Advertisement

ತುರ್ತು ಕಾರ್ಯಾಚರಣೆಗಾಗಿ ಪ್ರವಾಹ ನಿರ್ವಹಣಾ ಘಟಕ ಸ್ಥಾಪಿಸಲಾಗಿದೆ: ಅಶೋಕ್

01:26 PM Sep 19, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಪದೇ ಪದೇ ವಿಪತ್ತು ಸಂಭವಿಸುವ ಸ್ಥಳಗಳಲ್ಲಿ ತುರ್ತು ಕಾರ್ಯಾಚರಣೆಗಾಗಿ 2020 ಪ್ರವಾಹ ನಿರ್ವಹಣಾ ಘಟಕ ತೆರೆಯಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ವಿಧಾನಸಭೆಗೆ ತಿಳಿಸಿದ್ದಾರೆ.

Advertisement

ಮಳೆ ಹಾನಿಗೆ ಸಂಬಂಧಪಟ್ಟಂತೆ ಕಳೆದೊಂದು ವಾರದಿಂದ ನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿದ ಅವರು, ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರಕಾರ ಇಂಥ ಘಟಕವನ್ನು ಪ್ರಾರಂಭ ಮಾಡಿದೆ. ಪದೇ ಪದೇ ವಿಪತ್ತು ಜರುಗುವ ಸ್ಥಳವನ್ನು ಮೊದಲೇ ಗುರುತಿಸಿ ಅಂಥ ಕಡೆ ಈ ಘಟಕವನ್ನು ನಿಯೋಜಿಸಿದ್ದೇವೆ. ತುರ್ತು ರಕ್ಷಣೆಗೆ ಅಗತ್ಯವಾದ ಎಲ್ಲ ಸಲಕರಣೆಗಳು ಈ ತಂಡದಲ್ಲಕ ಇರುತ್ತವೆ ಎಂದು ವಿವರಿಸಿದರು.

ಕೇಂದ್ರ ಸರಕಾರದ ಪ್ರತಿನಿಧಿಗಳು ಕೂಡಾ ಈ ತಂಡದ ಬಗ್ಗೆ ಮಾಹಿತಿ ಪಡೆದಿದ್ದಾರೆ. ರಾಷ್ಟ್ರಕ್ಕೆ ಇದು ಮಾದರಿ ತಂಡ. ಬೇರೆ ರಾಜ್ಯಗಳಲ್ಲಿ ಇಂಥ ವ್ಯವಸ್ಥೆ ಜಾರಿಗೆ ತರುವಂತೆ ಸಲಹೆ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ಇದುವರೆಗೆ 2325 ಸೇತುವೆ, 8865 ಶಾಲಾ ಕೊಠಡಿಗಳು , 5194 ಅಂಗನವಾಡಿ ಕಟ್ಟಡ ಹಾಗೂ ಗ್ರಾಮೀಣಾಭಿವೃದ್ಧಿ ಸ್ವತ್ತುಗಳು, 774 ಸಣ್ಣ ನೀರಾವರಿ ಕೆರೆಗಳು, 33475 ವಿದ್ಯುತ್‌ ಕಂಬಗಳು, 3408 ವಿದ್ಯುತ್ ಪರಿವರ್ತಕಗಳು, 4500 ಕಿಮಿ ವಿದ್ಯುತ್ ಮಾರ್ಗ ಹಾನಿಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಹಾನಿಯಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ:ವಿದ್ಯಾರ್ಥಿನಿಯರ ವೈರಲ್ ವಿಡಿಯೋ ಪ್ರಕರಣ: ಸೆ.24ರವರೆಗೆ ಚಂಡೀಗಢ ವಿವಿ ಬಂದ್

Advertisement

ಬೆಳೆಹಾನಿ ಪರಿಹಾರ ನೀಡುವುದಕ್ಕೆ ಈ ಹಿಂದೆ 11 ತಿಂಗಳು ಸಮಯ ತೆಗದುಕೊಂಡಿದ್ದರು. ಆದರೆ ನಮ್ಮ ಸರಕಾರ ಒಂದೇ ತಿಂಗಳಲ್ಲಿ 118 ಕೋಟಿ ಪರಿಹಾರ ನೀಡಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ 5416649 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 3838406 ರೈತರ ಖಾತೆಗೆ 4736.37 ಕೋಟಿ ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next