Advertisement

ಭೀಮಾ ನದಿಗೆ ಪ್ರವಾಹದ ನೀರು : ಜನರ ರಕ್ಷಣೆಗೆ ಸೇನಾಪಡೆಯ ತಂಡ ಸಜ್ಜು

09:40 PM Oct 18, 2020 | sudhir |

ಯಾದಗಿರಿ: ಮಹಾರಾಷ್ಟ್ರದಿಂದ ನಿರಂತರವಾಗಿ ಭೀಮಾನದಿಗೆ ಪ್ರವಾಹ ನೀರು ಹರಿದು ಬರುತ್ತಿದ್ದು, 8 ಲಕ್ಷ ಕ್ಯೂಸೆಕ್ ನೀರು ಹರಿದು ಬರುವ ಸಾಧ್ಯತೆ ಹಿನ್ನೆಲೆ ಜಿಲ್ಲೆಯ 45 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಸಿಖಂದರಾಬಾದ್ ಸೇನಾಪಡೆಯ ಅಧಿಕಾರಿಗಳು ಸೇರಿದಂತೆ 70 ಜನರ ತಂಡ ರವಿವಾರ ಜಿಲ್ಲೆಗೆ ಆಗಮಿಸಿದೆ. ಸೇನಾ ತಂಡ ಈಗಾಗಲೇ ಭೀಮಾನದಿ ಪ್ರವಾಹ ತಟದ ಗ್ರಾಮಗಳ ಮುಂಜಾಗ್ರತಾ ಕ್ರಮ ಸ್ಥಳ ಪರಿಶೀಲನೆ ನಡೆಸಿ ಯಾವುದೇ ಸಂದರ್ಭವನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

Advertisement

ಸೇನಾ ತಂಡ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಬಳಿಯ ನಾಯ್ಕಲ್–ಚಟ್ನಳ್ಳಿ ಸೇತುವೆ ಭೀಮಾ ಪ್ರವಾಹದಿಂದ ತುಂಬಿ ಹರಿಯುವುದನ್ನು ವೀಕ್ಷೀಸಿದರು. ಹಳ್ಳಕ್ಕೆ ಭೀಮಾ ಪ್ರವಾಹ ಇಳಿಮುಖವಾಗಿದೆ ಎಂದು ತಿಳಿದು ಚಟ್ನಳ್ಳಿ, ನಾಯ್ಕಲ್ ಮೂಲಕ ಕಟಗಿ ಶಹಾಪುರದ 15 ಜನ ಮತ್ತು ನಾಲವಡಗಿಯ ಇಬ್ಬರ ದ್ವಿಚಕ್ರ ವಾಹನದ ಮೇಲೆ ಯಾದಗಿರಿಗೆ ಆಗಮಿಸುತ್ತಿದ್ದರು. ಅದೇ ಸಮಯಕ್ಕೆ ಸೇನಾ ಪಡೆ ಪ್ರವಾಹ ಪೀಡಿತ ಸ್ಥಳ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಜನರು ಹಳ್ಳದ ದಡದಲ್ಲಿ ಕಾಣಿಸಿದ್ದು, ಅಕಸ್ಮಿಕವಾಗಿ ಹಳ್ಳದ ಒಂದು ದಡದಲ್ಲಿದ್ದ ಜನರನ್ನು ಬೋಟ್‌ನಲ್ಲಿ ನಾಯ್ಕಲ್ ಕಡೆ ಹಳ್ಳದ ದಡಕ್ಕೆ ಸುರಕ್ಷಿತವಾಗಿ ದಡಕ್ಕೆ ಸೇನಾ ಪಡೆ ಅವರನ್ನು ಹಳ್ಳದ ದಡಕ್ಕೆ ತಂದು ಬಿಟ್ಟಿದ್ದರಿಂದ ಜನ ಸಂತಸ ಪಟ್ಟು ಧನ್ಯವಾದ ಹೇಳಿದರು.

ಇದನ್ನೂ ಓದಿ:ಗುವಾಹಟಿಯಲ್ಲಿ ವಿಜಯಪುರದ ಬಿಎಸ್ಎಫ್ ಯೋಧ ಹೃದಯಾಘಾತದಿಂದ ಸಾವು

ಇಂದು ಬೆಳಿಗ್ಗೆಯಿಂದ 3.28 ಲಕ್ಷ ಕ್ಯೂಸೆಕ್ ಆಸುಪಾಸಿನಲ್ಲಿದ್ದ ಸನ್ನತಿ ಬ್ಯಾರೇಜ್ ನೀರಿನ ಹರಿವು ಪ್ರಮಾಣ ಕ್ರಮೇಣ ಏರುತ್ತಿದ್ದು ರಾತ್ರಿ 8 ಗಂಟೆ ವೇಳೆಗೆ ಭೀಮಾ ನದಿಗೆ 3.37ಲಕ್ಷ ಕ್ಯೂಸೆಕ್‌ಗೆ ತಲುಪಿದೆ. ರಾತ್ರಿ ಹಂತ ಹಂತವಾಗಿ ಒಳಹರಿವು ಹೆಚ್ಚಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next