ಹೊಸದಿಲ್ಲಿ: ಗಣರಾಜ್ಯೋತ್ಸವ ಸಿದ್ಧತೆ ಮತ್ತು ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಜ.19ರಿಂದ 26ರ ವರೆಗೆ ಬೆಳಗ್ಗೆ 10.20ರಿಂದ ಮಧ್ಯಾಹ್ನ 12.45ರ ವರೆಗೆ ದಿಲ್ಲಿ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನದ ಆಗಮನ ಅಥವಾ ನಿರ್ಗಮನ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಹಾರಾಟ ನಿಷೇಧ ಸಂಬಂಧ ಭಾರ ತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ನೋಟಿಸ್ ಹೊರಡಿಸಿದೆ. ಈ ಅವಧಿಯಲ್ಲಿ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಪ್ರಯಾಣಿಕ ವಿಮಾನಗಳು, ಚಾರ್ಟರ್ಡ್ ವಿಮಾನಗಳ ಹಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಡ್ರೋನ್ ಹಾರಾಟ ನಿಷೇಧ: ದಿಲ್ಲಿಯಾದ್ಯಂತ ಜ.18ರಿಂದ ಫೆ.15ರ ವರೆಗೆ ಡ್ರೋನ್‌ಗಳು, ಮಾನವ ರಹಿತ ವೈಮಾನಿಕ ವಾಹನಗಳು(ಯುಎವಿ), ಪ್ಯಾರಾ ಗ್ಲೈಡರ್‌ಗಳು, ಮೈಕ್ರೋಲೈಟ್ ವಿಮಾನಗಳು, ಕ್ವಾಡ್‌ಕಾಪ್ಟರ್‌ಗಳು ಮತ್ತು ಬಿಸಿ ಗಾಳಿಯ ಬಲೂನ್‌ಗಳ ಹಾರಾಟವನ್ನು ನಿಷೇಧಿಸಲಾಗಿದೆ.
ಐಎಎಫ್ ತುಕಡಿಗೆ ರಶ್ಮಿ ಠಾಕೂರ್ ಸಾರಥ್ಯ: ದಿಲ್ಲಿಯ ಕರ್ತವ್ಯ ಪಥದಲ್ಲಿ ನಡೆ ಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಾಯು ಪಡೆಯ(ಐಎಎಫ್) ತುಕಡಿಯನ್ನು ಸ್ಕಾಡ್ರನ್ ಲೀಡರ್ ರಶ್ಮಿ ಠಾಕೂರ್ ಮುನ್ನಡೆಸಲಿದ್ದಾರೆ. ವೈಮಾನಿಕ ಪ್ರದರ್ಶನ ಕೈಗೊಳ್ಳುವ ಐಎಎಫ್ ತಂಡದಲ್ಲಿ 15 ಮಹಿಳಾ ಪೈಲಟ್‌ಗಳು ಇರಲಿದ್ದಾರೆ.
ವಿವಿಧ ರಾಜ್ಯಗಳ ಸೀರೆಗಳ ಪ್ರದರ್ಶನ: ದಿಲ್ಲಿಯ ಕರ್ತವ್ಯ ಪಥದಲ್ಲಿ ಈ ಬಾರಿ ವಿಶೇಷವಾಗಿ ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇಯ್ದಿರುವ ಸೀರೆಗಳ ಪ್ರದರ್ಶನ ಏರ್ಪಡಿಸಲಾಗಿದೆ. ಈ ಪ್ರದರ್ಶನ “ಅನಂತ ಸೂತ್ರ’ ಹೆಸರಿನಲ್ಲಿ ನಡೆಯಲಿದೆ.