ಬೆಂಗಳೂರು: ಪ್ರಸಿದ್ದ ಇ-ಕಾಮರ್ಸ್ ಮಾರುಕಟ್ಟೆ ತಾಣ ಫ್ಲಿಪ್ ಕಾರ್ಟ್ ತನ್ನ ಆ್ಯಪ್ ನಲ್ಲಿ ಫಾಸ್ಟ್ ಟ್ಯಾಗ್, ಡಿಟಿಎಚ್ ರೀಚಾರ್ಜ್, ಲ್ಯಾಂಡ್ ಲೈನ್, ಬ್ರಾಡ್ ಬ್ಯಾಂಡ್ ಮತ್ತು ಮೊಬೈಲ್ ಪೋಸ್ಟ್ ಪೇಯ್ಡ್ ಬಿಲ್ ಗಳನ್ನು ಪಾವತಿ ಮಾಡುವ ಸೌಲಭ್ಯವನ್ನು ಪರಿಚಯಿಸಿದೆ.
ಹಾಲಿ ಇರುವ ವಿದ್ಯುತ್ ಬಿಲ್ ಮತ್ತು ಮೊಬೈಲ್ ಪ್ರೀಪೇಯ್ಡ್ ಸೌಲಭ್ಯಗಳ ಜೊತೆಯಲ್ಲಿ ಈ ಹೊಸ ಬಿಲ್ ಪಾವತಿ ವಿಭಾಗಗಳನ್ನು ಆರಂಭಿಸಿದೆ. ಈ ಉದ್ದೇಶಕ್ಕಾಗಿ ಫ್ಲಿಪ್ ಕಾರ್ಟ್ ಭಾರತದಲ್ಲಿ ಮುಂಚೂಣಿಯಲ್ಲಿರುವ ಪೇಮೆಂಟ್ ಸಲೂಶನ್ಸ್ ಕಂಪನಿಗಳಲ್ಲಿ ಒಂದಾಗಿರುವ ಬಿಲ್ ಡೆಸ್ಕ್ ಜೊತೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ.
ಈ ಮೂಲಕ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿರುವ ಭಾರತ್ ಬಿಲ್ ಪೇಮೆಂಟ್ಸ್ ಸಿಸ್ಟಂ (BBPS) ನೊಂದಿಗೆ ಹೊಸ ಸೇವೆಗಳನ್ನು ಜೋಡಿಸಲಾಗಿದೆ. ಸೀಮಿತ-ಅವಧಿಯ ಡೀಲ್ ನ ಭಾಗವಾಗಿ ಗ್ರಾಹಕರು ಫ್ಲಿಪ್ ಕಾರ್ಟ್ ಯುಪಿಐ ಅನ್ನು ಬಳಸಿಕೊಂಡು ತಮ್ಮ ಸೂಪರ್ ಕಾಯಿನ್ ಗಳೊಂದಿಗೆ ಶೇ.10 ರವರೆಗೆ ರೀಡೀಮ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಹೊಸ ವಿಭಾಗಗಳ ಆರಂಭದೊಂದಿಗೆ ಗ್ರಾಹಕರು ಫ್ಲಿಪ್ ಕಾರ್ಟ್ ನಲ್ಲಿ ಶಾಪಿಂಗ್ ಅನುಭವವನ್ನು ಪಡೆದುಕೊಳ್ಳುವುದರ ಜೊತೆಗೆ ತಮ್ಮ ಬಿಲ್ ಗಳನ್ನು ಪಾವತಿಸಬಹುದು ಮತ್ತು ರೀಚಾರ್ಜ್ ಪೇಮೆಂಟ್ ಗಳನ್ನು ಮಾಡಬಹುದಾಗಿದೆ.
