Advertisement

ಪ್ರವಾಹ ನಷ್ಟ ಪರಿಹಾರ ಕುರಿತ ಸಮೀಕ್ಷೆ ಮುಗಿದಿದೆ: ಬಿಎಸ್‌ವೈ

11:18 PM Oct 05, 2019 | Team Udayavani |

ವಿಜಯಪುರ: ರಾಜ್ಯದಲ್ಲಿ ಪ್ರವಾಹ ನಷ್ಟ ಪರಿಹಾರ ಕುರಿತು ಸಮೀಕ್ಷೆ ಮುಗಿದಿದೆ. ಅಲ್ಲಲ್ಲಿ ಆಗಿರುವ ಕೆಲ ಲೋಪ ಸರಿಪಡಿಸುವ ಕೆಲಸ ಆಗಬೇಕಿದೆ. ಈ ಹಂತದಲ್ಲೇ ಕೇಂದ್ರದಿಂದ ಮಧ್ಯಂತರ ಪರಿಹಾರವಾಗಿ 1,200 ಕೋಟಿ ರೂ.ಬಿಡುಗಡೆ ಆಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರನ್ನು ರಾಜ್ಯದ ಜನತೆಯ ಪರವಾಗಿ ಅಭಿನಂದಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಕೃಷ್ಣೆಗೆ ಶುಕ್ರವಾರ ಬಾಗಿನ ಅರ್ಪಿಸಿ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಂತ್ರಸ್ತರಿಗೆ ನೆರವು ನೀಡಲು ತಕ್ಷಣ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದು, ಜಿಲ್ಲಾ ಧಿಕಾರಿಗಳ ಖಾತೆಯಲ್ಲಿ ಹಣ ಜಮೆ ಇದೆ. ಆದರೂ ಪ್ರತಿಪಕ್ಷಗಳ ನಾಯಕರು ಸರಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಲಿಲ್ಲ, ಕೇಂದ್ರ ಸರ್ಕಾರ ನೆರವಿಗೆ ಬರಲಿಲ್ಲ.

ದೆಹಲಿಗೆ ಹೋದಾಗ ಪ್ರಧಾನಿಯವರು ರಾಜ್ಯದ ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡಿಲ್ಲ ಎಂದು ಟೀಕಿಸಿದ್ದರು. ಪ್ರಧಾನಿಯವರ ಭೇಟಿ ಮುಖ್ಯವಲ್ಲ. ನಾವು ಹೇಳಿದ ಕೆಲಸವನ್ನು ಕೇಂದ್ರ ಮಾಡುತ್ತಿದೆ. ಆದರೂ ಅಧಿಕಾರ ಕಳೆದುಕೊಂಡ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭ್ರಮನಿರಶನರಾಗಿ ಏನೇನೋ ಮಾತಾಡುತ್ತಿದ್ದಾರೆ ಎಂದು ಟೀಕಿಸಿದರು.

ಹೆಚ್ಚಿನ ನೆರವು ನಿರೀಕ್ಷೆ: ನೆರೆ ಪೀಡಿತ ಪ್ರದೇಶಗಳಲ್ಲಿ ಜಿಲ್ಲಾಡಳಿತಗಳು ಮನೆಗಳ ಹಾನಿ ಸಮೀಕ್ಷೆ ಕೈಗೊಂಡಿವೆ. ಎ-ಬಿ ಕೆಟಗರಿ ಮಾಡಿ, ಪೂರ್ಣ ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ರೂ.ನೆರವು ನೀಡಲಾಗುತ್ತಿದೆ. ಹಂತ, ಹಂತವಾಗಿ ಹಣ ಕೊಡಲಾಗುತ್ತದೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ನೆರೆ ನಷ್ಟಕ್ಕಾಗಿ 34 ಸಾವಿರ ಕೋಟಿ ರೂ.ಬೇಕು. ಕೇಂದ್ರದಿಂದ ಇನ್ನೂ ಹೆಚ್ಚು ನೆರವು ಪಡೆಯಲಾಗುತ್ತದೆ ಎಂದರು.

ಸಮರ್ಥ ವಾದ ಮಂಡಿಸಲು ಸಿದ್ಧ: ಕೃಷ್ಣಾ ನ್ಯಾಯಾ ಧಿಕರಣದ ತೀರ್ಪಿನಂತೆ ರಾಜ್ಯದ ಪಾಲಿನ 173 ಟಿಎಂಸಿ ಅಡಿ ನೀರು ಬಳಕೆಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿರುವ ಪ್ರಕರಣ ಕುರಿತು ಸಮರ್ಥ ವಾದ ಮಂಡಿಸಲು ಸರಕಾರ ಸಿದ್ಧವಾಗಿದೆ. ಆಲಮಟ್ಟಿ ಜಲಾಶಯಕ್ಕೆ 524 ಮೀ. ಗೇಟ್‌ ಅಳವಡಿಸಲು ಬದ್ಧರಾಗಿದ್ದೇವೆ.

Advertisement

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಕೃಷ್ಣಾ ನ್ಯಾಯಾಧಿಕರಣ ತೀರ್ಪು, ಅಧಿಸೂಚನೆ ಹೊರಡಿಸುವ ವಿಷಯವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆ ಪ್ರಧಾನಿಯನ್ನು ಭೇಟಿ ಮಾಡುತ್ತೇನೆ. ಗೇಟ್‌ ಎತ್ತರಿಸುವುದರಿಂದ 20 ಗ್ರಾಮಗಳು ಹಾಗೂ 1.30 ಲಕ್ಷ ಎಕರೆ ಜಮೀನು ಮುಳುಗಡೆ ಆಗಲಿದೆ. ಈ ಗ್ರಾಮಗಳ ಸ್ಥಳಾಂತರ, ಪುನರ್ವಸತಿ, ಪುನರ್‌ ನಿರ್ಮಾಣಕ್ಕೆ ಬರುವ ಬಜೆಟ್‌ನಲ್ಲಿ 20 ಸಾವಿರ ಕೋಟಿ ರೂ.ಹಣ ಮೀಸಲಿರಿಸುತ್ತೇನೆ ಎಂದು ಘೋಷಣೆ ಮಾಡಿದರು.

ಬಳ್ಳಾರಿಯಿಂದ ಹೊಸಪೇಟೆ ಯನ್ನು ಪ್ರತ್ಯೇಕಿಸಿ ನೂತನ ಜಿಲ್ಲೆ ರಚಿಸುವುದು ಸೇರಿ ರಾಜ್ಯದಲ್ಲಿ ಯಾವುದೇ ಹೊಸ ಜಿಲ್ಲೆಗಳನ್ನು ರಚಿ ಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ.
-ಯಡಿಯೂರಪ್ಪ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next