Advertisement

ರಾಜ್ಯದಲ್ಲಿ 3 ಹೊಸ ಗೋದಾಮುಗಳನ್ನು ಆರಂಭಿಸಿದೆ ಫ್ಲಿಪ್ ಕಾರ್ಟ್ : 14 ಸಾವಿರ ಉದ್ಯೋಗ ಸೃಷ್ಟಿ

04:48 PM Aug 27, 2021 | |

ಬೆಂಗಳೂರು : ದೇಶದ ಆನ್ ಲೈನ್ ಮಾರುಕಟ್ಟೆ ಸಂಸ್ಥೆ ಫ್ಲಿಪ್ ಕಾರ್ಟ್ ಸಂಸ್ಥೆ ಕರ್ನಾಟಕದಲ್ಲಿ ಹೊಸದಾಗಿ ಮೂರು ವೇರ್ ಹೌಸ್ ಅಥವಾ ಗೋದಾಮುಗಳನ್ನು ಆರಂಭಿಸಿದೆ.

Advertisement

ಫ್ಲಿಪ್ ಕಾರ್ಟ್ ಕಳೆ ಕೋವಿಡ್  ಲಾಕ್ ಡೌನ್ ಸಂದರ್ಭದಾಗಿನಿಂದ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದ್ದು, ಈಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ.

ಇದನ್ನೂ ಓದಿ : ಸೆಪ್ಟೆಂಬರ್ 1 ರಿಂದ ದಿನಕ್ಕೆ 5 ಲಕ್ಷ ಡೋಸ್ ಲಸಿಕೆ ನೀಡಲು ಸಿದ್ಧತೆ : ಬೊಮ್ಮಾಯಿ

ಹೌದು,  ಫ್ಲಿಪ್‌ ಕಾರ್ಟ್‌ ಸಂಸ್ಥೆ ರಾಜ್ಯದ ಹುಬ್ಬಳ್ಳಿ, ಆನೇಕಲ್‌ ಹಾಗೂ ಕೋಲಾರದಲ್ಲಿ ಹೊಸದಾಗಿ ಗೋದಾಮು ಪ್ರಾರಂಭಿಸುತ್ತಿದ್ದು,. ಇವುಗಳು ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತದೆ ಎಂದು ಸಂಸ್ಥೆ ಹತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿನ ವರ್ತಕರು, ಎಂಎಸ್‌ ಎಂಇ ಉದ್ಯಮಗಳಿಗೆ ಇವು ನೆರವಾಗುವುದಲ್ಲದೇ, ಸುಮಾರು 14 ಸಾವಿರ ಉದ್ಯೋಗ ಸೃಷ್ಟಿ ಇವುಗಳಿಂದ ಆಗುತ್ತದೆ ಎಂದು ಫ್ಲಿಪ್‌ ಕಾರ್ಟ್‌ ಮಾಹಿತಿ ನೀಡಿದೆ.

Advertisement

ಈ ಮೂರೂ ಗೋದಾಮುಗಳು ಫರ್ನಿಚರ್, ಮೊಬೈಲ್ ಫೋನ್‌ಗಳು, ಜವಳಿ ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟದಲ್ಲಿ ನೆರವಾಗಲಿವೆ. ಈ ಮೂರೂ ಕೇಂದ್ರಗಳ ಒಟ್ಟು ವಿಸ್ತೀರ್ಣ 7 ಲಕ್ಷ ಚದರ ಅಡಿ. ಇವುಗಳಿಂದಾಗಿ 10,500 ಕ್ಕೂ ಹೆಚ್ಚು ಮಾರಾಟಗಾರರಿಗೆ ನೆರವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ : ರೈತರ ಹೊಲಗಳನ್ನು ನಿಮ್ಮ ಕಾರ್ಪೋರೇಟ್ ಸ್ನೇಹಿತರಿಗೆ ನೀಡಲು ಬಿಡುವುದಿಲ್ಲ : ರಾಹುಲ್ ಕಿಡಿ

Advertisement

Udayavani is now on Telegram. Click here to join our channel and stay updated with the latest news.

Next