Advertisement

ಪ್ರವಾಹ ಪರಿಹಾರ ಸಪರ್ಮಕ ವಿತರಣೆ: ಆರ್‌. ಅಶೋಕ್‌

08:47 PM Dec 10, 2020 | mahesh |

ಬೆೆಂಗಳೂರು: ರಾಜ್ಯದಲ್ಲಿ ಈ ವರ್ಷ ಮೂರು ಬಾರಿ ಉಂಟಾಗಿರುವ ಪ್ರವಾಹವನ್ನು ಸರಕಾರ ಸಮರ್ಥವಾಗಿ ನಿಭಾಯಿಸಿದ್ದು, 1,320 ಕೋ. ರೂ. ಪರಿಹಾರ ಒದಗಿಸಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

Advertisement

ವಿಧಾನಸಭೆಯಲ್ಲಿ ಅತಿವೃಷ್ಟಿ ಕುರಿತು ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಅವರು, ನೆರೆ ಪೀಡಿತ ಪ್ರದೇಶಗಳ ಜನರ ನೆರವಿಗೆ ಸರಕಾರ ಬಂದಿದೆ. ಪ್ರವಾಹ ನಿಯಂತ್ರಣ ಮಾಡಲು ಸಕಲ ಕ್ರಮ ಕೈಗೊಂಡಿದ್ದೇವೆ. ಆಗಸ್ಟ್‌- ಸೆಪ್ಟಂಬರ್‌ನಲ್ಲಿ ವಾಡಿಕೆಗಿಂತ ಶೇ. 500ರಷ್ಟು ಹೆಚ್ಚು ಮಳೆಯಾಗಿದೆ. ಒಟ್ಟು ಮೂರು ಬಾರಿ ಸುರಿದ ಭಾರೀ ಮಳೆಗೆ ಅಪಾರ ಹಾನಿ ಸಂಭವಿಸಿದೆ ಎಂದು ವಿವರಿಸಿದರು.

ಈ ವರ್ಷ ಮಳೆಯಿಂದಾಗಿ 48,367 ಮನೆಗಳು, 20.87 ಲಕ್ಷ ಹೆಕ್ಟೇರ್‌ ಬೆಳೆ, 37,805 ಕಿ.ಮೀ. ರಸ್ತೆಗಳು, 4,084 ಸೇತುವೆಗಳು, 7,606 ಕಟ್ಟಡಗಳು, 291 ಕುಡಿಯುವ ನೀರಿನ ಟ್ಯಾಂಕ್‌ಗಳು ಹಾನಿಗೀಡಾಗಿವೆ. ಒಟ್ಟು 52,242 ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿವರಿಸಿದರು.

ಮನೆ ಕಳೆದುಕೊಂಡಿರುವ 27,773 ಕುಟುಂಬಗಳಿಗೆ ತಲಾ 10 ಸಾ. ರೂ. ನೀಡಲಾಗಿದೆ. ಬೆಳೆ ಹಾನಿಗೆ 5 ಹಂತದಲ್ಲಿ ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾಯಿಸಲಾಗಿದೆ. ಬೆಳೆ ಹಾನಿಯಾದ 7,12,936 ರೈತರಿಗೆ 531.13 ಕೋ. ರೂ. ಪರಿಹಾರ ನೀಡಲಾಗಿದೆ. ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಮೂರು ತಿಂಗಳೊಳಗಾಗಿ ಪರಿಹಾರ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. 296.60 ಕೋ. ರೂ. ಮನೆ ಹಾನಿ ಪರಿಹಾರ, ಮೂಲ ಸೌಕರ್ಯಕ್ಕೆ 470 ಕೋ. ರೂ., ಅಗ್ನಿ ಶಾಮಕ ಇಲಾಖೆಗೆ 20 ಕೋ. ರೂ. ಸಹಿತ ಒಟ್ಟು 1,320.60 ಕೋ. ರೂ. ಪರಿಹಾರ ನೀಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next