ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿರುವ ಭಾರತೀಯ ವಾಯುಪಡೆಯ (ಐಎಎಫ್) ಎಎನ್-32 ವಿಮಾನ ಪತನವಾಗುವುದಕ್ಕೆ ಮುನ್ನ ಪರ್ವತಕ್ಕೆ ಅಪ್ಪಳಿಸಿರಬೇಕು ಎಂದು ಊಹಿ ಸಲಾಗಿದೆ. ಆ ಪ್ರದೇಶದಲ್ಲಿ ಮರಗಳು, ಭೂಪ್ರದೇಶ ಸುಟ್ಟು ಹೋಗಿರುವುದು ಈ ಅಂಶವನ್ನು ಪುಷ್ಟೀಕರಿಸುತ್ತದೆ ಎಂದು ಐಎಎಫ್ ಹೇಳಿದೆ. ಮಂಗಳವಾರವಷ್ಟೇ ವಿಮಾನ ಅವಶೇಷಗಳು ಪತ್ತೆಯಾಗಿದ್ದವು. ಇದೇ ವೇಳೆ ಪ್ರತಿಕೂಲ ಹವಾಮಾನ, ಧಾರಾಕಾರ ಮಳೆಯಿಂದಾಗಿ ಶೋಧ ಕಾರ್ಯವನ್ನು ಸ್ಧಗಿತಗೊಳಿಸಿ, ಅದಕ್ಕಾಗಿ ತೆರಳಿದ್ದ 15 ಮಂದಿಯ ತಂಡವನ್ನು ಪರ್ವತ ಪ್ರದೇಶದಿಂದ ಕರೆತರಲಾಗಿದೆ. ಗುರುವಾರ ಮತ್ತೆ ಸ್ಥಳಕ್ಕೆ ತಂಡ ತೆರಳಲಿದೆ. ಸ್ಥಳೀಯ ಚಾರಣಿಗರು, ಎವರೆಸ್ಟ್ ಏರುವ ತಂಡದ ಸದಸ್ಯರು ತಂಡದಲ್ಲಿದ್ದರು.
Advertisement
ಪರ್ವತಕ್ಕೆ ಅಪ್ಪಳಿಸಿತ್ತೇ ವಿಮಾನ?
02:09 AM Jun 13, 2019 | Sriram |
Advertisement
Udayavani is now on Telegram. Click here to join our channel and stay updated with the latest news.