Advertisement

ಮನೆಗೆ ಅಪ್ಪಳಿಸಿತು ವಿಮಾನ

10:48 AM Jun 07, 2019 | Vishnu Das |

ಅಮೆರಿಕದ ಡನ್ಬರಿಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿದ ಅಥವಾ ಬಾಂಬ್‌ ಸ್ಫೋಟಿಸಿದ ಶಬ್ದ ಕೇಳಿತು. ಸುತ್ತಲಿನ ಪ್ರದೇಶದವರು ಹೊರಬಂದು ನೋಡಲು ಧೈರ್ಯ ಸಾಲದೆ. ಹೊರಗೆ ಏನಾಗುತ್ತಿದೆ ಎಂದು ತಿಳಿಯದೇ ಆತಂಕಕ್ಕೀಡಾಗಿದ್ದರು. ಕೆಲವರು ಧೈರ್ಯಮಾಡಿ ಮನೆಯ ಬಾಲ್ಕನಿಗೆ ಬಂದು ನೋಡಿದಾಗ ಎಲ್ಲವೂ ಸರಿಯಿದೆ ಎಂದು ಕಂಡುಬಂದಿದೆ. ಬಳಿಕವಷ್ಟೇ ತಿಳಿದಿದ್ದು ಚಿಕ್ಕ ವಿಮಾನವೊಂದು ಅಲ್ಲಿಯ ಮನೆಯೊಂದರ ಮೇಲೆ ಅಪ್ಪಳಿಸಿದೆ. ಅದೃಷ್ಟವಶಾತ್‌ ಪೈಲಟ್‌ಗೆ ಚಿಕ್ಕ ಪುಟ್ಟ ಗಾಯಗೊಂಡಿದ್ದಾರೆ. ಈ ಘಟನೆ ನಡೆದ ವೇಳೆ ಆ ಮನೆಯಲ್ಲಿ ಮೂರು ಜನರಿದ್ದರು. ಅವರೂ ಸುರಕ್ಷಿತರಾಗಿ ಪಾರಾಗಿದ್ದಾರೆ. ವಿಮಾನ ಮನೆಗೆ ಕಚ್ಚಿಕೊಂಡೇ ನಿಂತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next