ಬೆಳಗಾವಿ: ಕೋವಿಡ್-19 ವೈರಸ್ ಕಾರಣದಿಂದ ದೇಶದ ಎಲ್ಲ ಕಡೆ ಲಾಕ್ ಡೌನ್ ಇದ್ದರೂ ಸಹ ತುರ್ತು ಸಂದರ್ಭದಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಮಂಗಳವಾರ ವಿಮಾನ ಆಗಮಿಸಿತ್ತು.
ಸೂರತ್ ನಿಂದ ಬೆಳಗಾವಿಗೆ ಬಂದಿಳಿದ ಏರ್ ಅ್ಯಂಬುಲನ್ಸ್ ವಿಮಾನದಲ್ಲಿ ಆಗತಾನೆ ಜನನಿಸಿದ ಮಗುವನ್ನು ಚಿಕಿತ್ಸೆಗೆಂದು ಬೆಳಗಾವಿಗೆ ತರಲಾಗಿದೆ.
ವಿಶೇಷ ವಿಮಾನ ಮೂಲಕ ಸೂರತ್ ನಿಂದ ಪುಟ್ಟ ಮಗು ಜೊತೆಗೆ ವೈದ್ಯರ ತಂಡ ಆಗಮಿಸಿದೆ. ಆಗತಾನೆ ಜನಿಸಿದ ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಕಂಡು ಹಿನ್ನೆಲೆ ಈ ಮಗುವನ್ನು ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ತರಲಾಗಿದೆ.
ಸೂರತ್ ನಿಂದ ಬೆಳಗಾವಿಗೆ ಬಂದಿರುವ ಈ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತುರ್ತು ಸಂದರ್ಭಗಳಲ್ಲಿ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಸೂರತ್ ದಿಂದ ಬಂದಿದ್ದ ಏರ್ ಅ್ಯಂಬುಲನ್ಸ್ ಬುಧವಾರ ಬೆಳಿಗ್ಗೆ ಮುಂಬೈಗೆ ಪ್ರಯಾಣ ಬೆಳಸಿತು ಎಂದು ಬೆಳಗಾವಿ ವಿಮಾನ ನಿಲ್ದಾಣ ನಿರ್ದೇಶಕ ರಾಜೇಶ ಕುಮಾರ ಮೌರ್ಯ ತಿಳಿಸಿದರು.