Advertisement

ತ್ರಿಪುರ ಪ್ರವಾಹ ಪರಿಸ್ಥಿತಿ ಸುಧಾರಣೆ : ಪರಿಶೀಲನೆ ಸಭೆಗೆ ಸಿಎಂ ಕರೆ

04:14 PM Jun 16, 2018 | Team Udayavani |

ಅಗರ್ತಲ : ತ್ರಿಪುರದಲ್ಲಿನ ಒಟ್ಟಾರೆ  ಪ್ರವಾಹ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ. 40,000ಕ್ಕೂ ಅಧಿಕ ನಿರಾಶ್ರಿತರು 189 ಪರಿಹಾರ ಶಿಬಿರಗಳಲ್ಲಿ ಆಸರೆ ಪಡೆದಿದ್ದಾರೆ.

Advertisement

ಮುಖ್ಯಮಂತ್ರಿ ಬಿಪ್‌ಲಬ್‌ ಕುಮಾರ್‌ ದೇಬ್‌ ಅವರು ತೀವ್ರ ಪ್ರವಾಹ ಪೀಡಿತವಾಗಿರುವ  ಉನಾಕೋಟಿ ಜಿಲ್ಲೆಯ ಕೈಲಾಶಹರ್‌ ಮತ್ತು ಕುಮಾರ್‌ಘಾಟ್‌ ಉಪ ವಿಭಾಗಗಳಿಗೆ ಭೇಟಿ ನೀಡಿದ್ದಾರೆ. ಪ್ರವಾಹ ಪೀಡಿತರಿಗೆ ಸರ್ವ ರೀತಿಯಲ್ಲಿ ನೆರವಾಗುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. 

ಪ್ರವಾಹ ಪೀಡಿತರಿಗೆ ಆಹಾರ, ನೀರು, ಔಷಧ ಇತ್ಯಾದಿಗಳನ್ನು ಪೂರೈಸುವುದಕ್ಕೆ ಎರಡು ಐಎಎಫ್ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next