ಬೆಂಗಳೂರು: ಕೊರೊನಾ ಜಗತ್ತಿನಾದ್ಯಂತ ಆತಂಕದ ಜೊತೆಗೆ ಅಚ್ಚರಿಗಳನ್ನೂ ಸೃಷ್ಟಿಸುತ್ತಿದೆ. ಈಗ ಅಂತಹ ಅಚ್ಚರಿಗಳಲ್ಲಿ, ದುಬೈನಿಂದ ರಾಜ್ಯಕ್ಕೆ ಆಗಮಿಸುವವರಲ್ಲಿ ಗರ್ಭಿಣಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ. ಕೊರೊನಾ ಲಾಕ್‌ಡೌಹಿನ್ನೆಲೆಯಲ್ಲಿ ವಿಶ್ವಾದ್ಯಂತ ಅಂತಾರಾಷ್ಟ್ರೀಯ ವಿಮಾನ ಯಾನ ರದ್ದುಪಡಿಸಿದ್ದರಿಂದಲಕ್ಷಾಂತರ ಕನ್ನಡಿಗರು ವಿದೇಶದಳಲ್ಲಿಯೇ ಸಿಲುಕಿ ಕೊಳ್ಳುವಂತಾಗಿತ್ತು.
ಈಗ ಅನಿವಾಸಿ ಕನ್ನಡಿಗರಿಗೆ ರಾಜ್ಯಕ್ಕೆ ವಾಪಸ್ ಆಗಲು ಹಾಗೂ ಕೇಂದ್ರ ಸರ್ಕಾರಗಳು ವಿಶೇಷ ವಿಮಾ®ಸೇವೆ ಆರಂಭಿಸಿದ್ದು, ಈಗಾಗಲೇ ಲಂಡನ್ ನಿಂದ ಮೊದಲ ವಿಮಾನ ಬೆಂಗಳೂರಿಗೆ ಆಗಮಿಸಿದ್ದು, ದುಬೈನಿಂದ ಮಂಗಳವಾರ ಸಂಜೆ ( ಮೇ 12) ಮಂಗಳೂರಿಗೆ ಮೊದಲ ವಿಮಾನ ಬರಲಿದೆ. ಈ ವಿಮಾನದ ವಿಶೇಷ ಏನೆಂದರೆ ರಾಜ್ಯಕ್ಕೆ ಬರುತ್ತಿರುವ 177 ಪ್ರಯಾಣಿಕರಲ್ಲಿ 30 ಜನ ಗರ್ಭಿಣಿಯರಿದ್ದಾರೆ.
ಹೆಚ್ಚಿದ ಗರ್ಭಿಣಿಯರು: ಕೇಂದ್ರ ಸರ್ಕಾರ ಅನಿವಾಸಿ ಕನ್ನಡಿಗರನ್ನು ಕರೆತರಲು ವಿಶೇಷ ವಿಮಾನ ಏರ್ಪಾಡು ಮಾಡುತ್ತಿದ್ದಂತೆ ವಾಪಸ್ ಬರಲು ದುಬೈ ರಾಯಭಾರಿ ಕಚೇರಿಯಲ್ಲಿಹೆಸರು ನೋಂದಾಯಿಸಿ ಕೊಳ್ಳುವವರಲ್ಲಿ ಗರ್ಭಿಣಿಯರ ಸಂಖ್ಯೆಯೇ ಹೆಚ್ಚಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ರಾಜ್ಯಕ್ಕೆ ಆಗಮಿಸಲು ಬಯಸಿ ಹೆಸರು ನೋಂದಾಯಿಸಿ ದವರಲ್ಲಿ 148 ಜನ ಗರ್ಭಿಣಿಯರಿದ್ದಾರೆ. ಎಲ್ಲರೂ ಮೊದಲ ವಿಮಾನದಲ್ಲಿಯೇ ಹಾರಿ ದೇಶಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ.
