Advertisement

Flipkart: ಆರ್ಡರ್ ಮಾಡಿದ ದಿನವೇ ಗ್ರಾಹಕರ ಮನೆ ಬಾಗಿಲಿಗೆ ವಿತರಣೆ

11:05 PM Feb 04, 2024 | |

ಬೆಂಗಳೂರು: ಮೆಟ್ರೋ ಮತ್ತು ಮೆಟ್ರೋಯೇತರ ನಗರಗಳಲ್ಲಿ ಲಕ್ಷಾಂತರ ಗ್ರಾಹಕರಿಗೆ ಇನ್ನೂ ಹೆಚ್ಚಿನ ಪ್ರಯೋಜನವನ್ನು ನೀಡುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ವಿವಿಧ ವರ್ಗಗಳ ಉತ್ಪನ್ನಗಳನ್ನು ಆರ್ಡರ್ ಮಾಡಿದ ದಿನವೇ ವಿತರಣೆ ಮಾಡಲು ಸಜ್ಜಾಗಿದೆ.

Advertisement

ಬೆಂಗಳೂರು, ಅಹ್ಮದಾಬಾದ್, ಭುವನೇಶ್ವರ, ಕೊಯಮತ್ತೂರು, ಚೆನ್ನೈ, ದೆಹಲಿ, ಗುವಾಹಟಿ, ಹೈದರಾಬಾದ್, ಇಂದೋರ್, ಜೈಪುರ, ಕೋಲ್ಕತ್ತಾ, ಲುಧಿಯಾನ, ಲಕ್ನೋ, ಮುಂಬೈ, ನಾಗ್ಪುರ, ಪುಣೆ, ಪಾಟ್ನಾ, ರಾಯಪುರ, ಸಿಲಿಗುರಿ ಮತ್ತು ವಿಜಯವಾಡ ಸೇರಿದಂತೆ ಇನ್ನೂ ಅನೇಕ ನಗರಗಳಲ್ಲಿ ಈ ಯೋಜನೆ ಜಾರಿಗೆ ಬರುತ್ತಿದೆ. ಗ್ರಾಹಕರು ತಮಗಿಷ್ಟವಾದ ಉತ್ಪನ್ನವನ್ನು ದಿನದ ಮಧ್ಯಾಹ್ನ 1 ಗಂಟೆಯೊಳಗೆ ಆರ್ಡರ್ ಮಾಡಿದರೆ ಅದೇ ದಿನ ಮಧ್ಯರಾತ್ರಿ 12 ಗಂಟೆಯೊಳಗೆ ಡೆಲಿವರಿ ಆಗಲಿದೆ. ಈ ಯೋಜನೆಯು ಫೆ 1 ರಿಂದ ಆರಂಭವಾಗಿದ್ದು, ಮುಂದಿನ ಹಲವು ತಿಂಗಳಲ್ಲಿ ದೇಶಾದ್ಯಂತ ಇನ್ನೂ ಹೆಚ್ಚಿನ ಗ್ರಾಹಕರಿಗೆ ಸೇವೆ ಸಲ್ಲಿಸಲು ಸಹಕಾರಿಯಾಗಲಿದೆ.

ಗ್ರಾಹಕರಿಗೆ ಲಭ್ಯವಾಗಲಿರುವ ಉತ್ಪನ್ನಗಳು:
ಅಗತ್ಯ ವಸ್ತುಗಳು, ಮೊಬೈಲ್ ಗಳು, ಫ್ಯಾಶನ್, ಬ್ಯೂಟಿ ಪ್ರಾಡಕ್ಟ್ಸ್, ಲೈಫ್ ಸ್ಟೈಲ್, ಪುಸ್ತಕಗಳು, ಹೋಂ ಅಪ್ಲಾಯನ್ಸಸ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳು ಆರ್ಡರ್ ಮಾಡಿದ ದಿನವೇ ಗ್ರಾಹಕರ ಕೈ ಸೇರಲಿವೆ.

