ಹಾಸನ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಈವರೆಗೆ 450 ಕೋಟಿ ರೂ.ಗೂ ಹೆಚ್ಚು ಆಸ್ತಿ- ಪಾಸ್ತಿ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೆಳೆ ಹಾನಿ ಹಾಗೂ ಆಸ್ತಿ-ಪಾಸ್ತಿಯ ಪ್ರಾಥಮಿಕ ಅಂದಾಜಿನ ಪ್ರಕಾರ 450ಕೋಟಿ ರೂ.ಗೂ ಹೆಚ್ಚಿನ ನಷ್ಟ ಸಂಭವಿಸಿದೆ. ಎನ್‌ಡಿ ಆರ್‌ಎಫ್ ನಿಯಮಾವಳಿ ಪ್ರಕಾರ 49 ಕೋಟಿ ರೂ.ಹಾನಿಯಾಗಿದೆ.ಆದರೆ, ರಸ್ತೆ ಗಳು, ಸ ರ್ಕಾರಿ ಕಟ್ಟಡಗಳು, ಮೂಲ ಸೌಕರ್ಯ ಸೇರಿದಂತೆ ಆಸ್ತಿ-ಪಾಸ್ತಿ ಹಾನಿ ಅಂದಾಜು 450 ಕೋಟಿ ರೂ.ಗಳಾಗಿವೆ ಎಂದು ಮಾಹಿತಿ ನೀಡಿದರು.
350ಕ್ಕೂ ಹೆಚ್ಚು ಮನೆ ಕುಸಿತ: ಈ ವರ್ಷ ನೆರೆಯಿಂದ 1650 ಮನೆಗಳು ಕುಸಿದಿದ್ದು, ಈ ತಿಂಗಳಲ್ಲಿಯೇ 350 ಕ್ಕೂ ಹೆಚ್ಚು ಮನೆ ಗಳು ಮಳೆಯಿಂದಾಗಿ ಕುಸಿ ದಿವೆ. ಕೆರೆ – ಕಟ್ಟೆಗಳಿಗೂ ಹಾನಿ ಯಾಗಿದೆ. ಜಿಲ್ಲೆ ಯಲ್ಲಿ ಒಟ್ಟು 6500 ಕೆರೆಗಳಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ಕೆರೆಗಳನ್ನು ಹಾಸನ ಜಿಲ್ಲೆ ಹೊಂದಿದೆ. ಆ ಪೈಕಿ ಜಿಪಂ ವ್ಯಾಪ್ತಿ ಯಲ್ಲಿ 3000 ಕೆರೆಗ ಳಿವೆ. ಇನ್ನುಳಿ ದವರು ಸಣ್ಣ ನೀರಾವರಿ ವ್ಯಾಪ್ತಿಯಲ್ಲಿವೆ. ಕೆರೆ – ಕಟ್ಟೆಗಳು ಭರ್ತಿಯಾಗಿ ಅಪಾಯದಲ್ಲಿದರೆ ತಕ್ಷಣವೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರುಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಶಿರಾಡಿಘಾಟ್ ರಸ್ತೆ ದುರಸ್ತಿ ವಾರದಲ್ಲಿ ಪೂರ್ಣ: ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ರಕ್ಷಣಾ ಗೋಡೆ ಕುಸಿದಿದೆ. ಭಾರತೀಯ ಪುರಾತತ್ವ ಇಲಾಖೆ ಮಹಾ ನಿರ್ದೇಶಕರು ದುರಸ್ತಿ ಕಾರ್ಯ ಕೈಗೊಳ್ಳಲಿದ್ದಾರೆ. ಇನ್ನು 10ದಿನ ಗಳಲ್ಲಿ ಕೆಲಸ ಆರಂಭವಾಗಲಿದೆ ಎಂದ ಅವರು, ಸಕಲೇಶಪುರ ಸಮೀಪದ ದೋಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿದಿದ್ದ ಸ್ಥಳದಲ್ಲಿ ಪರ್ಯಾಯ ರಸ್ತೆ ಕಾಮಗಾರಿ ಭರದಿಂದ ನಡೆ ಯುತ್ತಿದೆ. ಆದರೆ, ಮಳೆ ಸುರಿಯುತ್ತಿರುವುದರಿಂದ ವಿಳಂಬವಾಗಿದೆ. ಇನ್ನೊಂದು ವಾರದಲ್ಲಿ ಕೆಲಸ ಪೂರ್ಣಗೊಳ್ಳಲಿದೆ. ಅನಂತರ ಭಾರೀ ಸರಕು ಸಾಗಾಣೆ ಲಾರಿಗಳೂ ಶಿರಾಡಿಘಾಟ್ ಮೂಲಕ ಸಂಚರಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಗೆ ಸಾಕಷ್ಟು ರಸಗೊಬ್ಬರ ಪೂರೈಕೆ: ಜಿಲ್ಲೆಗೆ ಜುಲೈ ತಿಂಗಳಲ್ಲಿ 32,500 ಟನ್ ಯೂರಿಯಾ ರಸಗೊಬ್ಬರದ ಬೇಡಿಕೆ ಇತ್ತು. ಆದರೆ 38,000 ಟನ್ ಯೂರಿಯಾ ಪೂರೈಕೆಯಾಗಿದೆ. ಬೇಡಿಕೆಗಿಂತ ಹೆಚ್ಚುವರಿಯಾಗಿ 6000 ಟನ್ ಪೂರೈಕೆಯಾದರೂ ರೈತರಿಂದ ಬೇಡಿಕೆ ಇದ್ದು,, ಆಗಸ್ಟ್‌ನಲ್ಲಿ 10,300 ಟನ್ ರಸಗೊಬ್ಬರಕ್ಕೆ ಬೇಡಿ ಕೆಯಿದೆ. ಆ ಪೈಕಿ ಈಗಾಗಲೇ 4500 ಟನ್ ಪೂರೈಕೆ ಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಇ – ಕೆವೈಸಿ ನೀಡಲು ಸೂಚನೆ: ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿ ರೈತರು ಆ.15 ರೊಳಗೆ ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರಿನೊಂದಿ ಗೆ ಇ – ಕೆವೈಸಿ ದಾಖಲು ಮಾಡಬೇಕು. ಸಂಬಂಧಿಸಿದ ಬ್ಯಾಂಕುಗಳಲ್ಲಿಯೂ ಆಧಾರ್ ನಂಬರ್ ಹಾಗೂ ಫೋನ್ ನಂಬರ್ ದಾಖಲಿಸಬೇಕು ಎಂದು ರವಿ ಅವರು ಹೇಳಿದರು. ಜಿಪಂ ಸಿಇಒ ಕಾಂತರಾಜು , ಉಪ ಕಾರ್ಯದರ್ಶಿಗಳಾದ ಚಂದ್ರಶೇಖರ್, ಡಾ.ಪುನೀತ್ ಅವರೂ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ನಿರಾಶ್ರಿತರ ಆಶ್ರಯಕ್ಕೆ ಪರ್ಯಾಯ ವ್ಯವಸ್ಥೆ : ಅರಸೀಕೆರೆ ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ 50 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ ರಕ್ಷಣೆ ನೀಡ ಲಾಗಿದೆ. ಯಾವುದೇ ಮನೆಗಳು ಸುರಕ್ಷಿತವಲ್ಲ ಎಂದೆನಿಸಿದರೆ ನಿವಾಸಿಗಳು ಸಂಬಂಧಿಸಿದ ಪಿಡಿಒಗಳಿಗೆ ಅಥವಾ ಗ್ರಾಮ ಲೆಕ್ಕಿಗರಿಗೆ ತಿಳಿಸಿದರೆ ಪರ್ಯಾ ಯ ವ್ಯವಸ್ಥೆ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾ ರಿ ಗಿರೀಶ್ ಮಾಹಿತಿ ನೀಡಿದರು