾರು ಸ್ವಲ್ಪ ಹೆಚ್ಚಾದರೂ ಹೆಚ್ಚು ಹೆಚ್ಚು ಜಾರುವ ಸಾಧ್ಯತೆ ಇರುತ್ತದೆ. ಆದುದರಿಂದ ಈ ಪ್ರದೇಶದಲ್ಲಿ ಸೂಕ್ತ ಬಾರ್ಡರ್ ಹಾಗೂ ಪಟ್ಟಿಗಳನ್ನು ನೀಡಿದರೆ, ಇವು ಬ್ರೇಕ್ ಮಾದರಿಯಲ್ಲಿ ಕಾರ್ಯ ನಿರ್ವಹಿಸಿ, ಜಾರುವುದನ್ನು ತಪ್ಪಿಸುತ್ತವೆ.
Related Articles
Advertisement
ಕ್ರಿಮಿಕೀಟ ನಿರೋಧಕ ಟೈಲ್ಸ್ಇತ್ತೀಚೆಗೆ ಕ್ರಿಮಿಕೀಟ ನಿರೋಧಕ ಗುಣಗಳನ್ನು ಹೊಂದಿರುವ ಟೈಲ್ಸ್‌ಗಳು ಕೂಡ ಮಾರುಕಟ್ಟೆಗೆ ಬಂದಿವೆ. ಈ ಮಾದರಿಯ ಬಿಲ್ಲೆಕಲ್ಲುಗಳಲ್ಲಿ ಪಾಚಿ ಕಟ್ಟುವುದು, ಕರೆ ಕಟ್ಟುವುದು
ಆಗುವುದಿಲ್ಲ. ಹಾಗಾಗಿ ಜಾರುವ ಸಾಧ್ಯತೆ ಕಡಿಮೆ. ಗೋಡೆ ಸೂರಿಗೆ ಹೋಲಿಸಿದರೆ ಮನೆಗಳಲ್ಲಿ ಪಾದ ತಾಗಿ ಅತಿ ಹೆಚ್ಚು ಸವಕಳಿಗೆ ಒಳಗಾಗುವ ಸ್ಥಳ ಮನೆಯ ನೆಲಹಾಸೇ ಆಗಿರುವ ಕಾರಣ ಅವುಗಳ ಆಯ್ಕೆ ಹಾಗೂ ವಿನ್ಯಾಸದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ.