Advertisement

Flight: ಜುಲೈ 15ರಿಂದ ಹುಬ್ಬಳ್ಳಿ-ಮುಂಬೈ ನಡುವೆ ವಿಮಾನಯಾನ ಪುನರಾರಂಭ

07:41 PM Jun 19, 2024 | Team Udayavani |

ಹುಬ್ಬಳ್ಳಿ: ಹುಬ್ಬಳ್ಳಿ-ಮುಂಬೈ ನಡುವೆ ನಿತ್ಯ ವಿಮಾನಯಾನ ಸೇವೆ ಜುಲೈ 15 ರಿಂದ ಪುನರರಾಂಭಗೊಳ್ಳಲಿದೆ. ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ವಿಮಾನ ಸಂಚಾರ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

Advertisement

ವಿಮಾನ ಸಂಖ್ಯೆ 6ಇ 736 ಮುಂಬೈ -ಹುಬ್ಬಳ್ಳಿ ವಿಮಾನ ನಿತ್ಯ ಮಧ್ಯಾಹ್ನ 3:00 ಗಂಟೆಗೆ ಹೊರಟಲಿದ್ದು 4:10 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.

ಅದೇ ದಿನ ವಿಮಾನ 6ಇ 737 ವಿಮಾನ ಹುಬ್ಬಳ್ಳಿಯಿಂದ ಮಧ್ಯಾಹ್ನ 4:40ಕ್ಕೆ ಹೊರಟು, 5:50 ಗಂಟೆಗೆ ಮುಂಬೈ ತಲುಪಲಿದೆ.

ತಮ್ಮ ಪ್ರಸ್ತಾವನೆ ಮೇರೆಗೆ ಇಂಡಿಗೋ ಸಂಸ್ಥೆ ಯ ನಿರ್ವಹಣಾ ಸಮಿತಿ ವಿಮಾನ ಸೇವೆ ಪುನರರಾಂಭಕ್ಕೆ ಮುಂದಾಗಿದೆ. ಈ ಭಾಗದ ವ್ಯಾಪಾರ- ವಹಿವಾಟು ಅಭಿವೃದ್ಧಿ ಗೆ ಸಹಕಾರಿ‌ ಆಗಲಿದೆ ಎಂದು ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ: ಜೂ.25 ರೊಳಗೆ ಕಬ್ಬು ಬೆಳೆಗಾರರ ಬಾಕಿ ಬಿಲ್ ಬಡ್ಡಿ ಸಮೇತ ಪಾವತಿಸಿ: ಜಿಲ್ಲಾಧಿಕಾರಿ ಆದೇಶ

Advertisement
Advertisement

Udayavani is now on Telegram. Click here to join our channel and stay updated with the latest news.

Next