Advertisement

ನೆರೆ ಪೀಡಿತ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ…

10:21 AM Sep 08, 2019 | Team Udayavani |

ಗದಗ: ನವಿತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 20 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ನರಗುಂದ ತಾಲೂಕಿನ ಶಿರೋಳ ಗ್ರಾಮದ ಹೊಳೆ ಆಂಜನೇಯ ದೇವಸ್ಥಾನ ಕೊಚ್ಚಿ ಹೋಗಿದೆ.

Advertisement

ಪ್ರತೀ ಶನಿವಾರ ಆಂಜನೇಯ ದೇವಸ್ಥಾನಕ್ಕೆ ಆಗಮಿಸಿ, ಆರಾಧಿಸುತ್ತಿದ್ದ ಭಕ್ತರ ಎದುರೇ ದೇವರ ಸನ್ನಿಧಾನ ಪ್ರವಾಹದಲ್ಲಿ ತೇಲಿ ಹೋಗಿದೆ. ಬರೋಬ್ಬರಿ ಒಂದು ತಿಂಗಳ ಹಿಂದೆ ಉಂಟಾಗಿದ್ದ ಪ್ರವಾಹದಿಂದ ಜನರು ಗ್ರಾಮ ತೊರೆದಿದ್ದರು. ನೆರೆ ನಿಂತ ಮೇಲೆ ಮತ್ತೆ ತಮ್ಮ ಗ್ರಾಮಗಳಿಗೆ ಮುಖ ಮಾಡಿ, ಅಳಿದುಳಿದ ಮನೆಗಳನ್ನು ಸ್ವಚ್ಛಗೊಳಿಸಿ, ಬುದುಕು ಕಟ್ಟಿಕೊಳ್ಳುವ ಪ್ರಯತ್ನ ನಡೆಸಿದ್ದರು. ಆದರೆ, ಈ ನಡುವೆ ಮತ್ತೆ ಪ್ರವಾಹದ ನೀರು ಗ್ರಾಮಗಳತ್ತ ಮುಖ ಮಾಡಿದ್ದರಿಂದ ಮುಂದೇನಾಗುತ್ತೋ ಎಂಬ ಭಯ ಆವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next