ಬೆಂಗಳೂರು: ಇ-ಕಾಮರ್ಸ್ ಮಾರುಕಟ್ಟೆ ಫ್ಲಿಪ್‌ಕಾರ್ಟ್, 0-14 ವಯೋಮಿತಿಯ ಮಕ್ಕಳ ಫ್ಯಾಷನ್ ಬ್ರ್ಯಾಂಡ್ ಹಾಪ್ ಸ್ಕಾಚ್‌ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ.
ಈ ಮೂಲಕ ಫ್ಲಿಪ್‌ಕಾರ್ಟ್ ದೇಶಾದ್ಯಂತ ಹಾಪ್‌ಸ್ಕಾಚ್ ಬ್ರ್ಯಾಂಡ್‌ನ ಮಕ್ಕಳ ಫ್ಯಾಷನ್‌ನ ವಿಸ್ತೃತ ಶ್ರೇಣಿಯನ್ನು ಗ್ರಾಹಕರಿಗೆ ಲಭ್ಯವಾಗಿಸಲಿದೆ.
ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಬ್ರ್ಯಾಂಡೆಡ್ ಕಿಡ್ಸ್ ಫ್ಯಾಶನ್‌ಗಾಗಿ ಶಾಪಿಂಗ್ ಮಾಡುವ ಹೆಚ್ಚಿನ ಗ್ರಾಹಕರು 25 ರಿಂದ 40 ವಯೋಮಾನದವರಾಗಿದ್ದಾರೆ. ಪಾಲುದಾರಿಕೆಯ ಮೂಲಕ, ಫ್ಲಿಪ್‌ಕಾರ್ಟ್ ತನ್ನ ಬ್ರಾಂಡ್ ಪೋರ್ಟ್‌ಫೋಲಿಯೊ ಹೆಚ್ಚಿಸಿದೆ ಮತ್ತು ದೇಶದಾದ್ಯಂತ 400 ಮಿಲಿಯನ್ ಗಿಂತಲೂ ಹೆಚ್ಚು ನೋಂದಾಯಿತ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪ್ರೀಮಿಯಂ ಬ್ರಾಂಡ್ ಉತ್ಪನ್ನಗಳನ್ನು ಲಭ್ಯವಾಗಿಸಲಿದೆ.
ಈ ಹೊಸ ಪಾಲುದಾರಿಕೆ ಕುರಿತು ಮಾತನಾಡಿದ ಫ್ಲಿಪ್ ಕಾರ್ಟ್ ಫ್ಯಾಷನ್‌ನ ಉಪಾಧ್ಯಕ್ಷ ನಿಷಿತ್ ಗಾರ್ಗ್, “ಮಕ್ಕಳ ಫ್ಯಾಷನ್‌ನ ಶಾಪಿಂಗ್ ವಿಷಯಕ್ಕೆ ಬಂದಾಗ, ಪೋಷಕರು ಗುಣಮಟ್ಟದಲ್ಲಿ ರಾಜಿಯಾಗ ಬಯಸುವುದಿಲ್ಲ. ಮತ್ತು ಅವರು ಕೆಲ ಬ್ರ್ಯಾಂಡ್‌ಗಳ ಮೇಲೆ ವಿಶ್ವಾಸವಿರಿಸುತ್ತಾರೆ ಎಂಬುದನ್ನು ನಾವು ಗಮನಿಸಿದ್ದೇವೆ. ಇದು ಕೇವಲ ಮೆಟ್ರೋಪಾಲಿಟನ್ ನಗರಗಳಲ್ಲಷ್ಟೇ ಅಲ್ಲದೆ, ಎರಡನೇ ಹಂತದ ನಗರಗಳಲ್ಲಿಯೂ ಕಂಡುಬಂದಿದೆ. ಫ್ಲಿಪ್‌ಕಾರ್ಟ್ ಮಕ್ಕಳ ಫ್ಯಾಷನ್ ವಲಯದಲ್ಲಿ ಕಳೆದೆರಡು ವರ್ಷಗಳಲ್ಲಿ 3 ಪಟ್ಟು ಪ್ರಗತಿ ಕಂಡಿದ್ದು,ಇದರಲ್ಲಿ ಬಹುತೇಕ ಪ್ರಮಾಣ ಹೊಸ ಗ್ರಾಹಕರದ್ದಾಗಿದೆ. ಹಾಪ್‌ಸ್ಕಾಚ್ ಜೊತೆಗಿನ ಪಾಲುದಾರಿಕೆ ಘೋಷಿಸುವುದರೊಂದಿಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಫ್ಯಾಷನ್ ಉತ್ಪನ್ನಗಳನ್ನು ನೀಡುವುದು ನಮ್ಮ ಗುರಿ” ಎಂದರು.
ಇದನ್ನೂ ಓದಿ:ಒಂದೇ ಚಿತ್ರದಲ್ಲಿ ಅಪ್ಪ-ಮಗಳು: ಲವ್ ಯು ರಚ್ಚು ಚಿತ್ರದಲ್ಲಿ ಅಜೇಯ್ ರಾವ್ ಪುತ್ರಿ ನಟನೆ
ಪಾಲುದಾರಿಕೆ ಕುರಿತು ಮಾತನಾಡಿದ ಹಾಪ್‌ಸ್ಕಾಚ್‌ನ ಸಂಸ್ಥಾಪಕ ಮತ್ತು ಸಿಇಒ ರಾಹುಲ್ ಆನಂದ್, “ಇತ್ತೀಚಿನ ಟ್ರೆಂಡ್‌ಗಳ ಕುರಿತು ಹೆಚ್ಚಿರುವ ಪ್ರಚಾರದಿಂದ, ಭಾರತದಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ನೀಡುವ ಹಣಕ್ಕೆ ಉತ್ತಮ ಮೌಲ್ಯ ನೀಡುವ ಬಟ್ಟೆಗಳ ಖರೀದಿ ಬಯಸುತ್ತಿದ್ದಾರೆ. ಅದರಲ್ಲೂ ಋತುವಿಗೆ ತಕ್ಕ ಬಟ್ಟೆಗಳಿಗೆ ಭಾರಿ ಬೇಡಿಕೆಯಿದೆ, ವಿಶೇಷವಾಗಿ 2 ಮತ್ತು 3ನೇ ಹಂತದ ನಗರಗಳಲ್ಲಿ. ಆದರೆ, ಇಲ್ಲಿಯವರೆಗೆ ಅವರಿಗೆ ಲಭ್ಯತೆ ಕಡಿಮೆಯಿತ್ತು. ಹಾಪ್‌ಸ್ಕಾಚ್ ಈ ಅಂತರವನ್ನು ಕಡಿಮೆ ಮಾಡಲಿದ್ದು, ಫ್ಲಿಪ್‌ಕಾರ್ಟ್‌ನೊಂದಿಗಿನ ನಮ್ಮ ಪಾಲುದಾರಿಕೆ ದೇಶಾದ್ಯಂತದ ಗ್ರಾಹಕರನ್ನು ತಲುಪಲು ನೆರವಾಗಲಿದೆ ಎಂಬ ವಿಶ್ವಾಸವಿದೆ” ಎಂದರು.