ಕಾರ್ಯ ಭರದಿಂದ ನಡೆದಿದೆ.
Advertisement
ಈ ಭಾಗದ ಯುವಕರು ವಿಮಾನ ಹಾರಾಟ ತರಬೇತಿಗಾಗಿ ದೂರದ ಬೆಂಗಳೂರು, ಮೈಸೂರು ಇಲ್ಲವೇ ಹೊರ ರಾಜ್ಯಗಳಿಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇತ್ತು. ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಬೆಳಗಾವಿಯಲ್ಲೇ ವಿಮಾನ ಹಾರಾಟ ತರಬೇತಿ ಕೇಂದ್ರ ಆರಂಭ ಮಾಡುವ ಮೂಲಕ ಸಮಸ್ಯೆಯ ಪರಿಹಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
ಬೆಳಗಾವಿಯೂ ಒಂದು ಎಂಬುದು ಗಮನಿಸಬೇಕಾದ ಸಂಗತಿ. ರಾಜ್ಯದಲ್ಲಿ ಬೆಳಗಾವಿ ಹೊರತುಪಡಿಸಿ ಕಲಬುರಗಿ ಹಾಗೂ ಹುಬ್ಬಳ್ಳಿಯಲ್ಲಿ ಸಹ ಇದೇ ರೀತಿಯ ತರಬೇತಿ ಕೇಂದ್ರಗಳು ಆರಂಭವಾಗಲಿವೆ. ಈಗ ಅಂದುಕೊಂಡಂತೆ ಎಲ್ಲ ಕೆಲಸಗಳು ನಿಗದಿಂತ ಅವಧಿಯಲ್ಲಿ ಮುಗಿದರೆ ಬರುವ ಮೇ ತಿಂಗಳೊಳಗೆ ಬೆಳಗಾವಿ ವಿಮಾನ ನಿಲ್ದಾಣದ ಆವರಣದಲ್ಲಿ ವಿಮಾನ ಹಾರಾಟ ತರಬೇತಿ ಕೇಂದ್ರ ತಲೆ ಎತ್ತಲಿದೆ. ಇದು ಪೂರ್ಣಗೊಂಡರೆ ಬೆಳಗಾವಿಯ ಜತೆಗೆ ಸುತ್ತಲಿನ ಜಿಲ್ಲೆಗಳ ಜನರಿಗೂ ಅನುಕೂಲವಾಗಲಿದೆ. ಒಂದು ತಂಡದಲ್ಲಿ 100 ಜನರಿಗೆ ತರಬೇತಿ ಕೊಡಲಾಗುತ್ತದೆ.
ವಿಮಾನ ಹಾರಾಟ ತರಬೇತಿ ಕೇಂದ್ರ ಸ್ಥಾಪನೆಗೆ ಭಾರತೀಯ ವಿಮಾನಯಾನ ಪ್ರಾಧಿಕಾರ ಅನುಮೋದನೆ ಕೊಟ್ಟ ನಂತರ ಅದಕ್ಕೆ ಸಂಬಂಧಪಟ್ಟ ಟೆಂಡರ್ ಮೊದಲಾದ ಪ್ರಕ್ರಿಯೆಗಳು ತ್ವರಿತಗತಿಯಲ್ಲಿ ನಡೆದು ನಿರ್ಮಾಣ ಕಾರ್ಯವೂ ಭರದಿಂದ ನಡೆದಿದೆ. ಇನ್ನೊಂದೆರಡು ತಿಂಗಳಲ್ಲಿ ಸಂಪೂರ್ಣ ಸಿದ್ಧಗೊಳ್ಳಲಿರುವ ಕೇಂದ್ರವು ಪೈಲಟ್ ಹಾಗೂ ಸಹಾಯಕ ಸಿಬ್ಬಂದಿ
ಅಣಿಗೊಳಿಸಲು ನೆರವಾಗಲಿದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವವರಿಗೆ ವಾಣಿಜ್ಯ ವಿಮಾನ ಪರವಾನಗಿ (ಸಿಪಿಎಲ್) ಸಿಗಲಿದೆ ಎಂಬುದು ವಿಮಾನಯಾನ ಪ್ರಾಧಿಕಾರ ಅಧಿಕಾರಿಗಳ ಹೇಳಿಕೆ.
Related Articles
ಮೀಟರ್ ಜಾಗವನ್ನು 25 ವರ್ಷಗಳ ಲೀಸ್ ಆಧಾರದ ಮೇಲೆ ಪಾರ್ಕಿಂಗ್ ಸ್ಥಳವನ್ನು ನಿರ್ಮಿಸಲು ನೀಡಲಾಗಿದೆ. ಎಲ್ಲವೂ ನಿರೀಕ್ಷೆಯಂತೆ ನಡೆದು ಕಾಮಗಾರಿ ಪೂರ್ಣಗೊಂಡ ಮೇಲೆ ವಿಮಾನ ಹಾರಿಸುವ ಕನಸಿಗೆ ರೆಕ್ಕೆ ಬರಲಿದೆ. ಈ ಮೂಲಕ ಯುವಕ-ಯುವತಿಯರ ಬಹು ದಿನಗಳ ಕನಸು ಸಾಕಾರಗೊಳ್ಳಲಿದೆ. ಅಷ್ಟೇ ಅಲ್ಲ ಬೆಳಗಾವಿಯ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯದ ಆರಂಭಕ್ಕೆ ಇದೂ ಸಹ ನೆರವಾಗಲಿದೆ.
Advertisement
ರನ್ ವೇಯಿಂದ ಹ್ಯಾಂಗರ್ ಮತ್ತು ಏಪ್ರಾನ್ ಗಳನ್ನು ಜೋಡಿಸುವ 247 ಮೀಟರ್ ವ್ಯಾಪ್ತಿಯ ಟ್ಯಾಕ್ಸಿ ವೇ ನಿರ್ಮಾಣವನ್ನು ಸಹ ಪ್ರಾಧಿಕಾರ ಕೈಗೊಂಡಿದೆ. ತರಬೇತಿ ಕೇಂದ್ರ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ತರಬೇತಿಯ ಗುತ್ತಿಗೆ ಪಡೆದಿರುವ ಕಂಪನಿಗಳು ತಲಾ 50 ವಿದ್ಯಾರ್ಥಿಗಳಂತೆ ಏಕಕಾಲಕ್ಕೆ ಒಟ್ಟು 100 ವಿದ್ಯಾರ್ಥಿಗಳಿಗೆ ಒಂದು ವರ್ಷದ ವಿಮಾನ ಹಾರಾಟತರಬೇತಿ ನೀಡಲಿವೆ. ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಪಾಸಾದವರು ಈ ತರಬೇತಿ ಪಡೆಯಲು ಅರ್ಹತೆ ಹೊಂದಿರುತ್ತಾರೆ. – ಕೇಶವ ಆದಿ