Advertisement

ಪ್ರವಾಹಕ್ಕೆ ತೋಟಗಾರಿಕೆ ಬೆಳೆ ನೀರುಪಾಲು

12:47 PM Oct 27, 2019 | Team Udayavani |

ನರಗುಂದ: ಮಲಪ್ರಭಾ ಮತ್ತು ಬೆಣ್ಣೆಹಳ್ಳ ದಂಡೆಯಲ್ಲಿರುವ ಗ್ರಾಮಗಳ ತೋಟಗಾರಿಕೆ ಬೆಳೆಗಳು ಪ್ರವಾಹಕ್ಕೆ ತುತ್ತಾಗಿದೆ.

Advertisement

ನಿರಂತರ ಸುರಿದ ಮಳೆಯಿಂದಾಗಿ ಹಾನಿಗೊಳಗಗಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಆ. 7ರಂದು ಮೊದಲ ಬಾರಿಗೆ ಉಕ್ಕಿ ಹರಿದ ಮಲಪ್ರಭಾ-ಬೆಣ್ಣೆಹಳ್ಳ ಪ್ರವಾಹ ಸಾಕಷ್ಟು ಬೆಳೆಗಳನ್ನು ನೀರಲ್ಲಿ ಹೋಮ ಮಾಡಿದ್ದು, ಬಳಿಕ ಎರಡು ಸಾರಿ ಮತ್ತೆ ಬಂದ ಪ್ರವಾಹ ಅಳಿದುಳಿದ ತೋಟಗಾರಿಕೆ ಬೆಳೆಗಳನ್ನೂ ಆಹುತಿ ತೆಗೆದುಕೊಂಡಿತು. ಹೀಗಾಗಿ ಸತತ ಮೂರು ಬಾರಿ ಉಕ್ಕಿ ಹರಿದ ಪ್ರವಾಹ ಸ್ಥಿತಿಯಿಂದಾಗಿ ಮಲಪ್ರಭಾ ನದಿ ಮತ್ತು ಬೆಣ್ಣೆಹಳ್ಳ ಪಾತ್ರದ ರೈತರು ಚಿಂತೆಗೀಡಾಗಿದ್ದಾರೆ. ನದಿ ಮತ್ತು ಬೆಣ್ಣೆಹಳ್ಳ ಪ್ರದೇಶ ಹೊರತುಪಡಿಸಿ ಬಯಲು ಪ್ರದೇಶದಲ್ಲಿ ಅತಿಯಾಗಿ ನಿರಂತರ ಸುರಿದ ಮಳೆಯಿಂದಾಗಿ ರೈತರ ಬೆಳೆಗಳು ನಾಶವಾಗಿವೆ. ಇದರಿಂದಾಗಿ ಕೈಗೆಟುಕುವ ಬೆಳೆಗಳನ್ನು ಕಳೆದುಕೊಂಡ ರೈತರು ನಿತ್ಯ ಸಂಕಟ ಪಡುವಂತಾಗಿದೆ.

834 ಹೆಕ್ಟೇರ್‌ ಬೆಳೆನಾಶ: ಮಲಪ್ರಭಾ ನದಿ ಮತ್ತು ಬೆಣ್ಣೆಹಳ್ಳದ ಪಾತ್ರ ಸೇರಿ ತಾಲೂಕಿನಲ್ಲಿ ಒಟ್ಟು 834 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳು ಪ್ರವಾಹ ಮತ್ತು ವರುಣನ ಅವಕೃಪೆಗೆ ಹಾನಿಯಾಗಿವೆ. 724 ಹೆಕ್ಟೇರ್‌ ಪ್ರದೇಶ ಈರುಳ್ಳಿ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ರೈತರು ಕಣ್ಣೀರು ಹರಿಸುವಂತಾಗಿದೆ. ಇದಲ್ಲದೇ ಟೊಮೆಟೋ, ಬದನೆಕಾಯಿ, ಹೀರೆಕಾಯಿ, ಹಾಗಲಕಾಯಿ, ಮೂಲಂಗಿ ಸೇರಿ 94 ಹೆಕ್ಟೇರ್‌ ಪ್ರದೇಶದ ತರಕಾರಿ ಬೆಳೆಗಳು ಹಾಗೂ ಎರಡು ಬಾರಿ ಪ್ರವಾಹ ತೀರಿದ ಬಳಿಕ ಹೊಸದಾಗಿ ನಾಟಿ ಮಾಡಿದ್ದ 16 ಹೆಕ್ಟೇರ್‌ ಪ್ರದೇಶದ ಪೇರಲ ಗಿಡಗಳು ನಾಶವಾಗಿವೆ. ಅ. 23ರಂದು ನಡೆಸಲಾದ ಸಮೀಕ್ಷೆಯನ್ವಯ ತೋಟಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ

 

-ಸಿದ್ಧಲಿಂಗಯ್ಯ ಮಣ್ಣೂರಮಠ

Advertisement
Advertisement

Udayavani is now on Telegram. Click here to join our channel and stay updated with the latest news.

Next