Advertisement
ತಾಲೂಕಿಗೆ ಹೆಚ್ಚಿನ ಮಳೆ ಬಾರದೆ ಇದ್ದರೂ ಚಿಕ್ಕಮಗಳೂರು ತಾಲೂಕಿನ ಬಾಬಾಬುಡನ್ ಗಿರಿ, ಸಾಂತವೇರಿ ಭಾಗಗಳಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆರೆ ತುಂಬಿದೆ. ವಾಡಿಕೆಯಂತೆ ಶುಕ್ರವಾರ ಅಥವಾ ಮಂಗಳವಾರ ಕೋಡಿ ಬೀಳುವುದನ್ನು ನೋಡಿದ್ದ ರೈತರಿಗೆ ಈ ಬಾರಿ ಸೋಮವಾರ ಬಿದ್ದಿರುವುದು ಅಚ್ಚರಿ ಮೂಡಿಸಿದೆ.
ಬಾಗಿನ ಅರ್ಪಿಸುವುದಾಗಿ ತಿಳಿಸಿದರು. ಮುಂದುವರಿದ ವರುಣನ ಅಬ್ಬರ ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಸೋಮವಾರವೂ ಮಳೆ ಮುಂದುವರಿದಿದೆ. ನಿರಂತರ ಮಳೆಯಿಂದ ಕೆಲ ಮನೆಗಳು ಕುಸಿದು ಹಾನಿಯಾಗಿದೆ. ಮೂಡಿಗೆರೆ, ಕೊಪ್ಪ, ಎನ್.ಆರ್. ಪುರ, ಶೃಂಗೇರಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಮೂಡಿಗೆರೆ ತಾಲೂಕಿನ ಬಣಕಲ್, ಜಾವಳಿ, ಮಾಗುಂಡಿ, ಕಳಸ, ಹೊರನಾಡು, ಕೊಟ್ಟಿಗೆಹಾರದಲ್ಲಿ ಸತತ ಮಳೆಯಾಗುತ್ತಿದೆ. ಮೂಡಿಗೆರೆ ಸುತ್ತಮುತ್ತ ಮಳೆಯಾಗುತ್ತಿರುವುದರಿಂದ ಚಾರ್ಮಾಡಿ ಘಾಟಿಯಲ್ಲಿ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಘಾಟಿಯ ರಸ್ತೆಯಲ್ಲಿ ಗುಂಡಿ ಬಿದ್ದಿರುವುದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಬಯಲುಸೀಮೆ ಭಾಗವಾದ ಕಡೂರು, ತರೀಕೆರೆ ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ಆಗಾಗ ತುಂತುರು ಮಳೆಯಾಗುತ್ತಿದೆ. ಚಿಕ್ಕಮಗಳೂರು ತಾಲೂಕಿನ ಸುತ್ತಮುತ್ತ ಮೋಡ ಕವಿದ ವಾತಾವರಣವಿದ್ದು, ಆಗೊಮ್ಮೆ ಈಗೊಮ್ಮೆ ಮಳೆಯಾಗುತ್ತಿದೆ.
ಅಡಿಕೆ, ಕಾಫಿ ಬೆಳೆಗಾರರಲ್ಲಿ ಆತಂಕ: ಮಲೆನಾಡು ಭಾಗದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಅಡಿಕೆ ಮತ್ತು ಕಾಫಿ ಬೆಳೆಗಾರರಲ್ಲಿ ಆತಂಕ ಉಂಟಾಗಿದೆ. ಅಡಿಕೆ ಮತ್ತು ಕಾμಗೆ ಕೊಳೆ ರೋಗ ಬಾರದಂತೆ ತಡೆಯಲು ಈಗಾಗಲೇ ಒಂದು ಸುತ್ತಿನ ಬೋರ್ಡೋ ದ್ರಾವಣ ಸಿಂಪಡಣೆ ಮಾಡಬೇಕಿತ್ತು. ಆದರೆ ಸತತ ಮಳೆಯಿಂದ ಔಷಧ ಸಿಂಪಡಣೆಗೆ ಸಮಸ್ಯೆಯಾಗಿದ್ದು ರೈತರು ಬೆಳೆಗೆ ಹಾನಿಯಾಗುವ ಆತಂಕದಲ್ಲಿದ್ದಾರೆ.
ಸತತ ಮಳೆ: ವಾಲಿದ ಬೆಟ್ಟದ ತಡೆಗೋಡೆಶೃಂಗೇರಿ: ಸತತ ಮಳೆ, ಗಾಳಿ ತಾಲೂಕಿನಲ್ಲಿ ಸಾಕಷ್ಟು ಅನಾಹುತ ಉಂಟು ಮಾಡುತ್ತಿದ್ದು, ಸೋಮವಾರ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನದ ಬುಡದ ಮಲ್ಲಪ್ಪನ ಬೀದಿಯಲ್ಲಿ ನಿರ್ಮಿಸಿದ್ದ ತಡೆಗೋಡೆ ವಾಲಿದ್ದು, ಸತತ ಮಳೆ ಮತ್ತಷ್ಟು ಅನಾಹುತಕ್ಕೆ ಕಾರಣವಾಗುವ ಲಕ್ಷಣವಿದೆ. ಬೆಟ್ಟದ ದೇವಸ್ಥಾನದ ಬುಡದಲ್ಲಿ ಖಾಸಗಿಯವರು ಕಟ್ಟಡ ನಿರ್ಮಿಸಲು ಮುಂಜಾಗೃತ ಕ್ರಮವಾಗಿ ದರೆಗೆ 18 ಲಕ್ಷ ರೂ.ವೆಚ್ಚದಲ್ಲಿ ತಡೆ ಗೋಡೆ ನಿರ್ಮಿಸಿದ್ದರು. ಸತತ ಮಳೆ,ಗಾಳಿಯಿಂದ ಬೆಟ್ಟದಲ್ಲಿರುವ ಕಾಡು ಮರ,ಮಣ್ಣು ಕುಸಿಯುತ್ತಿದ್ದು, ಇದರಿಂದ ತಡೆಗೋಡೆ ವಾಲುತ್ತಿದೆ. ಮತ್ತೆ ಕುಸಿತ ಮುಂದುವರೆದರೆ ಬೆಟ್ಟಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಮಳೆ: ಮನೆ ಗೋಡೆ ಕುಸಿತ
ಸಾಗರ: ತಾಲೂಕಿನಾದ್ಯಂತ ಸೋಮವಾರವೂ ಮಳೆ ಮುಂದುವರಿದಿದ್ದು, ತ್ಯಾಗರ್ತಿಯ ಪೋಸ್ಟ್ ಆಫೀಸ್ ಎದುರು ಇರುವ ಮಂಜಪ್ಪ ಮರಾಠಿ ಅವರ ಮನೆಗೋಡೆ ಕುಸಿದಿದೆ. ಪಕ್ಕದ ಅಣ್ಣಪ್ಪ ಕರಿಬಸಪ್ಪ ಅವರ ಮನೆಯ ಗೋಡೆ ಬಿರುಕು ಬಿಟ್ಟಿದ್ದು ಭಾಗಶಃ ಹಾನಿಯಾಗಿದೆ. ಮನೆಯವರೆಲ್ಲ ಹೊರಗಡೆ ಕೆಲಸಕ್ಕೆ ತೆರಳಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಇತ್ತೀಚಿಗೆ ರಿಯುತ್ತಿರುವ ಭಾರೀ ಮಳೆಯಿಂದಾಗಿ ಮನೆಯ ತಳಪಾಯ ಸಂಪೂರ್ಣ ತೇವಗೊಂಡಿದ್ದು ಗೋಡೆ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮಲೆಕ್ಕಿಗರು, ಪಂಚಾಯ್ತಿ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು. ತೀರ್ಥಹಳ್ಳಿಯಲ್ಲಿ ಮತ್ತೆ ಮಳೆ ಅಬ್ಬರ
ತೀರ್ಥಹಳ್ಳಿ: ತಾಲೂಕಿನಾದ್ಯಂತ ಮತ್ತೆ ಮಳೆ ಆರಂಭಗೊಂಡಿದ್ದು, ಕಳೆದ 24 ಗಂಟೆಗಳಲ್ಲಿ ಆಗುಂಬೆಯಲ್ಲಿ ಅತೀಹೆಚ್ಚು 103.00 ಮಿ.ಮೀ. ಹಾಗೂ ತೀರ್ಥಹಳ್ಳಿಯಲ್ಲಿ 24.2 ಮಿ.ಮೀ. ಮಳೆಯಾಗಿದೆ. ಭಾರೀ ಮಳೆಯಿಂದ ಪ್ರಮುಖ ನದಿಗಳಾದ ತುಂಗಾ ಹಾಗೂ ಮಾಲತಿ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಏರತೊಡಗಿದೆ. ಆಗುಂಬೆ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಗಾಳಿ- ಮಳೆಯಾಗುತ್ತಿದ್ದು ಅಡಿಕೆ ತೋಟಗಳಿಗೆ ಅಪಾರ
ಹಾನಿಯಾಗಿದೆ. ಹಳ್ಳ, ಕೊಳ್ಳ, ಕೆರೆ-ತೊರೆಗಳ ನೀರು ಉಕ್ಕಿ ಅನೇಕ ಕಡೆ ಗದ್ದೆ – ತೋಟಗಳಿಗೆ ನುಗ್ಗಿವೆ. ಗಾಳಿ, ಮಳೆಯಿಂದ ತಾಲೂಕಿನ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.