ಗೊಂದಲ ಸೃಷ್ಟಿಸಿದ ನೋಂದಣಿ: ಬಹುತೇಕ ಮಹಿಳೆಯರು ಹೇಗಾದರೂ ಮಾಡಿ ವಾಪಸ್ ದೇಶ ಸೇರಬೇಕು ಎನ್ನುವ ಕಾರಣಕ್ಕೆ ತಾವು ಗರ್ಭಿಣಿಯರು ಎಂದು ನಮೂದಿಸಿದ್ದಾರೆಎನ್ನಲಾಗಿದ್ದು, ಇದರಿಂದ ಗೊಂದಲಕ್ಕೆ ಸಿಲುಕಿರುವ ಭಾರತೀಯ ರಾಯಭಾರ ಕಚೇರಿ ಗರ್ಭಿಣಿಯಾಗಿರುವ ಬಗ್ಗೆ ಕಡ್ಡಾಯವಾಗಿ ವೈದ್ಯರ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವರು ಗರ್ಭಿಣಿಯಾಗಿ ಹದಿನೈದು ದಿನ, ತಿಂಗಳು ಎಂದು ಹೇಳಿ ಮೊದಲ ವಿಮಾನದಲ್ಲಿಯೇ ದೇಶ ಸೇರಲು ಪ್ರಯತ್ನಿಸುತ್ತಿದ್ದು, ಕನಿಷ್ಠ 5 ತಿಂಗಳು ಆದವರಿಗೆ ಮೊದಲ ಆದ್ಯತೆ ನೀಡಲು ರಾಯಭಾರ ಕಚೇರಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ರಾಜ್ಯಕ್ಕೆ ವಾಪಸ್ ಆಗುತ್ತಿರುವ ದುಬೈನಲ್ಲಿರುವ ಕನ್ನಡಿಗರಲ್ಲಿ ಗರ್ಭಿಣಿಯರು ಪ್ರಯಾಣ ಮಾಡುತ್ತಿದ್ದಾರೆ. ಅವರ ಸುರಕ್ಷತೆಗೆ ಕನ್ನಡಿಗರು ಹೆಲ್ಪ್ಲೈನ್ ವತಿಯಿಂದ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ.
-ನವೀದ್ ಮಾಗುಂಡಿ, ದುಬೈನ ಅನಿವಾಸಿ ಕನ್ನಡಿಗರ ಅಧ್ಯಕ್ಷ
ಗರ್ಭಿಣಿಯರಿಗೆ ಬಿಪಿ, ಶುಗರ್ ಇಲ್ಲದವರಿಗೆ ಪ್ರಯಾಣಕ್ಕೆ ತೊಂದರೆಯಿಲ್ಲ. ಆದರೆ, ವಿಮಾನ ಲ್ಯಾಂಡ್ ಆಗುವಾಗ ಸ್ವಲ್ಪ ಜರ್ಕ್ ಆದಾಗ ಸಮಸ್ಯೆಯಾಗುತ್ತದೆ. ಅಂತ ಸಮಯದಲ್ಲಿ ಗರ್ಭಿಣಿಯರು ಸೀಟ್‌ಬೆಲ್ಟನ್ನು ಸಡಿಲ ಗೊಳಿಸಬೇಕು. ಅವರು ಕಾಲು ಅಲುಗಾಡಿಸುತ್ತಿ ರಬೇಕು. ಹೈ ರಿಸ್ಟ್ ಗರ್ಭಿಣಿಯರಾಗಿದ್ದಾರೆ. ಅವರು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ ಮೆಡಿಕೇಶನ್ ಬಳಿಕ ಪ್ರಯಾಣಿಸಬೇಕು.
-ಡಾ. ಶಾಂತಿ, ದುಬಾಯ್ ಆಸ್ಟ್ರ್ ಮೆಡಿಕಲ್ ಆಸ್ಪತ್ರೆ ತಜ್ಞೆ
* ಶಂಕರ ಪಾಗೋಜಿ