Advertisement

ಪ್ರವಾಹದ ಹೊಡೆತ: ಶಾಲಾ ಮಕ್ಕಳಿಗೆ ಸಮೂಹ ಸನ್ನಿ !

09:01 PM Jul 30, 2023 | Team Udayavani |

ಉತ್ತರಾಖಂಡ: ಇತ್ತೀಚೆಗಷ್ಟೇ ಉತ್ತರಾಖಂಡದಲ್ಲಾದ ಭೀಕರ ಪ್ರವಾಹಗಳು ಮನೆ-ಆಸ್ತಿಪಾಸ್ತಿಗಳನ್ನು ನಾಶ ಮಾಡಿದ್ದಷ್ಟೇ ಅಲ್ಲದೇ, ಮಕ್ಕಳ ಮನಸ್ಸಿನ ಮೇಲೂ ತೀವ್ರತರದ ಪರಿಣಾಮ ಬೀರಿದ್ದು, ಉತ್ತರಕಾಶಿಯ ಶಾಲೆಯೊಂದರಲ್ಲಿ ಮಕ್ಕಳು ಸಮೂಹ ಸನ್ನಿಗೆ ಒಳಗಾಗಿದ್ದಾರೆ. ಇದ್ದಕ್ಕಿದ್ದಂತೆ ತರಗತಿಯಲ್ಲಿ ಮಕ್ಕಳು ಕಿರುಚುತ್ತಾ, ಓಡುತ್ತಿರುವ ಪ್ರಕರಣ ವರದಿಯಾಗಿದ್ದು, ಈ ವಿಚಿತ್ರ ನಡವಳಿ ಎಲ್ಲರಲ್ಲೂ ಆತಂಕ ಮೂಡಿಸಿದೆ.

Advertisement

ವರದಿಗಳ ಪ್ರಕಾರ, ಧೌತ್ರಿ ನಗರದಲ್ಲಿ ಹೊಸದಾಗಿ ಸರ್ಕಾರಿ ಶಾಲೆಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಶಾಲೆಗೆ ಆಗಮಿಸುತ್ತಿದ್ದಂತೆಯೇ 10ರಿಂದ 12 ಹೆಣ್ಣು ಮಕ್ಕಳು ವಿಚಿತ್ರವಾಗಿ ಕಿರುಚುತ್ತಾ, ಅಳುತ್ತಾ ಓಡಾಡಿದ್ದಾರೆ. ಊರಿನ ಜನ ಇದು ಗ್ರಾಮ ದೇವತೆಗಳ ಮುನಿಸು ಎಂದು ಭಾವಿಸಿದ್ದರೆ, ಮತ್ತಷ್ಟು ಮಂದಿ ಇದು ಮಾಟ-ಮಂತ್ರ ಅಥವಾ ದುಷ್ಟ ಶಕ್ತಿಗಳ ಪರಿಣಾಮವಿರಬಹುದು ಎಂದು ಶಂಕಿಸಿದ್ದಾರೆ.

ಆದರೆ, ವೈದ್ಯರು ಇದನ್ನು ಸಮೂಹ ಸನ್ನಿ, ಮಾನಸಿಕ ಒತ್ತಡದಿಂದಾಗಿರುವ ಪರಿಣಾಮ ಎಂದಿದ್ದಾರೆ. ಪ್ರವಾಹದ ಸಂದರ್ಭದಲ್ಲಾದ ದುರಂತಗಳನ್ನು ನೋಡಿರುವುದರಿಂದ ಮಕ್ಕಳಿಗೆ ಅದೇ ಮನಸ್ಸಿನಲ್ಲಿ ಅಚ್ಚಾಗಿದೆ. ಶಾಲಾ ಕಟ್ಟಡಗಳನ್ನು ಪ್ರವೇಶಿಸಿದಾಗ ವಾತವರಣ ಹೊಸದಾದ ಹಿನ್ನೆಲೆಯಲ್ಲಿ ಅದೇ ದುಸ್ವಪ್ನಗಳಿಂದ ಹೆದರಿ ಈ ರೀತಿ ವರ್ತಿಸುತ್ತಿದ್ದಾರೆಂದು ಹೇಳಿದ್ದಾರೆ. ಇದಕ್ಕೂ ಮುನ್ನ ಚಂಪಾವತ್‌ ಜಿಲ್ಲೆಯಲ್ಲೂ ಇದೇ ರೀತಿಯ ಘಟನೆ ವರದಿಯಾಗಿ, ಆ ವಿಡಿಯೊ ವೈರಲ್‌ ಕೂಡ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next