ವಿಜಯಪುರ: ಕರ್ನಾಟಕ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ಜಿಲ್ಲೆಯಲ್ಲಿ ಹರಿಯುವ ನದಿಗಳು ಮತ್ತೆ ಪ್ರವಾಹ ಸೃಷ್ಟಿಸಿವೆ.
ಮಹಾರಾಷ್ಟ್ರದ ಉಜನಿ ಹಾಗೂ ಮೀರಾ ಜಲಾಶಯದಿಂದ ಭೀಮಾ ನದಿಗೆ ಅಧಿಕ ಪ್ರಮಾಣದ ನೀರು ಬಿಡುಗಡೆ ಮಾಡಿದ ಕಾರಣ ವಿಜಯಪುರ ಜಿಲ್ಲೆಯ ಭೀಮಾ ನದಿಯ ಸೊನ್ನ ಬ್ಯಾರೇಜಿನ ಹಿನ್ನೀರಿನಿಂದ ಆಲಮೇಲ ತಾಲೂಕಿನ ತಾರಾಪುರ ಗ್ರಾಮ ಜಲಾವೃತವಾಗಿದೆ.
ಮತ್ತೊಂದೆಡೆ ಗ್ರಾಮಕ್ಕೆ ಸೊನ್ನ ಬ್ಯಾರೇಜಿನ ಹಿನ್ನೀರು ನುಗ್ಗತೊಡಗಿದೆ. ಪರಿಣಾಮ ತಾರಾಪುರ- ಆಲಮೇಲ ರಸ್ತೆ ಜಲವೃತ, ಸಂಪರ್ಕ ಕಡಿತವಾಗಿದೆ.
ಬ್ಯಾರೇಜ್ ನಿರ್ಮಾಣ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಸಂತ್ರಸ್ತರನ್ನು ಗುರುತಿಸುವ ಸಮೀಕ್ಷೆಯಲ್ಲಿ ಎಡವಟ್ಟು ಮಾಡಿದ್ದಾರೆ. ಸಮಸ್ಯೆಗೆ ಶಾಸ್ವತ ಪರಿಹಾರಕ್ಕಾಗಿ ಗ್ರಾಮ ಸ್ಥಳಾಂತರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ತರು ಆಗ್ರಹಿಸಿದ್ದಾರೆ.
ಮತ್ತೊಂದೆಡೆ ಕೃಷ್ಣಾ ನದಿಯೂ ತುಂಬಿ ಹರಿಯುತ್ತಿದ್ದು, ಆಲಮಟ್ಟಿ ಶಾಸ್ತ್ರಿ ಜಲಾಶಯ, ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಒಳ ಹರಿವು ಹೆಚ್ಚಿ, ನದಿತೀರದ ಹಳ್ಳಿಗಳಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಡೋಣಿ ನದಿಯಲ್ಲೂ ಪ್ರವಾಹ ಮುಂದುವರೆದಿದೆ.