Advertisement

ನೆರೆ ನಿಂತರೂ ನಿಲ್ಲದ ಜನರ ಸಂಕಷ್ಟ

10:50 AM Aug 31, 2019 | Team Udayavani |

ಅಥಣಿ: ಕೃಷ್ಣಾ ನದಿ ಪ್ರವಾಹ ಕಡಿಮೆಯಾದರೂ ನೆರೆ ಸಂತ್ರಸ್ತರ ಬದುಕಿನ ಸಂಕಷ್ಟಗಳು ಸರಿಯದೆ ದಿನ ದಿನಕ್ಕೆ ಹೆಚ್ಚುತ್ತಾ ಸಂತ್ರಸ್ತರು ಬದುಕು ದುಸ್ತರವಾಗುತ್ತಿದೆ.

Advertisement

ಒಂದೆಡೆ ಅಥಣಿ ತಾಲೂಕಿನ ಸೌವದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆ ಪ್ರವಾಹಕ್ಕೆಡಾಗಿ ಶಾಲೆಯಲ್ಲಿರುವ ಎಲ್ಲ ಪಠ್ಯ ಪುಸ್ತಕಗಳು ನೀರಿನಲ್ಲಿ ನೆನೆದು ಹೋಗಿವೆ. ಇನ್ನೊಂದೆಡೆ ಪ್ರವಾಹದಿಂದ ತಾಲೂಕಿನ 24 ಗ್ರಾಮಗಳ ಜನತೆ ತಮಗಾದ ಅನಾಹುತದಿಂದ ಸಂತ್ರಸ್ತರ ಕಣ್ಣೀರು ಇನ್ನು ನಿಲ್ಲುತ್ತಿಲ್ಲ. ನೆರೆ ಹಾವಳಿಗೆ ಒಳಗಾದವರು ತಮ್ಮ ಗ್ರಾಮಗಳಿಗೆ ಮರಳಿ ವಾಪಸ್‌ ಬಂದಾಗ ಅಲ್ಲಿನ ಮನೆಗಳು ಸಂಪೂರ್ಣ ಕುಸಿದು ಅದರಲ್ಲಿ ಉಳಿದ ಮನೆಗಳು ಶಿಥಿಲಾವಸ್ಥೆ ತಲುಪಿ ನಾಗರಿಕರ ಬದುಕು ಬೀದಿಗೆ ಬಂದಿರುವುದು ದುರಂತವಾಗಿದೆ. ಶಾಲೆಗಳ ಕಟ್ಟಡ ಶಿಥಿಲಾವಸ್ಥೆ: ನೆರೆ ಪೀಡಿತ ಶಾಲೆಗಳ ಬಹುತೇಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಅವುಗಳಲ್ಲಿ ತರಗತಿ ನಡೆಸಲು ಸಂಬಂಧಪಟ್ಟ ಕಟ್ಟಡ ತಾಂತ್ರಿಕ ಸಲಹೆಗಾರರ ಸಲಹೆಯ ಜೊತೆಗೆ ಕಟ್ಟಡಗಳು ದಿನದಿಂದ ದಿನಕ್ಕೆ ಕುಸಿಯುತ್ತಾ ಸಾಗಿದ್ದು, ಅವುಗಳ ಗುಣಮಟ್ಟದ ಬಗೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕ ಸಮೂಹ ಮೇಲಿಂದ ಮೇಲೆ ನಿಗಾ ವಹಿಸಿ ಜಾಗೃತಿಯಿಂದ ಮರು ತರಗತಿ ನಡೆಸಬೇಕು ಎಂದು ಪ್ರಜ್ಞಾವಂತರೂ ಒತ್ತಾಯಿಸಿದ್ದಾರೆ.ಪ್ರವಾಹಕ್ಕೆ ಒಳಗಾದ ಯಾವುದೇ ಗ್ರಾಮಗಳಿಗೆ ಕಾಲಿಟ್ಟರೆ ಸಾಕು ಮುಖಕ್ಕೆ ಕೆಟ್ಟ ವಾಸನೆ ಬಡೆಯುತ್ತಿದೆ. ಇಂತ ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆ ಮತ್ತು ಪಶು ಸಂಗೋಪನಾ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯ ಮಾಡಿದಾಗ ಮಾತ್ರ ಜನರಿಗೆ ಹಾಗೂ ದನ ಕರುಗಳಿಗೆ ಬರತಕ್ಕಂತ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

•ವಿಜಯಕುಮಾರ ಅಡಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next