ಫ್ಲಿಪ್ ಕಾರ್ಟ್ ಪ್ರತಿ ತಿಂಗಳು 120 ಮಿಲಿಯನ್ ಗೂ ಅಧಿಕ ಪ್ಯಾಕೇಜ್ ಗಳನ್ನು ವಿತರಣೆ ಮಾಡುತ್ತಿದೆ. ದೇಶದ ಅತ್ಯಂತ ದುರ್ಗಮ ಪ್ರದೇಶಗಳ ಗ್ರಾಹಕರಿಗೂ ಉತ್ಪನ್ನಗಳನ್ನು ತಲುಪಿಸುವ ನಿಟ್ಟಿನಲ್ಲಿ ಪೂರೈಕೆ ಜಾಲವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಸಾಕಷ್ಟು ಹೂಡಿಕೆ ಮಾಡುತ್ತಿದೆ. ಅದೇ ದಿನ ಡೆಲಿವರಿ ಮಾಡುವುದಕ್ಕೆ ಫ್ಲಿಪ್ ಕಾರ್ಟ್ ಕಳೆದ 1 ವರ್ಷದಿಂದ ಹಲವಾರು ಫುಲ್ ಫಿಲ್ಮೆಂಟ್ ಕೇಂದ್ರಗಳನ್ನು ಆರಂಭಿಸಲು ಹೂಡಿಕೆ ಮಾಡಿದೆ ಮತ್ತು ತನ್ನ ಫುಲ್ ಫಿಲ್ಮೆಂಟ್ ಕೇಂದ್ರಗಳ ಮೂಲಕ ಉತ್ತಮ ವಿಂಗಡಣೆ ಮತ್ತು ಹೆಚ್ಚಿನ ತಂತ್ರಜ್ಞಾನ ಬಳಕೆ ಮಾಡಿ ವಿತರಣೆ ಜಾಲವನ್ನು ಬಲಪಡಿಸಿದೆ.

ಫ್ಲಿಪ್ ಕಾರ್ಟ್ ನ ತಂಡವು ರೂಟ್ ಪ್ಲಾನಿಂಗ್ ಗೆ ನೆರವಾಗಲೆಂದು ಎಂಎಲ್ ಮಾದರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ತಂತ್ರಜ್ಞಾನಗಳ ಪರಿಹಾರಗಳನ್ನು ಕಂಡುಕೊಳ್ಳುತ್ತಿದೆ. ಈ ಮೂಲಕ ವಿತರಣಾ ಮಾರ್ಗಗಳನ್ನು ಉತ್ತಮಗೊಳಿಸುವುದು, ಮಾರ್ಗಗಳಿಂದ ಕಡಿಮೆ ಪಿಕಪ್ ಸಮಯ, ಉತ್ಪನ್ನಗಳು ಗರಿಷ್ಠ ದಕ್ಷತೆಯೊಂದಿಗೆ ಗ್ರಾಹಕರನ್ನು ತಲುಪುವುದನ್ನು ಖಾತ್ರಿಪಡಿಸಿಕೊಳ್ಳಲು ಉತ್ಪನ್ನಗಳನ್ನು ವೇಗವಾಗಿ ವಿಂಗಡಣೆಯಾಗುವಂತೆ ನೋಡಿಕೊಳ್ಳುತ್ತಿದೆ.

Advertisement

ಗ್ರಾಹಕರಿಗೆ ಹತ್ತಿರದ ಫುಲ್ ಫಿಲ್ಮೆಂಟ್ ಕೇಂದ್ರಗಳ ಮೂಲಕ ಉತ್ಪನ್ನಗಳನ್ನು ಪೂರೈಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇದರಿಂದ ಸಾರಿಗೆ ಸಮಯವನ್ನು ಕಡಿಮೆ ಮಾಡಿದಂತಾಗುತ್ತದೆ ಮತ್ತು ಗ್ರಾಹಕರಿಗೆ ಪರಿಪೂರ್ಣವಾದ ಅನುಭವವನ್ನು ನೀಡಿದಂತಾಗುತ್ತದೆ ಎಂದು ಫ್ಲಿಪ್ ಕಾರ್ಟ್ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next