Advertisement

ಮಳೆ ಇಲ್ಲದಿದ್ದರೂ ಸೇತುವೆ ಜಲಾವೃತ: ನೂರಾರು ಎಕರೆ ಜಮೀನುಗಳಿಗೆ ನುಗ್ಗಿದ ನೀರು!

06:20 PM May 15, 2020 | keerthan |

ಬೆಳಗಾವಿ: ಮಳೆ‌ ಇಲ್ಲದೇ ಹೈರಾಣಾಗಿದ್ದ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸೇತುವೆ ಮೇಲಿಂದ ನೀರು ಹರಿದು ನೂರಾರು ಎಕರೆ ಜಮೀನುಗಳು ಜಲಾವೃತಗೊಂಡಿವೆ.

Advertisement

ತಾಲೂಕಿನ ಕರಡಿಗುದ್ದಿ, ಮಾರೀಹಾಳ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಸುರಿದ ರಭಸದ ಮಳೆಯಿಂದಾಗಿ ಮೋದಗಾ ಗ್ರಾಮದಲ್ಲಿರುವ ಸೇತುವೆ ಜಲಾವೃತಗೊಂಡಿದೆ. ಸುಳೇಭಾವಿ ಹಾಗೂ ಮೋದಗಾ ಗ್ರಾಮದ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಮಳೆ ಆಗದಿದ್ದರೂ ಸೇತುವೆಗಳು ಜಲಾವೃತಗೊಂಡಿವೆ. ಎರಡೂ ಗ್ರಾಮಗಳ ಸಂಪರ್ಕ ಸ್ಥಗಿತಗೊಂಡಿದೆ.

ಕರಡಿಗುದ್ದಿ, ಹಣ್ಣಿಕೇರಿ ಸೇರಿದಂತೆ ಅನೇಕ‌ ಕಡೆಗಳಲ್ಲಿ ಶುಕ್ರವಾರ ಮಧ್ಯಾಹ್ನ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಗುಡ್ಡದ ಪ್ರದೇಶದಲ್ಲಿ ಮಳೆ ಆಗಿದ್ದರಿಂದ‌ ಕೆಳ ಭಾಗದಲ್ಲಿ ಇರುವ ಹಳ್ಳಿಗಳಿಗೆ ನೀರು ನುಗ್ಗಿದೆ. ಹೀಗಾಗಿ ಸೇತುವೆ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.

ತುಂಬಿ ಹರಿಯುತ್ತಿರುವ ಹಳ್ಳ ನೋಡಲು ಜನರು ತಂಡೋಪ ತಂಡವಾಗಿ ಹೊರಟಿದ್ದಾರೆ. ಹಳ್ಳ ತುಂಬಿರುವ ಪ್ರದೇಶಗಳಲ್ಲಿ ಒಂದು ಹನಿಯೂ ಮಳೆ ಆಗದಿರುವುದು ಆಶ್ಚರ್ಯಕರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next