2024 ರಲ್ಲಿ ಭಾರತ್ ಬಿಲ್ ಪೇಮೆಂಟ್ ಸಿಸ್ಟಂ (BBPS) ದೇಶಾದ್ಯಂತ 1.3 ಬಿಲಿಯನ್ ವ್ಯವಹಾರಗಳನ್ನು ನಡೆಸಿದೆ. 2026 ರ ವೇಳೆಗೆ ಈ ಸಂಖ್ಯೆ ವಾರ್ಷಿಕ 3 ಬಿಲಿಯನ್ ಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. 20+ ಬಿಲ್ ವರ್ಗಗಳು ಮತ್ತು 21,000 ಕ್ಕೂ ಅಧಿಕ ಬಿಲ್ಲರ್ ಗಳು ಈ ಬಿಬಿಪಿಎಸ್ ಪರಿಸರ ವ್ಯವಸ್ಥೆಯಲ್ಲಿ ಸಕ್ರಿಯರಾಗಿದ್ದಾರೆ. ಶೇ.70 ಕ್ಕೂ ಅಧಿಕ ಬಿಲ್ ಪೇಮೆಂಟ್ ಗಳನ್ನು ಎಲೆಕ್ಟ್ರಾನಿಕ್ ಮೂಲಕ ಮಾಡಲಾಗುತ್ತಿದೆ. ಹೊಸ ವಿಭಾಗಗಳನ್ನು ಪರಿಚಯಿಸುವ ಮೂಲಕ ಫ್ಲಿಪ್ ಕಾರ್ಟ್ ಗ್ರಾಹಕರು ತಮ್ಮ ಬಿಲ್ ಗಳನ್ನು ಎಲೆಕ್ಟ್ರಾನಿಕ್ ಮೂಲಕ ತಡೆರಹಿತವಾಗಿ ಪಾವತಿ ಮಾಡುವ ಇನ್ನಷ್ಟು ಅವಕಾಶಗಳನ್ನು ಒದಗಿಸಿದಂತಾಗಿದೆ.
ಇತ್ತೀಚೆಗೆ, ಫ್ಲಿಪ್ ಕಾರ್ಟ್ ತನ್ನ ಯುಪಿಐ ಸೇವೆಯನ್ನು ಆರಂಭಿಸಿತ್ತು. ಈ ವ್ಯವಸ್ಥೆಯು ಸೂಪರ್ ಕಾಯಿನ್ಸ್ ಮತ್ತು ಕ್ಯಾಶ್ ಬ್ಯಾಕ್ ಮೂಲಕ ಬಹುಮಾನಗಳನ್ನು ಗಳಿಸುವಾಗ ಗ್ರಾಹಕರಿಗೆ ರೀಚಾರ್ಜ್ ಗಳು ಮತ್ತು ಬಿಲ್ ಪಾವತಿಗಳಿಗೆ ಅರ್ಥಗರ್ಭಿತ, ಸುರಕ್ಷಿತ ಮತ್ತು ಅನುಕೂಲಕರ ಆಯ್ಕೆಗಳನ್ನು ನೀಡುತ್ತದೆ. ಒಂದು ಕ್ಲಿಕ್ ಮತ್ತು ತ್ವರಿತ ಕಾರ್ಯಚಟುವಟಿಕೆಗಳ ಪರಿಚಯದ ಮೂಲಕ ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಅನುಕೂಲಕರವಾದ ಡಿಜಿಟಲ್ ಪಾವತಿ ಅನುಭವವನ್ನು ನೀಡುತ್ತದೆ. ಇಲ್ಲಿ ಅವರು ಫ್ಲಿಪ್ ಕಾರ್ಟ್ ಮಾರುಕಟ್ಟೆಯ ಒಳಗೆ ಮತ್ತು ಹೊರಗೆ ಆನ್ ಲೈನ್ ಮತ್ತು ಆಫ್ ಲೈನ್ ವ್ಯಾಪಾರಿ ವಹಿವಾಟುಗಳಿಗೆ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಬಹುದಾಗಿದೆ.