Advertisement

100 ಪ್ರಯಾಣಿಕರಿದ್ದ ವಿಮಾನ ಪತನ: ಏರುತ್ತಿರುವ ಸಾವಿನ ಸಂಖ್ಯೆ

09:54 AM Dec 28, 2019 | keerthan |

ಕಜಕಿಸ್ಥಾನ: 95 ಮಂದಿ ಪ್ರಯಾಣಿಕರು ಮತ್ತು ಐವರು ಸಿಬ್ಬಂದಿಗಳಿದ್ದ ವಿಮಾನವೊಂದು ಪತನವಾದ ಘಟನೆ ಕಜಕಿಸ್ಥಾನದಲ್ಲಿ ಶುಕ್ರವಾರ ನಡೆದಿದೆ.

Advertisement

ಕಜಕಿಸ್ಥಾನದ ರಾಜಧಾನಿ ನೂರ್ ಸುಲ್ತಾನ್ ಗೆ ಹೊರಟಿದ್ದ ವಿಮಾನ ಪತನವಾಗಿದೆ. ಟೇಕ್ ಆಫ್ ಆದ ವಿಮಾನದ ಸಂಪರ್ಕ ನಂತರ ಕಡಿತವಾಗಿತ್ತು. ಟೇಕ್ ಆಫ್ ಆಗುವ ವೇಳೆ ಕಟ್ಟಡಕ್ಕೆ ಡಿಕ್ಕಿ ಹೊಡೆದು ವಿಮಾನ ಪತನವಾಗಿದೆ.

ಅಲ್ಮಾಟಿ ವಿಮಾನ ನಿಲ್ದಾಣದ ಸಮೀಪ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಇದುವರೆಗೆ ಇದುವರೆಗೆ ಒಂಬತ್ತು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಪತನವಾಗಿರುವ ವಿಮಾನ ಕಜಕ್ ಕ್ಯಾರಿಯರ್ ಬೆಕ್ ಏರ್ ನಿರ್ವಹಿಸುವ ಫ್ಲೀಟ್ ಫೋಕರ್ 100 ಸರಣಿಗೆ ಸೇರಿದ್ದಾಗಿದೆ. ಈ ಮಾದರಿಯ ಎಲ್ಲಾ ವಿಮಾನಗಳ ಹಾರಾಟವನ್ನು ತಕ್ಷಣ ನಿಲ್ಲಿಸುವಂತೆ ವಿಮಾನಯಾನ ಸಂಸ್ಥೆ ಆದೇಶಿಸಿದೆ.

ಈ ಅವಘಡಕ್ಕೆ ಕಾರಣರಾದ ಯಾರೇ ಆದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಜಕಿಸ್ಥಾನದ ಅಧ್ಯಕ್ಷ ಕಸ್ಯಾಮ್ ಜೋಮಾರ್ಟ್ ಟೋಕಾಯೆವ್ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next